ಮನೆಯನ್ನು ಖರೀದಿ ಮಾಡುವುದು ಪ್ರತಿ ಕುಟುಂಬದ ಒಂದು ಮಹತ್ತರ ಕನಸಾಗಿದೆ. ಪೇಪರ್ ವರ್ಕ್‌ನಿಂದ ಹಿಡಿದು, ಎಲ್ಲ ಪ್ರಕ್ರಿಯೆಯು ಅತೀ ದೀರ್ಘವಾದುದ್ದು ಮತ್ತು ಹಲವಾರು ಪ್ರಕ್ರಿಯೆಗಳನ್ನು ಹೊಂದಿದೆ. ಆದರೆ ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಯಾಗುತ್ತದೆ. ವಸತಿ ಆಸ್ತಿಯನ್ನು ಆಯ್ಕೆ ಮಾಡಿದ ಬಳಿಕ ಆಸ್ತಿಯನ್ನು ನೀವು ರಿಜಿಸ್ಟ್ರೇಷನ್ ಮಾಡುವುದು ಅತೀ ಮುಖ್ಯವಾಗುತ್ತದೆ. ಖರೀದಿದಾದರು ಮೊತ್ತವನ್ನು ಪಾವತಿಸಿದ ಬಳಿಕವೂ ಆಸ್ತಿ ರಿಜಿಸ್ಟಾರ್ ಆಗುವುದು ಮುಖ್ಯವಾಗಿದೆ.
ರಿಜಿಸ್ಟ್ರೇಷನ್ ಕಾಯ್ದೆ ಸೆಕ್ಷನ್ 17ರ ಅಡಿಯಲ್ಲಿ ಭಾರತದಲ್ಲಿ ಆಸ್ತಿ ರಿಜಿಸ್ಟ್ರೇಷನ್ ಕಡ್ಡಾಯವಾಗಿದೆ. ಸ್ಟಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕವನ್ನು ಪಾವತಿಸಿದ ಬಳಿಕ ಪ್ರಾಪರ್ಟಿಯನ್ನು ಖರೀದಿದಾರರ ಹೆಸರಿಗೆ ನೊಂದಾವಣೆ ಮಾಡಲಾಗುತ್ತದೆ. ಭಾರತದಲ್ಲಿ ಈ ಮೇಲೆ ಹೇಳಿದಂತೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಅತೀ ಕಷ್ಟಕರವಾಗಿದೆ. ಸರಿಯಾದ ರೀತಿಯಲ್ಲಿ ಪ್ರಕ್ರಿಯೆಯನ್ನು ನಡೆಸದಿದ್ದರೆ, ಪ್ರಕ್ರಿಯೆಯು ಅತೀ ದೀರ್ಘ ಅವಧಿಯಾಗುತ್ತದೆ.

ಆದ್ದರಿಂದ, ಮನೆ ಖರೀದಿದಾರರು ಯಾವುದೇ ಆಸ್ತಿಯನ್ನು ನೋಂದಾಯಿಸುವಾಗ ಎಚ್ಚರಿಕೆ ವಹಿಸಬೇಕು. ಆಸ್ತಿಯನ್ನು ಒಬ್ಬ ಮಾಲೀಕರಿಂದ ಇನ್ನೊಬ್ಬರಿಗೆ ಯಾವಾಗ ಮತ್ತು ಹೇಗೆ ವರ್ಗಾಯಿಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಈ ಮೂಲಕ ಈ ಹಿಂದಿನ ಮಾಲೀಕರು ಎಲ್ಲ ಹಣ ವರ್ಗಾವಣೆಯನ್ನು ಮಾಡಿದ್ದಾರೆಯೇ ಎಂದು ಪರಿಶೀಲಿಸಬೇಕಾಗಿದೆ. ಆಸ್ತಿಯ ವಿರುದ್ದ ಕಾನೂನು ಪ್ರಕರಣವಿದೆಯೇ ಎಂಬುವುದನ್ನು ಪರಿಶೀಲನೆ ಮಾಡಿಕೊಳ್ಳಿ.
ಆಸ್ತಿ ರಿಜಿಸ್ಟ್ರೇಷನ್‌ಗೆ ಬೇಕಾದ ದಾಖಲೆಗಳು
* ಖರೀದಿದಾರರ ಮತ್ತು ಮಾರಾಟಗಾರರ ಪಾಸ್‌ಪೋರ್ಟ್ ಸೈಜ್ ಫೋಟೋ
* ಖರೀದಿದಾರರ ಮತ್ತು ಮಾರಾಟಗಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್
* ನಿರ್ಮಾಣ ಅಂತ್ಯವಾದ ಪ್ರಮಾಣಪತ್ರ
* ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕ
* ನೂತನ ಆಸ್ತಿ ರಿಜಿಸ್ಟಾರ್ ಕಾರ್ಡ್ ಪ್ರತಿ
* ಮುನ್ಸಿಪಲ್ ತೆರಿಗೆ ಬಿಲ್ ಪ್ರತಿ
* ಎನ್‌ಒಸಿ (ನೋ ಒಬ್ಜೆಕ್ಷನ್ ಸರ್ಟಿಫಿಕೇಟ್/ ಯಾವುದೇ ಅಡೆತಡೆ ಇಲ್ಲದ ಪ್ರಮಾಣಪತ್ರ)
* ಪವರ್ ಆಫ್ ಅಟಾರ್ನಿ
* ಪ್ರಾಪರ್ಟಿ ರಿಜಿಸ್ಟಾರ್ ಕಾರ್ಡ್ ಪ್ರತಿ
* ಸೇಲ್ ಡೀಡ್‌ನ ವೆರಿಫೈಡ್ ಪ್ರತಿ


Click it and Unblock the Notifications