ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಅತಿಹೆಚ್ಚಾಗಿ ಬಳಕೆಯನ್ನು ಮಾಡುತ್ತಾರೆ. ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಆಫರ್‌ಗಳ ಸುರಿಮಳೆಗಳನೇ ನೀಡುತ್ತಿರುತ್ತಲೇ ಇರುತ್ತವೆ. ನೀವು ಕ್ರೆಡಿಟ್ ಕಾರ್ಡ್ ಬಳಸಿದಷ್ಟು ಆಫರ್ ಗಳು ಸಿಗುತ್ತವೆ. ಕ್ರೆಡಿಟ್ ಕಾರ್ಡ್ ಎಲ್ಲದಕ್ಕೂ ಬಳಕೆಯಾಗುತ್ತಲೇ ಇರುತ್ತದೆ. ಕ್ರೆಡಿಟ್ ಕಾರ್ಡ್ ಶಾಪಿಂಗ್ ನಿಂದ ಇಡೀದು ಮನೆಯ ಬಾಡಿಕೆಯನ್ನು ಕಟ್ಟುವರೆಗೂ ನಾವು ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮಾಡಿಕೊಳ್ಳಬಹುದು. ಹಾಗಿದ್ದರೆ ನಾವಿಂದು ತಿಂಗಳು ತಿಂಗಳು ಕಟ್ಟಬೇಕಾದ ಬಾಡಿಗೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಕಟ್ಟಿದರೆ ಏನಾದ್ರೂ ಲಾಭ ಇದೆಯಾ? ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಕಟ್ಟೋದು ಒಳ್ಳೇದಾ? ಕೆಟ್ಟದ್ದಾ?
ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಕಟ್ಟೋ ಮುನ್ನ, ಅದರ ಅನುಕೂಲ-ಅನಾನುಕೂಲಗಳನ್ನು ತಿಳಿದುಕೊಳ್ಳಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಮೊದಲು ಕ್ರೆಡಿಟ್ ಕಾರ್ಡ್‌ನ ನಿಯಮ ಮತ್ತು ಷರತ್ತುಗಳನ್ನು ತಿಳಿದುಕೊಂಡು ಅರ್ಥಮಾಡಿಕೊರ್ಳಳಬೇಕಾಗುತ್ತದೆ. ಯಾಕೆಂದರೆ ಪ್ರತಿ ಕ್ರೆಡಿಟ್ ಕಾರ್ಡ್ ಬೇರೆ ಬೇರೆ ನಿಯಮಗಳು ಇರುತ್ತೇವೆ.ಇದನ್ನು ನೀವುಬಾಡಿಗೆ ಕಟ್ಟುವ ಮುನ್ನ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ.
ಆದರೆ ಕೆಲವೊಂದು ಕ್ರೆಡಿಟ್ ಕಾರ್ಡ್‌ಗಳು ಬಾಡಿಗೆ ಕಟ್ಟಿದರೆ ಸರ್ವಿಸ್ ಚಾರ್ಜ್ (Service Charge) ಹಾಕುತ್ತವೆ. ಉದಾಹರಣೆಗೆ, ತಿಂಗಳ ಬಾಡಿಗೆ 20,000 ರೂಪಾಯಿ ಇದ್ದರೆ, ಶೇಕಡಾ 1 ರಿಂದ 2.5 ರಷ್ಟು, ಅಂದ್ರೆ 200 ರಿಂದ 500 ರೂಪಾಯಿ ವರೆಗೆ ಜಾಸ್ತಿ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್‌ನಿಂದ ಬಾಡಿಗೆ ಕಟ್ಟಿದರೆ ಕ್ಯಾಶ್‌ಬ್ಯಾಕ್ (Cashback) ಅಥವಾ ರಿವಾರ್ಡ್ ಪಾಯಿಂಟ್ಸ್ (Reward points) ಸಿಕ್ಕರೆ ಲಾಭ. ಆದ್ರೆ, ಇತ್ತೀಚಿಗೆ ಅನೇಕ ಬ್ಯಾಂಕುಗಳು ಈ ರೀತಿಗೆ ನೀಡುವುದನ್ನು ನಿಲ್ಲಿಸಿವೆ ಅಂತ ತಜ್ಞರು ಹೇಳ್ತಾರೆ. ಹಾಗಾಗಿ, ಎಚ್ಚರಿಕೆಯಿಂದ ನೀವು ಇರಬೇಕಾಗುತ್ತದೆ.
