ಮನೆ ಖರೀದಿಸಲು ಹಲವಾರು ಮಂದಿಗೆ ಸಂಪೂರ್ಣ ಮೊತ್ತ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ತಮ್ಮದೇ ಆದ ಮನೆ ನಿರ್ಮಾಣಕ್ಕೆ ಮುಂದಾದರೆ ಅತೀ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅತೀ ಕಡಿಮೆ ಬಡ್ಡಿದರ, ಕಡಿಮೆ ಇಎಂಐ ಇರುವ ಸಾಲ ಆಯ್ಕೆಯನ್ನು ನೋಡಿಕೊಂಡು ಹಲವಾರು ಮಂದಿ ಸಾಲ ಪಡೆಯುತ್ತಾರೆ. ಅದಕ್ಕಾಗಿ ಗೃಹ ಖರೀದಿ ಮಾಡಲು ಬಯಸುವವರಿಗೆ ಎಂದಿಗೂ ಕೂಡಾ ಗೃಹ ಸಾಲ ಅತೀ ಉತ್ತಮ, ಪ್ರಯೋಜನಕಾರಿ ಆಯ್ಕೆಯಾಗಿದೆ.
ಗೃಹ ಖರೀದಿಗೆ ಎಂದಿಗೂ ಗೃಹ ಸಾಲ ಉತ್ತಮ. ಗೃಹ ಸಾಲದಲ್ಲಿ ನಾವು ಸುಮಾರು 30 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಎಂಐ ಮೂಲಕ ಪಾವತಿ ಮಾಡಬಹುದು. ನೀವು ಕೈಗೆಟಕುವ ಬಡ್ಡಿದರವನ್ನು ಆಯ್ಕೆಮಾಡುವುದು ಅತೀ ಮುಖ್ಯವಾಗುತ್ತದೆ. ನಿರ್ಮಾಣವಾಗುತ್ತಿರುವ ಮನೆಯನ್ನು ನೀವು ಖರೀದಿ ಮಾಡುವ ನಿರ್ಧಾರ ಮಾಡಿದರೆ, ಪ್ರೀ ಇಎಂಐ (ಪೂರ್ವ ಇಎಂಐ) ಆಯ್ಕೆ ಮಾಡಬೇಕಾಗುತ್ತದೆ. ಪೂರ್ವ ಇಎಂಐ, ಸಂಪೂರ್ಣ ಇಎಂಐ ಎಂದರೇನು, ವ್ಯತ್ಯಾಸ ಮೊದಲಾದ ಮಾಹಿತಿ ಇಲ್ಲಿದೆ... ಮುಂದೆ ಓದಿ...
ಪ್ರೀ ಇಎಂಐ (ಪೂರ್ವ ಇಎಂಐ) ಎಂದರೇನು?
ಪ್ರೀ ಇಎಂಐ ಎಂದರೆ ಬರೀ ಸಾಲದ ಬಡ್ಡಿದರ ಪಾವತಿಸುವುದು ಆಗಿದೆ. ಮನೆ, ಬಿಲ್ಡೀಂಗ್ ನಿರ್ಮಾಣವಾಗುವವರೆಗೆ ಬಡ್ಡಿದರವನ್ನು ಪಾವತಿ ಮಾಡಿ, ಅದಾದ ಬಳಿಕ ಉಳಿದ ಮೊತ್ತ ಪಾವತಿಸುವುದಾಗಿದೆ. ಇಎಂಐನ ಬಡ್ಡಿದರವನ್ನು ಪಾವತಿಸಿ, ಅದಾದ ಬಳಿಕ ಸಾಲದ ಮೊತ್ತವನ್ನು ಪಾವತಿಸುವುದಾಗಿದೆ. ಇಎಂಐ ಮೊತ್ತಕ್ಕಿಂತ ಪ್ರೀ ಇಎಂಐ ಮೊತ್ತ ಕಡಿಮೆಯಾಗಿದೆ. ಸಾಲ ಮರುಪಾವತಿ ಅವಧಿಯು ಪ್ರೀ ಇಎಂಐ (ಪೂರ್ವ ಇಎಂಐ) ಸೇರ್ಪಡೆಯಾಗುವುದಿಲ್ಲ.
ಪ್ರೀ ಇಎಂಐ ಯಾವಾಗ ಆಯ್ಕೆ ಮಾಡುವುದು?
