ಫಿಕ್ಸೆಡ್ ಡೆಪಾಸಿಟ್ (FD) ಹೂಡಿಕೆದಾರರಿಗೆ ಬೆಸ್ಟ್ ಎಂದು ಹಲವರು ಹೇಳುತ್ತಾರೆ. ಏಕೆಂದರೆ ಈ ಪ್ಲಾನ್ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಪ್ಲಾನ್ ಆಗಿದೆ. ಇನ್ನು ನೀವು ಈ ಎಫ್‌ಡಿ ಮೂಲಕ ಹಣವನ್ನು ಬ್ಯಾಂಕ್‌ನಲ್ಲೂ ಇಡಬಹುದು, ಪೋಸ್ಟ್ ಆಫೀಸ್‌ಗಳಲ್ಲೂ ಇಡಬಹುದು (Bank vs Post Office). ಆದರೆ ನೀವು ಮಾಡುವ ಹೂಡಿಕೆ ಮೊತ್ತದ ಮೇಲೆ, ನಿಮಗೆ ಎಫ್‌ಡಿಯಿಂದ ಲಾಭ ಎಷ್ಟು ಬರುತ್ತದೆ ಎಂದು ನಿರ್ಧರಿಸಬಹುದು. ಇನ್ನು ಇದರಿಂದ ಬರುವ ಬಡ್ಡಿದರ (Interest Rates) ಅಥವಾ ಲಾಭ ಖಚಿತವಾದ್ದರಿಂದ ಹೆಚ್ಚಿನವರು ಹೂಡಿಕೆ ಯೋಜನೆಗಳಲ್ಲಿ ಎಫ್‌ಡಿಯನ್ನೇ ಆಯ್ಕೆ ಮಾಡುತ್ತಾರೆ.

ಎಫ್‌ಡಿ ಸ್ಕೀಮ್‌ಗಳು ಇಂದಿಗೂ ಹೆಚ್ಚಿನವರು ಆಯ್ಕೆ ಮಾಡುತ್ತಾರೆ. ಈ ಆಯ್ಕೆಯ ಹಿಂದಿರುವ ಕಾರಣ ಒಂದೇ, ಅದೇ ವಿಶ್ವಾಸಾರ್ಹ ಮತ್ತು ಪಕ್ಕಾ ಆದಾಯ ನೀಡುತ್ತೆ ಎಂಬ ನಂಬಿಕೆ. ಇನ್ನು ಎಫ್‌ಡಿ ಮೂಲಕ ಹೂಡಿಕೆ ಮಾಡುವವರು ನಿರ್ದಿಷ್ಟ ಅವಧಿಯೊಂದನ್ನು ಪ್ಲಾನ್ ಮಾಡಬೇಕು, ಆ ಅವಧಿಗೆ ತಕ್ಕಂತೆ, ನೀವು ಇಟ್ಟ ಹಣಕ್ಕೆ ತಕ್ಕಂತೆ ನೀವು ಲಾಭವನ್ನು ಪಡೆಯಬಹುದು. ಇನ್ನು ಎಫ್‌ಡಿಗಳ ಮತ್ತೊಂದು ಮುಖ್ಯ ವಿಷಯವೆಂದರೆ, ಉಳಿತಾಯ ಅಕೌಂಟ್‌ಗಳಿಂದ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ.
ನೋ ರಿಸ್ಕ್, ಹೆಚ್ಚು ಲಾಭ:
ಮುಖ್ಯವಾಗಿ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವುದರಿಂದ ಯಾವುದೇ ರಿಸ್ಕ್ ಇರುವುದಿಲ್ಲ, ಅಲ್ಲದೇ ಮೊದಲೇ ಹೇಳಿಕೊಂಡಷ್ಟು ಬಡ್ಡಿಯ ಹಣವನ್ನು ಈ ಯೋಜನೆ ಮೂಲಕ ಹೂಡಿಕೆದಾರರು ಹಿಂಪಡೆಯಬಹುದು. ಇನ್ನು ಇಷ್ಟೆಲ್ಲಾ ಲಾಭ ಹೊಂದಿರುವ ಎಫ್‌ಡಿ ಯೋಜನೆಗೆ ಎಲ್ಲಿ ಹೂಡಿಕೆ ಮಾಡಿದ್ರೆ ಬೆಸ್ಟ್ ಎಂಬುದು ಹಲವರಿಗೆ ಪ್ರಶ್ನೆ. ಇದಕ್ಕಾಗಿ 2 ಆಯ್ಕೆ ಕೂಡಾ ಇದೆ. ಅದರಲ್ಲೊಂದು ಬ್ಯಾಂಕ್, ಮತ್ತೊಂದು ಪೋಸ್ಟ್ ಆಫೀಸ್.
ಬ್ಯಾಂಕ್ vs ಪೋಸ್ಟ್ ಆಫೀಸ್?
ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಎರಡರಲ್ಲೂ ಎಫ್‌ಡಿ ಯೋಜನೆ ಜಾರಿಯಲ್ಲಿದೆ. ಆದ್ರೆ ಹೂಡಿಕೆದಾರರು ಎಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೆಯದು ಎಂದು ನೋಡೋದು ಮುಖ್ಯ. ಇನ್ನು ಸಾಮಾನ್ಯವಾಗಿ 5 ವರ್ಷಗಳ ಎಫ್‌ಡಿ 7.4% ಬಡ್ಡಿದರವನ್ನು ನೀಡುತ್ತದೆ, ಆದರೆ ಹಿರಿಯ ನಾಗರಿಕರಿಗೆ 7.9% ಬಡ್ಡಿರಗಳಲ್ಲೂ ಲಭ್ಯವಿದೆ.