ಇನ್ನು ಕೆಲವು ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್‌ನಿಂದ ಬಾಡಿಗೆ ಕಟ್ಟೋದನ್ನ 'ಕ್ವಾಸಿ-ನಗದು' (Quasi-Cash) ಅಂತ ಪರಿಗಣಿಸುತ್ತವೆ. ಅಂದ್ರೆ ಕ್ರೆಡಿಟ್ ಕಾರ್ಡ್‌ನಿಂದ ಹಣ ತೆಗೆದಂತೆ. ಈ ರೀತಿ ಮಾಡಿದರೆ ರಿವಾರ್ಡ್ ಪಾಯಿಂಟ್ಸ್ ಸಿಗಲ್ಲ. ಅದರ ಜೊತೆಗೆ ಚಾರ್ಜ್ ಮತ್ತು ಬಡ್ಡಿ ಬೀಳಬಹುದು, ಬಿಲ್ ಕಟ್ಟದಿದ್ದರೆ ದಂಡವೂ ಸಹ ಬೀಳುತ್ತದೆ.
ಕ್ರೆಡಿಟ್ ಕಾರ್ಡ್‌ನಿಂದ ಬಾಡಿಗೆ ಕಟ್ಟಿದರೆ, 30 ರಿಂದ 45 ದಿನಗಳವರೆಗೆ ಬಡ್ಡಿ ಕಟ್ಟುವಂತಹ ಅವಧಿ ಇರಲ್ಲ. ಆ ಸಮಯದಲ್ಲಿ ಬಾಡಿಗೆಯ ಹಣವನ್ನು ಬೇರೆ ಕೆಲಸಕ್ಕೆ ಬಳಸಬಹುದು. ಆದ್ರೆ, ಕ್ರೆಡಿಟ್ ಕಾರ್ಡ್ ಬಿಲ್ ಸಮಯಕ್ಕೆ ಸರಿಯಾಗಿ ಕಟ್ಟಬೇಕು, ತಪ್ಪಿದ್ರೆ ಬಡ್ಡಿ ಮತ್ತು ದಂಡ ಎರಡು ಸೇರಿ ಕಟ್ಟಬೇಕಾಗುತ್ತದೆ.
ನೀವಿನಾದರೂ ಸರಿಯಾದ ಸಮಯಕ್ಕೆ ಬಿಲ್ ಕಟ್ಟಿದರೆ, ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿರುತ್ತೆ. ಆದ್ರೆ, ಜಾಸ್ತಿ ಖರ್ಚು ಮಾಡಿದರೆ ಸ್ಕೋರ್ ಕೂಡ ಕಡಿಮೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಕಟ್ಟಲು ಸಾಧ್ಯವಾದರೆ ಮತ್ತು ಬೇರೆ ಚಾರ್ಜ್‌ಗಳು ತೊಂದರೆ ಕೊಡದಿದ್ದರೆ, ಬಾಡಿಗೆ ಕಟ್ಟಲು ಕ್ರೆಡಿಟ್ ಕಾರ್ಡ್ ಬಳಸಬಹುದು ಅಂತ ತಜ್ಞರು ಹೇಳಿದ್ದಾರೆ. ನೀವು ಯಾವುದೇ ಉಪಯೋಗ ಇಲ್ಲದಿದ್ದರೆ, ನೇರವಾಗಿ ಬ್ಯಾಂಕ್‌ಗೆ ಹಣ ಹಾಕುವುದು ಅಥವಾ ಚೆಕ್ ಕೊಡುವುದು ಕೂಡ ನಿಮ್ಮಗೆ ಒಳಿತು ಆಗುತ್ತದೆ.
ಮೊದಲು, ಕ್ರೆಡಿಟ್ ಕಾರ್ಡ್‌ನಿಂದ ಬಾಡಿಗೆ ಕಟ್ಟುವ ಎಲ್ಲವನ್ನೂ ಯೋಚಿಸಬೇಕು. ಸಮಯಕ್ಕೆ ಸರಿಯಾಗಿ ಬಿಲ್ ಕಟ್ಟಲು ಆಗದಿದ್ದರೆ, ಕ್ರೆಡಿಟ್ ಕಾರ್ಡ್ ಬಳಸುವುದು ಬೇಡವೇ ಬೇಡ.


Click it and Unblock the Notifications