ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿ ಆಗುತ್ತಲೇ ಇರುವ ಬಾಲಿವುಡ್ ಸ್ಟಾರ್ ದಂಪತಿ ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ ಈಗ ಹೊಸ ದುಬಾರಿ ಮನೆಯನ್ನು ಖರೀದಿ ಮೂಲಕ ಸುದ್ದಿಯಾಗಿದ್ದಾರೆ. ದಂಪತಿ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದಾರೆ. ಈ ಮನೆಯ ಮೌಲ್ಯವನ್ನು ಕೇಳಿದರೆ, ನೀವು ಬೆಚ್ಚಿ ಬೀಳುವುದು ಖಂಡಿತ.
ಇತ್ತೀಚೆಗೆ ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ವಾಪಾಸ್ ಬಂದ ಬಳಿಕ ಮನೆಯನ್ನು ಖರೀದಿ ಮಾಡಿದ್ದು ಇದರ ಎಲ್ಲ ಪ್ರಕ್ರಿಯೆ ಜುಲೈ 8ಕ್ಕೆ ಕೊನೆಯಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.
ಈ ಹೊಸ ಮನೆ ಖರೀದಿ ಮಾಡುವ ಮೂಲಕ ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ನೆರೆ ಮನೆಯವರು ಆಗಲಿದ್ದಾರೆ. ಶಾರುಖ್ ಖಾನ್‌ರ ಮನ್ನತ್ ನಿವಾಸ ಹಾಗೂ ಸಲ್ಮಾನ್ ಖಾನರ್ ಗ್ಯಾಲಾಕ್ಸಿ ನಿವಾಸದ ಪಕ್ಕದಲ್ಲೇ ರಣ್‌ವೀರ್, ದೀಪಿಕಾ ಮನೆ ಇದೆ ಎಂದು ವರಿದಿಯಾಗಿದೆ. ಹಾಗಾದರೆ ಈ ಮನೆ ಹೇಗಿದೆ, ಎಷ್ಟು ಬೆಲೆ, ಏನೇನು ಸೌಕರ್ಯಗಳು ಇದೆ ಎಂದು ತಿಳಿಯೋಣ ಮುಂದೆ ಓದಿ.....

ರಣ್‌ವೀರ್, ದೀಪಿಕಾ ಹೊಸ ಮನೆ ಹೇಗಿದೆ?
ಮಾಹಿತಿ ಪ್ರಕಾರ ದಂಪತಿಯು ಮುಂಬೈನ ಬಾಂದ್ರಾದಲ್ಲಿರುವ ಸಾಗರ್ ರೇಶಮ್‌ನಲ್ಲಿ ರೆಸಿಡೆನ್ಶಿಯಲ್ ಟವರ್‌ನಲ್ಲಿ ಮನೆಯನ್ನು ಖರೀದಿ ಮಾಡಿದ್ದಾರೆ. ವರದಿಗಳ ಪ್ರಕಾರ ರಣ್‌ವೀರ್ ಈ ಮನೆಯನ್ನು ಸುಮಾರು 119 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ.
ಈ ಮನೆಯು 16, 17, 18, 19ನೇ ಮಹಡಿಯಲ್ಲಿ ಇದೆ. ಇದು ಸುಮಾರು 11,266 ಚದರ ಅಡಿ ಕಾರ್ಪೆಟ್ ಏರಿಯಾ ಆಗಿದೆ. 1,300 ಚದರ ಅಡಿ ವಿಶೇಷ ಟೆರೇಸ್ ಇದೆ. ಒಂದು ಚದರ ಅಡಿಗೆ ಸುಮಾರು ಒಂದು ಲಕ್ಷ ರೂಪಾಯಿ ಆಗಿದೆ.
ಇನ್ನು ರಣ್‌ವೀರ್ ಸಿಂಗ್ ಸುಮಾರು 19 ಪಾರ್ಕಿಂಗ್ ಸ್ಲಾಟ್ ಅನ್ನು ಕೂಡಾ ಹೊಂದಿದ್ದಾರೆ. ಇನ್ನು ಈ ಮನೆಯನ್ನು ಖರೀದಿ ಮಾಡುವ ನಿಟ್ಟಿನಲ್ಲಿ ರಣ್‌ವೀರ್ ಸಿಂಗ್ ಮತ್ತು ಅವರ ತಂದೆಯ ಸಂಸ್ಥೆಯು ಒಟ್ಟು 7.13 ಕೋಟಿ ಮೌಲ್ಯದ ಸ್ಟ್ಯಾಂಪ್ ಪಾವತಿ ಮಾಡಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications