ಅಮರಾವತಿ, ಜನವರಿ 08: ಸಂಕ್ರಾತಿ ಹಬ್ಬದ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣ ದರಗಳನ್ನು ಏರಿಸಲು ಚಿಂತನೆ ನಡೆಸಿದ್ದಾರೆ.
ನೆಲ್ಲೂರು - ಬೆಂಗಳೂರು, ನೆಲ್ಲೂರು - ಹೈದರಾಬಾದ್, ಮತ್ತು ನೆಲ್ಲೂರು - ವಿಶಾಖಪಟ್ಟಣಂನಂತಹ ಜನಪ್ರಿಯ ಮಾರ್ಗಗಳಲ್ಲಿ ಹೆಚ್ಚುವರಿ ದರಗಳನ್ನು ವಿಧಿಸುವ ಮೂಲಕ ಖಾಸಗಿ ಬಸ್ ಮಾಲೀಕರು ಹಬ್ಬದ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ.

ವಿಶೇಷವಾಗಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಆಂಧ್ರಪ್ರದೇಶದ ನೆಲ್ಲೂರು ಮತ್ತು ಸಮೀಪದ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಖಾಸಗಿ ಉದ್ಯೋಗಿಗಳು ತಮ್ಮ ತಮ್ಮ ಊರಿಗೆ ಪ್ರಯಾಣ ಬೆಳೆಸುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರು ಬೆಲೆ ಏರಿಸಲು ನಿರ್ಧರಿಸಿದ್ದಾರೆ.
ಖಾಸಗಿ ವಸತಿ ಕಾಲೇಜುಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಎಸ್‌ಇಜೆಡ್‌ಗಳು ಮತ್ತು ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗದಲ್ಲಿರುವ ಖಾಸಗಿ ಕಾರ್ಮಿಕರೊಂದಿಗೆ, ನೆಲ್ಲೂರು-ಹೈದರಾಬಾದ್, ನೆಲ್ಲೂರು-ಬೆಂಗಳೂರು, ಮತ್ತು ನೆಲ್ಲೂರು-ವಿಶಾಖಪಟ್ಟಣಂನಂತಹ ಮಾರ್ಗಗಳಲ್ಲಿ ಹಬ್ಬದ ಸೀಸನ್‌ಗಳಲ್ಲಿ ಹೆಚ್ಚಿನ ಬೇಡಿಕೆ ಬರುತ್ತದೆ.
ದರದ ಹೆಚ್ಚಳದ ಹೊರತಾಗಿಯೂ ಪ್ರಯಾಣಿಕರು ಖಾಸಗಿ ಬಸ್‌ಗಳನ್ನು ಆರಿಸಿಕೊಳ್ಳುವುದನ್ನು ಮುಂದುವರಿಸುತ್ತಾರೆ. ಬಸ್ ಬುಕಿಂಗ್ ಕೇಂದ್ರದ ಉದ್ಯೋಗಿಯೊಬ್ಬರು ಬೇಡಿಕೆಯು ಬರುತ್ತಲೇ ಇರುತ್ತದೆ. ಹಬ್ಬದ ಋತುವಿನ ಅಂತ್ಯದ ನಂತರ ದರಗಳನ್ನು ಇಳಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ದೂರದ ಪ್ರಯಾಣಕ್ಕಾಗಿ ಬಸ್ ಆಸನಗಳು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ ಎಂದು ಪ್ರಯಾಣಿಕರಿಂದ ದೂರುಗಳು ಬರುತ್ತವೆ. ಅನೇಕ ಪ್ರಯಾಣಿಕರು ದುಬಾರಿ ದರದಲ್ಲಿ ಖಾಸಗಿ ಬಸ್‌ಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ. ಉದಾಹರಣೆಗೆ ನೆಲ್ಲೂರಿನಿಂದ ಹೈದರಾಬಾದ್‌ಗೆ ಎ/ಸಿ ಅಲ್ಲದ ಬಸ್‌ಗಳ ದರಗಳು ಋತುವಿನಲ್ಲಿ ರೂ 700 ರಿಂದ ರೂ 1,300 ಕ್ಕೆ ಏರಿತು.