ಬಾಡಿಗೆಯನ್ನು ಪಾವತಿ ಮಾಡಲು ಮತ್ತು ಸಾಲ ಮರುಪಾವತಿ ಇಎಂಐ ಅನ್ನು ಪಾವತಿ ಮಾಡಲು ಕಡಿಮೆ ಮೊತ್ತವಿದ್ದಾಗ, ವ್ಯಕ್ತಿಯು ಪ್ರೀ ಇಎಂಐ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಆಯ್ಕೆ ಮಾಡುವುದು ಉತ್ತಮವಾಗಿದೆ. ತಮ್ಮ ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರವನ್ನು ಮಾಡಿದ್ದರೆ, ಮನೆ ನಿರ್ಮಾಣದ ಬಳಿಕ ಅಥವಾ ಮೊದಲ ಐದು ವರ್ಷದಲ್ಲಿ ಪ್ರೀ ಇಎಂಐ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಸಂಪೂರ್ಣ ಇಎಂಐ (ಫುಲ್ ಇಎಂಐ) ಎಂದರೇನು?
ಸಂಪೂರ್ಣ ಇಎಂಐ (ಫುಲ್ ಇಎಂಐ) ಎನ್ನುವುದು ಗೃಹ ಸಾಲದ ಮರುಪಾವತಿ ವಿಧಾನವಾಗಿದೆ. ಈ ಆಯ್ಕೆಯಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ. ಸಂಪೂರ್ಣ ಇಎಂಐನಲ್ಲಿ ಸಾಲದ ಮೊತ್ತ, ಬಡ್ಡಿದರ ಎರಡು ಕೂಡಾ ಸೇರ್ಪಡೆಯಾಗುತ್ತದೆ. ಮನೆಯು ಸಂಪೂರ್ಣವಾಗಿ ನಿರ್ಮಾಣವಾದ ಬಳಿಕ, ಪಾವತಿ ಆರಂಭವಾಗುತ್ತದೆ. ಹಂತ ಹಂತವಾಗಿ ಸಾಲದ ಮೊತ್ತ ಪಾವತಿಸಬೇಕಾಗುತ್ತದೆ. ಹಲವಾರು ಬ್ಯಾಂಕ್‌ಗಳು ಸಂಪೂರ್ಣ ಪಾವತಿ ಆಯ್ಕೆ ಮಾಡಿದೆ.
ಪ್ರೀ ಇಎಂಐ- ಫುಲ್ ಇಎಂಐ ವ್ಯತ್ಯಾಸವೇನು?
1. ಸಾಲ ವಿತರಣೆ: ಒಂದೇ ಬಾರಿಗೆ ಸಾಲದ ಮೊತ್ತ ವಿತರಣೆ ಮಾಡಿದಾಗ, ಫುಲ್ ಇಎಂಐ ಆಯ್ಕೆಯನ್ನು ಮಾಡಲಾಗುತ್ತದೆ. ಇನ್ನೊಂದೆಡೆ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಸಾಲದ ಮೊತ್ತ ವಿತರಿಸಿದಾಗ ಪ್ರೀ ಇಎಂಐ ಆಯ್ಕೆ ಮಾಡಲಾಗುತ್ತದೆ.
2. ಬಡ್ಡಿದರದ ಲೆಕ್ಕಾಚಾರ: ಸಾಲದ ಮೊತ್ತದ ಆಧಾರದಲ್ಲಿ ಫುಲ್ ಇಎಂಐ ಬಡ್ಡಿದರ ನಿರ್ಧರಿಸಲಾಗುತ್ತದೆ. ಪ್ರೀ ಇಎಂಐ ಮೊತ್ತದ ಆಧಾರದಲ್ಲಿ ಬಡ್ಡಿದರ ನಿರ್ಧರಿಸಲಾಗುತ್ತದೆ.
3. ಸಾಲ ಮರುಪಾವತಿ ಅವಧಿ: ನೀವು ಪೂರ್ವ ಇಎಂಐ ಬದಲಾಗಿ ಸಂಪೂರ್ಣ ಇಎಂಐ ಆಯ್ಕೆ ಮಾಡಿದರೆ ಸಾಲವನ್ನು ಶೀಘ್ರ ಮರುಪಾವತಿ ಮಾಡಬಹುದು. ಯಾಕೆಂದರೆ ಸಾಲದ ಮೊತ್ತ ಬಡ್ಡಿದರ, ಎರಡೂ ಪಾವತಿಸಬಹುದಾಗಿದೆ.
4. ಇಎಂಐ ಪಾವತಿ: ಪ್ರೀ ಇಎಂಐ ನಿರ್ಮಾಣ ಆರಂಭವಾದ ಬಳಿಕ ಇಎಂಐ ಆರಂಭವಾಗುತ್ತದೆ. ಆದರೆ ಫುಲ್ ಇಎಂಐನಲ್ಲಿ ನಿರ್ಮಾಣ ಸಂಪೂರ್ಣವಾದ ಬಳಿಕ ಇಎಂಐ ಪಾವತಿ ಮಾಡಬೇಕಾಗುತ್ತದೆ.


Click it and Unblock the Notifications