ಬ್ಯಾಂಕ್‌ಗಳ ಬಡ್ಡಿದರ ಹೇಗಿದೆ?
ದೇಶದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ, Fixed Deposit ಬಡ್ಡಿದರಗಳು ಅವಧಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಎಸ್‌ಬಿಐ 1 ವರ್ಷದಿಂದ 2 ವರ್ಷಗಳ ಅವಧಿಗೆ ಸಾಮಾನ್ಯ ಜನರಿಗೆ 6.50% ಬಡ್ಡಿದರ ನೀಡಿದ್ರೆ, ಹಿರಿಯ ನಾಗರೀಕರಿಗೆ 7.00% ಬಡ್ಡಿದರವನ್ನು ನೀಡುತ್ತದೆ. ಅದೇ ರೀತಿ 2 ವರ್ಷಗಳಿಂದ 3 ವರ್ಷಗಳ ಅವಧಿಗೆ 6.60% ಸಾಮಾನ್ಯ ಜನರಿಗಾದ್ರೆ, 7.10% ಹಿರಿಯ ನಾಗರೀಕರಿಗೆ ಬಡ್ಡಿದರವನ್ನು ನೀಡುತ್ತದೆ. 3 ವರ್ಷಗಳಿಂದ 5 ವರ್ಷಗಳ ಅವಧಿಯಲ್ಲಿ ಸಾಮಾನ್ಯ ಜನರು 6.75% ಬಡ್ಡಿದರ ಪಡೆದರೆ, 7.25% ಹಿರಿಯ ನಾಗರಿಕರು ಬಡ್ಡಿದರ ಪಡೆಯುತ್ತಾರೆ.
ಇನ್ನು ಬ್ಯಾಂಕ್ ಆಫ್ ಬರೋಡಾ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗಳಿಗೆ ಸಾಮಾನ್ಯ ನಾಗರಿಕರಿಗೆ 7.3% ಮತ್ತು ಹಿರಿಯ ನಾಗರಿಕರಿಗೆ 7.8% ಬಡ್ಡಿದರವನ್ನು ನೀಡುತ್ತದೆ ಎಂದು ವರದಿಯಾಗಿದೆ.
ಅದೇ ರೀತಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಒಂದು ವರ್ಷದಿಂದ ಎರಡು ವರ್ಷಗಳ ಅವಧಿಗೆ 7.3% ಸಾಮಾನ್ಯ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ 7.8% ಬಡ್ಡಿದರಗಳನ್ನು ನೀಡುತ್ತದೆ.
ಖಾಸಗಿ ಬ್ಯಾಂಕ್‌ಗಳಲ್ಲೂ ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಆದಾಯವನ್ನು ಪಡೆಯಬಹುದು. ಅಂದರೆ ಎಚ್‌ಡಿಎಫ್‌ಸಿ ಬ್ಯಾಂಕ್ ಮೂಲಕ ಐದು ವರ್ಷಗಳ ಅವಧಿಗೆ ಎಫ್‌ಡಿ ಇಟ್ಟರೆ, ಸಾಮಾನ್ಯ ನಾಗರಿಕರಿಗೆ 7.4% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.9% ಬಡ್ಡಿದರ ಸಿಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲೂ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗಳಿಗೆ ಸಾಮಾನ್ಯ ನಾಗರಿಕರಿಗೆ 7.4% ಮತ್ತು ಹಿರಿಯ ನಾಗರಿಕರಿಗೆ 7.9% ಬಡ್ಡಿದರಗಳನ್ನು ನೀಡಲಾಗುತ್ತದೆ.
ಅಂಚೆಕಚೇರಿ ಎಫ್‌ಡಿ ಬಡ್ಡಿದರ:
ಅಂಚೆ ಕಚೇರಿಗಳಲ್ಲಿ, ಹೂಡಿಕೆದಾರರಿಗೆ ನಿರ್ದಿಷ್ಟ ಅವಧಿಗಳಲ್ಲಿ 6.9% ರಿಂದ 7.5% ವರೆಗೆ ಬಡ್ಡಿದರ ನೀಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಒಂದು ವರ್ಷದ ಎಫ್‌ಡಿಗೆ 6.9% ಬಡ್ಡಿ ಮತ್ತು ಐದು ವರ್ಷಗಳ ಎಫ್‌ಡಿಗೆ 7.5% ಬಡ್ಡಿ ನೀಡಲಾಗುತ್ತದೆ. ಕೆಲವು ಬ್ಯಾಂಕ್‌ಗಳು ತನ್ನ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕೇವಲ 6.5% ಬಡ್ಡಿ ನೀಡುತ್ತದೆ. ಆದರೆ ಅಲ್ಪಾವಧಿಯ ಎಫ್‌ಡಿಗಳಲ್ಲಿ ದೀರ್ಘಾವಧಿಯ ಎಫ್‌ಡಿಗಿಂತಲೂ ಹೆಚ್ಚು ಲಾಭವನ್ನು ಪಡೆಯಬಹುದು. ಈ ಬಗ್ಗೆಯೂ ಗಮನಹರಿಸುವುದು ಮುಖ್ಯ.
(ಗಮನಿಸಿ: ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications