ಪ್ರಿಯಾಂಕಾ ಛೋಪ್ರಾ ಯಶಸ್ಸಿನ ಹಿಂದಿರುವ ಮ್ಯಾನೇಜರ್ ಅಂಜುಲಾ ಕೋಟಿಗಟ್ಟಲೆ ಸಂಪಾದಿಸುವ ವಾಣಿಜ್ಯೋದ್ಯಮಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದೇ ನೌಕರಿಯನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲದ ಮಾತು. ಅಲ್ಲದೆ ಎಲ್ಲಾ ಕಡೆಗಳಿಂದ ಆದಾಯದ ಮೂಲವನ್ನು ತೆರೆದಿಟ್ಟುಕೊಳ್ಳುವುದು ಜಾಣ್ಮೆಯ ನಡೆ ಎಂಬುದು ಸ್ವತಹ ಆರ್ಥಿಕ ಪಂಡಿತರ ಅಭಿಮತ. ಇದಕ್ಕೆ ಕಣ್ಣೆದುರೇ ಹತ್ತು ಹಲವು ಉದಾಹರಣೆಗಳು ಲಭಿಸುತ್ತದೆ. ಉದಾಹರಣೆಗೆ ಕ್ರಿಕೆಟ್ ಆಟಗಾರರು ಕೂಡ ಕೋಟಿಗಳ ಲೆಕ್ಕದಲ್ಲಿ ಹಣ ಸಂಪಾದಿಸುತ್ತಿದ್ದರೂ ಹೆಚ್ಚಿನವರು ವಿವಿಧ ಕಂಪೆನಿಗಳಲ್ಲಿ ಹಣವನ್ನು ಹೂಡಿಕೆಯ ಅಭ್ಯಾಸ ಇರಿಸಿಕೊಂಡವರಾಗಿದ್ದಾರೆ. ಇನ್ನು ವಿಶ್ವಪ್ರಖ್ಯಾತ ಭಾರತೀಯ ನಟಿ ಪ್ರಿಯಾಂಕಾ ಛೋಪ್ರಾ ಅವರ ಮ್ಯಾನೇಜರ್ ಅಂಜುಲಾ ಆಚಾರ್ಯ ಕೂಡ ಇದಕ್ಕೆ ಭಿನ್ನವಲ್ಲ. ಎಲ್ಲರಿಗೂ ತಿಳಿದಿರುವಂತೆ ಸದ್ಯ ಪ್ರಿಯಾಂಕಾ ಛೋಪ್ರಾ ಯಶಸ್ಸಿನ ಉತ್ತುಂಗಕ್ಕೇರುವಲ್ಲಿ ಅಂಜುಲಾ ಆಚಾರ್ಯ ಪಾತ್ರ ಕೂಡ ಇದೆ ಎಂದು ಯಾವ ಅಳುಕಿಲ್ಲದೆ ಹೇಳಿದರೆ ತಪ್ಪಾಗಲಾರದು. ಸದ್ಯ ಇದೇ ಪ್ರಿಯಾಂಕಾ ಛೋಪ್ರಾ ತನ್ನ ಹಿಂದಿನ ಖದರ್ ಗೆ ಮರಳಿದ್ದು, ಬಾಲಿವುಡ್ ನಲ್ಲೀಗ ಈಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಟೈಮ್ ನಿಯತಕಾಲಿಕೆಯು ಪ್ರಿಯಾಂಕಾ ಅವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಹೆಸರಿಸಿದೆ. ಸದ್ಯ ಇದೇ ಪ್ರಿಯಾಂಕಾಗೆ ಮಾರ್ಗದರ್ಶನ ನೀಡಿ, ಆಕೆಯ ಯಶಸ್ಸಿಗೆ ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿರುವ ಅಂಜುಲಾ ಆಚಾರ್ಯ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಮಾತು. ಸದ್ಯ ಅಂಜುಲಾ ಬಗ್ಗೆ ತಿಳಿದುಕೊಳ್ಳುವುದು ಕೂಡ ಅಗತ್ಯವಾಗಿದೆ.

