ಹಿಂದೂ ಕ್ಯಾಲೆಂಡರ್ ಪ್ರಕಾರ ಅತೀ ಪವಿತ್ರವಾದ ದಿನಗಳಲ್ಲಿ ಅಕ್ಷಯ ತೃತೀಯ ಕೂಡಾ ಒಂದಾಗಿದೆ. ಈ ದಿನದಂದು ಚಿನ್ನ ಖರೀದಿ ಮಾಡುವುದು ಅತೀ ಶುಭ, ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜನರು ಆ ದಿನ ಚಿನ್ನದ ಸಣ್ಣ ನಾಣ್ಯವನ್ನಾದರೂ ಖರೀದಿ ಮಾಡುವುದು ನಾವು ಕಾಣುತ್ತೇವೆ. ಭಾರತದಲ್ಲಿ ಈ ವರ್ಷ ಏಪ್ರಿಲ್ 22ರಂದು ಅಕ್ಷಯ ತೃತೀಯವನ್ನು ಆಚರಣೆ ಮಾಡಲಾಗುತ್ತಿದೆ.
ಈ ದಿನದಂದು ಚಿನ್ನದ ಮೇಲೆ ಮಾಡಿದ ಯಾವುದೇ ಹೂಡಿಕೆ ಅಥವಾ ಚಿನ್ನ ಖರೀದಿಯು ಲಾಭ, ಸಂಪತ್ತು, ಆಸ್ತಿಯನ್ನು ವೃದ್ಧಿ ಮಾಡುತ್ತದೆ ಎಂಬ ನಂಬಿಕೆಯಿದೆ. ಅಕ್ಷಯ ಎಂಬ ಪದವೇ ಇದನ್ನು ಹೇಳುತ್ತದೆ. ಅಕ್ಷಯ ಎಂದರೆ ಎಂದಿಗೂ ಮುಗಿಯದ ಎಂದರ್ಥವಾಗಿದೆ. ಈ ನಂಬಿಕೆಯ ಭಾಗವಾಗಿ ಅಕ್ಷಯ ತೃತೀಯ ದಿನದಂದು ಹಲವಾರು ಮಂದಿ ಹೊಸ ಉದ್ಯೋಗ ಆರಂಭಿಸುತ್ತಾರೆ, ಹೊಸ ಹೂಡಿಕೆ ಮಾಡುತ್ತಾರೆ. ಪ್ರಮುಖವಾಗಿ ಚಿನ್ನ ಖರೀದಿ ಮಾಡುತ್ತಾರೆ. ಈ ದಿನ ಪವಿತ್ರ, ಶುಭ ಏಕೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಧಾರ್ಮಿಕ ನಂಬಿಕೆ
ಹಿಂದೂ ಪುರಾಣ ಹಾಗೂ ಸಂಸ್ಕೃತಿ ಪ್ರಕಾರ ಚಿನ್ನ ಅತೀ ಪವಿತ್ರವಾದ ಲೋಹವಾಗಿದೆ. ಚಿನ್ನವು ಮುಗ್ಧತೆ, ಸಂಪತ್ತು ಹಾಗೂ ಅದೃಷ್ಟದ ಪ್ರತೀಕವಾಗಿದೆ. ಚಿನ್ನವು ಹಿಂದೂ ದೇವರು ಲಕ್ಷ್ಮೀಯೆಂದೇ ನಂಬಿಕೆ. ಲಕ್ಷ್ಮೀ ಸಂಪತ್ತು, ಐಶ್ವರ್ಯ, ಅದೃಷ್ಟ, ಯಶಸ್ಸಿನ ಪ್ರತೀಕವಾಗಿದ್ದಾರೆ. ಈ ಅಕ್ಷಯ ತೃತೀಯ ದಿನದಂದು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಚಿನ್ನವನ್ನು ಖರೀದಿ ಮಾಡಿದರೆ ದೇವಿ ಲಕ್ಷ್ಮೀಯ ಕೃಪಕಟಾಕ್ಷ ನಮ್ಮಲ್ಲಿ ಇರಲಿದೆ ಎಂಬ ನಂಬಿಕೆಯಿದೆ.