ನೆಲ್ಲೂರಿನಿಂದ ಹೈದರಾಬಾದ್‌ಗೆ ಎಸಿ ಸ್ಲೀಪರ್ ಬಸ್ ದರಗಳು ರೂ. 1,580- ರೂ. 2,350 ಗೆ ಗಗನಕ್ಕೇರಿದೆ, ಸಾಮಾನ್ಯ ಬೆಲೆ ರೂ. 800 ರಿಂದ ರೂ. 900. ಇದೇ ರೀತಿಯ ಪ್ರವೃತ್ತಿಯನ್ನು ನೆಲ್ಲೂರು-ಬೆಂಗಳೂರು ಮಾರ್ಗದಲ್ಲಿ ಕಂಡು ಬಂದಿದೆ. ಅಲ್ಲಿ ಎಸಿ ಸ್ಲೀಪರ್ ಬಸ್ ದರಗಳು ರೂ.2,500 ಕ್ಕೆ ಏರಿದೆ ಸಾಮಾನ್ಯ ರೂ 1,300, ಮತ್ತು ಎ/ಸಿ ಅಲ್ಲದ ದರಗಳು ರೂ 850 ರಿಂದ ರೂ 900 ಕ್ಕೆ ಸಾಮಾನ್ಯ ರೂ 545 ರಿಂದ ಹೆಚ್ಚಾಗಿದೆ.
ಆಂಧ್ರಪ್ರದೇಶದ ನೆಲ್ಲೂರು ಉಪ ಸಾರಿಗೆ ಆಯುಕ್ತ ಬಿ ಚಂದರ್ ಪ್ರತಿಕ್ರಿಯಿಸಿ, ಹಬ್ಬ ಹರಿದಿನಗಳಲ್ಲಿ ವಿಶೇಷ ತಂಡಗಳು ದಾಳಿ ನಡೆಸಿ ಪ್ರಯಾಣಿಕರಿಂದ ಅಧಿಕ ಶುಲ್ಕ ವಿಧಿಸುವ ಖಾಸಗಿ ಬಸ್ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಿತಿಮೀರಿದ ದರಗಳ ಯಾವುದೇ ನಿದರ್ಶನಗಳನ್ನು ಅಧಿಕಾರಿಗಳಿಗೆ ತಿಳಿಸಲು ಪ್ರಯಾಣಿಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಏತನ್ಮಧ್ಯೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ವಿಶೇಷ ಬಸ್‌ಗಳಲ್ಲಿ ಪ್ರಯಾಣಿಕರಿಂದ ನಾಮಮಾತ್ರದ ಹೆಚ್ಚುವರಿ ಶುಲ್ಕವನ್ನು ಮಾತ್ರ ಸಂಗ್ರಹಿಸುವ ಭರವಸೆಯೊಂದಿಗೆ ಹಬ್ಬದ ಸಮಯದಲ್ಲಿ ಜಿಲ್ಲೆಯಿಂದ ವಿಶೇಷ ಸೇವೆಗಳನ್ನು ನೀಡಲು ಯೋಜಿಸಿದೆ. ಖಾಸಗಿ ಬಸ್ ನಿರ್ವಾಹಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ವಾಹನ ನಿರೀಕ್ಷಕರಿಗೆ ಚಂದರ್ ನಿರ್ದೇಶನ ನೀಡಿದ್ದಾರೆ. ಇಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳುವುದು ಮತ್ತು ಯಾರಾದರೂ ಭಾರಿ ಶುಲ್ಕ ಸಂಗ್ರಹಿಸುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುವುದು ಎಂದು ಎಚ್ಚರಿಕೆ ನೀಡಲಾಗಿದೆ.


Click it and Unblock the Notifications