ಯಾರೀಕೆ ಅಂಜುಲಾ ಆಚಾರ್ಯ?

ಅಂಜುಲಾ ಅವರು 'ಉದ್ಯಮಿ, ಲೋಕೋಪಕಾರಿ, ಪಾಪ್ ಸಂಸ್ಕೃತಿ ಉತ್ಸಾಹಿ, ಏಂಜೆಲ್ ಹೂಡಿಕೆದಾರೆ/ಸಲಹೆಗಾರ್ತಿ ಮತ್ತು ಇತ್ತೀಚೆಗೆ ಬಿಲ್‌ಬೋರ್ಡ್‌ನ ಅಂತರಾಷ್ಟ್ರೀಯ ಪವರ್ ಪ್ಲೇಯರ್‌ಗಳ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದ್ದಾರೆ ಎಂದು ಆಕೆಯ ಲಿಂಕ್ಡ್‌ಇನ್ ಬಯೋ ತಿಳಿಸುತ್ತದೆ. ಅದರಲ್ಲೂ ಅಂಜುಲಾ ಗ್ರಾಹಕ ಅಂತರ್ಜಾಲ ಕ್ಷೇತ್ರದಲ್ಲಿ ಹಲವಾರು ಕಂಪನಿಗಳಿಗೆ ಸಲಹೆ ನೀಡುತ್ತಾರೆ ಮತ್ತು ಪ್ರಸ್ತುತ ಬಂಬಲ್, ಹುಕ್ಡ್, ಬುಲೆಟ್‌ಪ್ರೂಫ್ ಕಾಫಿ, ಮೇವೆನ್, ಗಾಬಲ್, ಫೌಂಡರ್‌ಮೇಡ್, ಕ್ಯೂ, ಯುಮಿ, ಹೆಲ್ತ್‌ಏಡ್ ಕೊಂಬುಚಾ, ಸ್ಕಿನ್ನಿ ಡಿಪ್ಡ್, ಜೋರೋ ಅಪ್ಲಿಕೇಶನ್ ಮುಂತಾದ ಹಲವು ಕಂಪನಿಗಳೊಂದಿಗೆ ಸಲಹೆಗಾರರಾಗಿ ಮತ್ತು ಆರಂಭಿಕ ಹಂತದ ಹೂಡಿಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಂಜುಲಾ ಅವರು 2021 ರಲ್ಲಿ ಬಜ್‌ಫೀಡ್‌ನ ನಿರ್ದೇಶಕರ ಮಂಡಳಿಯನ್ನು ಸೇರಿದರು. ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ, ಉದ್ಯಮಿ ರಂಜ್ ಬಾತ್ ಅವರನ್ನು ವಿವಾಹವಾದ ಅಂಜುಲಾ ಅವರು ಟ್ರಿನಿಟಿ ವೆಂಚರ್ಸ್‌ನಲ್ಲಿ ಹೂಡಿಕೆದಾರರಾಗಿದ್ದಾರೆ. ಕ್ಲಾಸ್ ಪಾಸ್ ಮತ್ತು ದಿ ಮ್ಯೂಸ್‌ನಂತಹ ಸ್ಟಾರ್ಟ್‌ಅಪ್‌ಗಳಲ್ಲಿ ವೈಯಕ್ತಿಕವಾಗಿ ಕೂಡ ಹೂಡಿಕೆ ಮಾಡಿದ್ದಾರೆ. ಅಂಜುಲಾ ತನ್ನ ಕಂಪನಿ ಎ-ಸೀರೀಸ್ ಇನ್ವೆಸ್ಟ್‌ಮೆಂಟ್‌ನ ಅಡಿಯಲ್ಲಿ ಸರಣಿ ಹೂಡಿಕೆದಾರ ಮತ್ತು ಉದ್ಯಮಿಯೂ ಆಗಿದ್ದಾಳೆ. ಈ ಕಂಪೆನಿಯಲ್ಲಿ ಅಂಜುಲಾ ಟೆಕ್ ಮತ್ತು ಹಾಲಿವುಡ್ ನಡುವಿನ ಅಂತರವನ್ನು ಕಡಿಮೆ ಮಾಡಲು ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ. 