ಜ್ಯೋತಿಷ್ಯದಲ್ಲಿ ಅಕ್ಷಯ ತೃತೀಯ ಮಹತ್ವ
ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯವು ಅತೀ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಲವಾರು ಮಂದಿ ನಮ್ಮ ಜೀವನವು ಗ್ರಹಗಳು ಹಾಗೂ ನಕ್ಷತ್ರಗಳ ಚಲನೆಯ ಮೇಲೆ ಆಧಾರಿತವಾಗಿರುತ್ತದೆ ಎಂಬ ನಂಬಿಕೊಂಡಿದ್ದಾರೆ. ವೈಶಾಖ ಮಾಸದಲ್ಲಿ ಮೂರನೇ ದಿನದಂದು ಅಕ್ಷಯ ತೃತೀಯ ಬರುತ್ತದೆ. ಈ ದಿನವನ್ನು ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಅದೃಷ್ಟದ ದಿನವೆಂದು ಪರಿಗಣಿಸಲಾಗಿದೆ. ಹಾಗೆಯೇ ಈ ದಿನ ಮಾಡಿದ ಯಾವುದೇ ಹೂಡಿಕೆ ಅದೃಷ್ಟ ಮತ್ತು ಸಮೃದ್ಧಿ ತರುತ್ತದೆ ಎಂಬ ನಂಬಿಕೆಯಿದೆ. ಯಾವುದೇ ಕೆಟ್ಟ ಗ್ರಹದ ಪ್ರಭಾವ ಇರದು ಎಂಬ ನಂಬಿಕೆಯಿದೆ.
ಈ ದಿನದ ಹೂಡಿಕೆ ಮೌಲ್ಯ
ಸಾಂಪ್ರದಾಯಿಕವಾಗಿ ಶ್ರೀಮಂತಿಕೆ ಹಾಗೂ ಯಶಸ್ವಿಯ ಪ್ರತೀಕವೇ ಮೌಲ್ಯಯುತ ಲೋಹವಾದ ಚಿನ್ನವಾಗಿದೆ. ಹಲವಾರು ಮಂದಿ ಸುರಕ್ಷಿತ ಹೂಡಿಕೆ ಎಂಬ ವಿಚಾರಕ್ಕೆ ಬಂದಾಗಿ ಸಾಮಾನ್ಯವಾಗಿ ಆಯ್ಕೆ ಮಾಡುವುದೇ ಚಿನ್ನವಾಗಿದೆ. ಚಿನ್ನವು ಆರ್ಥಿಕ ಹಿಂಜರಿತ ಬಂದಾಗಲೂ ಅತೀ ಹೆಚ್ಚು ಮೌಲ್ಯ ಹೊಂದಿರುತ್ತದೆ. ಆದ್ದರಿಂದ ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.
ಹಣದುಬ್ಬರ ಉಂಟಾದಾಗ ಆಗಿರಬಹುದು ಅಥವಾ ಕರೆನ್ಸಿ ಮೌಲ್ಯ ಬದಲಾದಾಗ ಆಗಿರಬಹುದು ನಾವು ಚಿನ್ನವನ್ನು ಖರೀದಿ ಮಾಡುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಚಿನ್ನ ಎಂದಿಗೂ ಕೂಡಾ ದೀರ್ಘ ಕಾಲದ ಸಂಪತ್ತಾಗಿದೆ. ಹಾಗೆಯೇ ಸಮೃದ್ಧಿಯನ್ನು ತುಂಬಿರುತ್ತದೆ. ಆದ್ದರಿಂದ ಅಕ್ಷಯ ತೃತೀಯ ದಿನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಸಾಂಸ್ಕೃತಿಕ ಮಹತ್ವವೂ ಇದೆ!
ಭಾರತದಲ್ಲಿ ಅಕ್ಷಯ ತೃತೀಯವನ್ನು ಆಯಾ ಪ್ರದೇಶದ ಸಾಂಸ್ಕ್ರೃತಿಕ ವೈವಿಧ್ಯತೆಗೆ ಅನುಗುಣವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಚಿನ್ನ ಖರೀದಿ ಮಾಡುವುದು ಸಮೃದ್ಧಿಯ ಹಾಗೂ ಅದೃಷ್ಟದ ಪ್ರತೀಕ ಎಂದು ಹಲವಾರು ಪ್ರದೇಶಗಳಲ್ಲಿ ನಂಬಲಾಗುತ್ತದೆ. ಈ ದಿನ ದೇವಿ ಲಕ್ಷ್ಮೀ ಹಾಗೂ ವಿಷ್ಣುವನ್ನು ಪೂಜೆ ಮಾಡಲಾಗುತ್ತದೆ. ಹಾಗೆಯೇ ದಾನ ಧರ್ಮ ಕಾರ್ಯಗಳನ್ನು ಕೂಡಾ ಮಾಡಲಾಗುತ್ತದೆ.


Click it and Unblock the Notifications