ಕೇಂದ್ರ ಸರ್ಕಾರದಿಂದ (Central Govt) ಉಚಿತ ಅಕ್ಕಿ, ಧಾನ್ಯ ನೀಡುವುದಕ್ಕಾಗಿ ಪರಿಚಯಿಸಿದ ದಾಖಲೆಗಳಲ್ಲಿ ಪಡಿತರ ಚೀಟಿ (Ration Card) ಕೂಡಾ ಒಂದು. ಭಾರತ ಸರ್ಕಾರದ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅತ್ಯಗತ್ಯವಾಗಿದ್ದು, ಗೋಧಿ, ಅಕ್ಕಿ, ಸಕ್ಕರೆ ಮತ್ತು ಬೇಳೆಕಾಳುಗಳಂತಹ ಅಗತ್ಯ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ಪಡೆಯಲು ಸಹಾಯ ಮಾಡುತ್ತದೆ. ಸಬ್ಸಿಡಿ ಪ್ರಯೋಜನಗಳನ್ನು ಪಡೆಯಬೇಕಾದರೆ ಇದು ಬಹಳ ಅಗತ್ಯ.

ಆದ್ದರಿಂದ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಒಂದು ವೇಳೆ ಪಡಿತರ ಚೀಟಿ ಇಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ಪಡೆಯಬಹುದು. ಅಷ್ಟೇ ಅಲ್ಲ, ಮನೆಯಲ್ಲೇ ಕುಳಿತು ಇ-ಕೆವೈಸಿ ಪ್ರಕ್ರಿಯೆಯನ್ನು ಸಹ ಪೂರ್ಣಗೊಳಿಸಬಹುದು. ಈ ಕುರಿತು ಹಂತ ಹಂತದ ಪ್ರಕ್ರಿಯೆಯನ್ನು ಇಲ್ಲಿದೆ ಓದಿ.
ಮನೆಯಲ್ಲಿಯೇ ಕುಳಿತು ಪಡಿತರ ಚೀಟಿ ಮಾಡಿಸುವುದು ಹೇಗೆ?
ಉಮಾಂಗ್ ಅಪ್ಲಿಕೇಶನ್ ಮೂಲಕ ಮನೆಯಲ್ಲಿಯೇ ಕುಳಿತು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಇದರಿಂದ ಸರ್ಕಾರಿ ಕಚೇರಿಗಳಿಗೆ, ಪಂಚಾಯಿತಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಬರುವುದಿಲ್ಲ. ಅದರಲ್ಲೂ ವಿಶೇಷವಾಗಿ ದೂರದ ಊರಿನಲ್ಲಿರುವವರಿಗೆ ಇದು ಮತ್ತಷ್ಟು ಪ್ರಯೋಜನಕಾರಿಯಾಗಲಿದೆ. ಮೊಬೈಲ್ ಒಂದಿದ್ದರೆ ಸಾಕು ಕ್ಷಣಮಾತ್ರದಲ್ಲಿ ಇದನ್ನು ಪೂರ್ಣಗೊಳಿಸಬಹುದು.
ಅರ್ಜಿ ಸಲ್ಲಿಸುವ ಹಂತ ಹಂತದ ಪ್ರಕ್ರಿಯೆ:
ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಹೀಗೆ ಅರ್ಜಿ ಸಲ್ಲಿಸಿದೆ:
- ಮೊದಲಿಗೆ, ಉಮಾಂಗ್ ಅಪ್ಲಿಕೇಶನ್ (UMANG App) ಡೌನ್‌ಲೋಡ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಿಕೊಳ್ಳಿ. ನಂತರ, ಅಪ್ಲಿಕೇಶನ್‌ನಲ್ಲಿ 'ಯೂಟಿಲಿಟಿ ಸರ್ವೀಸ್' ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ 'ಅಪ್ಲೈ ರೇಷನ್ ಕಾರ್ಡ್' ಆಯ್ಕೆ ಸಿಗುತ್ತದೆ.