2007 ರಲ್ಲಿ, ಅಂಜುಲಾ ತನ್ನ ಮೊದಲ ಸ್ಟಾರ್ಟ್-ಅಪ್ ದೇಸಿ ಹಿಟ್ಸ್, ಪೂರ್ವ-ಮೀಟ್ಸ್-ವೆಸ್ಟ್ ಪಾಪ್ ಸಂಸ್ಕೃತಿಯ ಫ್ಲ್ಯಾಟ್ ಫಾರ್ಮ್ ಅನ್ನು ಸಹ-ಸ್ಥಾಪಿಸಿದರು. ಬ್ರಿಟ್ನಿ ಸ್ಪಿಯರ್ಸ್ ಮತ್ತು ಲೇಡಿ ಗಾಗಾ ಅವರಂತಹ ಕಲಾವಿದರನ್ನು ಭಾರತಕ್ಕೆ ಪರಿಚಯಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದರ ಹೊರತಾಗಿಯೂ ಅಂಜುಲಾ ಪ್ರಿಯಾಂಕಾ ಚೋಪ್ರಾ ಅವರ ದೀರ್ಘಾವಧಿಯ ಮ್ಯಾನೇಜರ್ ಆಗಿ ಹೆಸರುವಾಸಿಯಾಗಿದ್ದಾರೆ. ದೇಸಿ ಹಿಟ್ಸ್ ಅನ್ನು ಸ್ಥಾಪಿಸಿದ್ದು, ಅಂಜುಲಾ ಅವರು ಪ್ರಿಯಾಂಕಾರನ್ನು ಅಮೆರಿಕಾದ ಮಾರುಕಟ್ಟೆಗೆ ಪರಿಚಯಿಸಲು ಕಾರಣವಾಯಿತು. 2010 ರ ದಶಕದ ಆರಂಭದಲ್ಲಿ ಪ್ರಿಯಾಂಕಾ ಇನ್ ಮೈ ಸಿಟಿ ಮತ್ತು ಎಕ್ಸೋಟಿಕ್ ನಂತಹ ಕೆಲವು ಹಾಡುಗಳನ್ನು ಬಿಡುಗಡೆ ಮಾಡಿದ ನಂತರವೂ ವೃತ್ತಿ ಜೀವನದ ಏಳಿಗೆ ಮಾತ್ರ ಆಗಿರಲಿಲ್ಲ. ಈ ಅವಧಿಯಲ್ಲಿ ಅಂಜುಲಾ ನೀಡಿದ ಸಲಹೆ, ಮಾರ್ಗದರ್ಶನ ಹಾಗೂ ನೆರವಿನಿಂದ ಪ್ರಿಯಾಂಕಾ ಸದ್ಯ ಉನ್ನತ ಮಟ್ಟಕೇರುವಲ್ಲಿ ನೆರವಾಯಿತು.

 ವಾಣಿಜ್ಯೋದ್ಯಮಿ ಆಗಿರೋ ಪ್ರಿಯಾಂಕಾ ಛೋಪ್ರಾ ಮ್ಯಾನೇಜರ್

ವರ್ಷಕ್ಕೆ 6 ಕೋಟಿ ರೂ. ಸಂಪಾದಿಸುವ ಉದ್ಯಮಿ!

ಅಂಜುಲಾ ಅವರು ಹೂಡಿಕೆ ಹಾಗೂ ತನ್ನ ಉದ್ಯಮದ ಮೂಲಕ ವಾರ್ಷಿಕವಾಗಿ ಆರು ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ. ಅದೂ ಅಲ್ಲದೆ ಅಂಜುಲಾ ಒಟ್ಟು 60 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೇವಲ ಮ್ಯಾನೇಜರ್ ಹುದ್ದೆಯಲ್ಲದೆ ವಿವಿಧ ಕಂಪೆನಿಗಳಲ್ಲಿ ಜಾಣ್ಮೆಯ ಹೂಡಿಕೆಯ ಮೂಲಕವೂ ಅಂಜುಲಾ ಗುರುತಿಸಿಕೊಂಡಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+