- ಸದ್ಯ ಉಮಾಂಗ್ ಆಪ್‌ನಲ್ಲಿ ಈ ಸೌಲಭ್ಯ ಕೆಲವು ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ರಾಜ್ಯಗಳ ಪಟ್ಟಿಯನ್ನು ಪರಿಶೀಲಿಸಿ.
- ಈಗ ನಿಮಗೆ ಅರ್ಜಿ ಫಾರ್ಮ್ ತೆರೆದುಕೊಳ್ಳುತ್ತದೆ.
- ಈ ಫಾರ್ಮ್‌ನಲ್ಲಿ ನಿಮ್ಮ ಹೆಸರು, ತಂದೆ/ಪತಿಯ ಹೆಸರು, ವಿಳಾಸ ಮತ್ತು ಕುಟುಂಬ ಸದಸ್ಯರ ಸಂಖ್ಯೆಯಂತಹ ಎಲ್ಲ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಇದರ ನಂತರ, ಆಧಾರ್ ಕಾರ್ಡ್, ಅಡ್ರಸ್ ಪ್ರೂಫ್ ಮತ್ತು ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ಗಳಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
- ಫಾರ್ಮ್ ಸಲ್ಲಿಸಿದ ತಕ್ಷಣ, ನಿಮಗೆ ನೋಂದಣಿ ನಂಬರ್ ಸಿಗುತ್ತದೆ.
- ಈ ಸಂಖ್ಯೆಯನ್ನು ಬಳಸಿ, ನಿಮ್ಮ ಪಡಿತರ ಚೀಟಿ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಬಹುದು.
- ಅರ್ಜಿ ಅನುಮೋದನೆಯಾದ ನಂತರ, ಪಡಿತರ ಚೀಟಿಯನ್ನು ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ.
- ಅದನ್ನು ನೀವು ಆನ್‌ಲೈನ್‌ನಲ್ಲಿಯೂ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವಿದೆ.
ಆಫ್‌ಲೈನ್‌ನಲ್ಲಿ ಪಡಿತರ ಚೀಟಿ ಹೀಗೆ ಮಾಡಿಕೊಳ್ಳಿ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಷ್ಟ ಆದವರು ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದ ಜನ ಸೇವಾ ಕೇಂದ್ರ, ಆಹಾರ ಇಲಾಖೆ ಕಚೇರಿ, ತಹಶೀಲ್ದಾರ್ ಅಥವಾ ಬ್ಲಾಕ್ ಕಚೇರಿಗೆ ಭೇಟಿ ನೀಡಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಿದರೂ, ನಿಮ್ಮ ಅರ್ಜಿ ರಿಜೆಕ್ಟ್ ಆಗಬಾರದು ಅಂದ್ರೆ ಸರಿಯಾದ ಮಾಹಿತಿ ಒದಗಿಸುವುದು ಮುಖ್ಯ.
ಪಡಿತರ ಚೀಟಿ ಇ-ಕೆವೈಸಿ ಮಾಡುವುದು ಹೇಗೆ?
ಪಡಿತರ ಚೀಟಿಗಾಗಿ ಸರ್ಕಾರ ಇ-ಕೆವೈಸಿಯನ್ನು ಇತ್ತೀಚೆಗೆ ಕಡ್ಡಾಯ ಮಾಡಿದೆ. ಇ-ಕೆವೈಸಿ ಮಾಡಿಲ್ಲದಿದ್ದರೆ, ರೇಷನ್ ಕಾರ್ಡ್ ಮೂಲಕ ಸಿಗುವ ಸೌಲಭ್ಯಗಳು ಸಿಗದೇ ಇರಬಹುದು. ನೀವು ಪಡಿತರ ಚೀಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಇ-ಕೆವೈಸಿ ಭರ್ತಿ ಮಾಡಬಹುದು. ಇದರ ಜೊತೆಗೆ, ಹತ್ತಿರದ ಗ್ರಾಹಕ ಸೇವಾ ಕೇಂದ್ರ ಅಥವಾ ಪಡಿತರ ವಿತರಕರ ಅಂಗಡಿಗೆ ಹೋಗಿಯೂ ಕೆವೈಸಿ ಅಪ್ಡೇಟ್ ಮಾಡಬಹುದು.


Click it and Unblock the Notifications