ಭಾರತೀಯರಿಗೆ ಚಿನ್ನದ ಮೇಲಿನ ಹೂಡಿಕೆ ಫೇವರಿಟ್. ಹೆಚ್ಚಿನ ಚಿನ್ನ ಇದೆ ಅಂದರೆ ಅದು ಸಮಾಜದ ಸ್ಥಾನಮಾನ ಹಾಗೂ ಆರ್ಥಿಕ ಸ್ಥಿರತೆಯ ದ್ಯೋತಕ ಅಂತಲೇ ಪರಿಗಣಿಸಲಾಗುತ್ತದೆ. ಮದುವೆ ಸೇರಿದಂತೆ ಕುಟುಂಬದ ಯಾವುದೇ ಪ್ರಮುಖ ಕಾರ್ಯಕ್ರಮದಲ್ಲಿ ಚಿನ್ನವನ್ನು ಖರೀದಿ ಮಾಡುತ್ತಾರೆ ಅಥವಾ ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಾರೆ. ಇಡೀ ವಿಶ್ವದಲ್ಲೇ ಚಿನ್ನಕ್ಕೆ ಅತಿ ದೊಡ್ಡ ಗ್ರಾಹಕ ದೇಶ ಭಾರತ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಪ್ರಕಾರ, 2019ರಲ್ಲಿ ಭಾರತದ ಕುಟುಂಬಗಳು 25,000 ಟನ್ ಚಿನ್ನವನ್ನು ಖರೀದಿ ಮಾಡಿದೆ. ಚಿನ್ನದ ಆಭರಣ ಅಥವಾ ಗಟ್ಟಿಗಳ ಸಂಗ್ರಹವನ್ನು ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದಕ್ಕೆ ಬಹುತೇಕರು ಆದ್ಯತೆ ನೀಡುತ್ತಾರೆ. ಆರ್ ಬಿಐನ ಗೋಲ್ಡ್ ಮಾನೆಟೈಸೇಷನ್ ಯೋಜನೆ ಅಡಿಯಲ್ಲಿ ಚಿನ್ನವನ್ನು ಸಹ ಎಫ್.ಡಿ. ರೀತಿಯಲ್ಲೇ ಬ್ಯಾಂಕ್ ಗಳಲ್ಲಿ ಇಡಬಹುದು. ಅದರ ಮೇಲೆ ಬಡ್ಡಿ ಕೂಡ ದೊರೆಯುತ್ತದೆ.
ಏನಿದು ಗೋಲ್ಡ್ ಮಾನೆಟೈಸೇಷನ್ ಯೋಜನೆ?
ರೂರಲ್ ರೀಜನಲ್ ಬ್ಯಾಂಕ್ ಗಳನ್ನು ಹೊರತುಪಡಿಸಿದಂತೆ ಎಲ್ಲ ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳಲ್ಲೂ ಯಾವುದೇ ಬ್ಯಾಲೆನ್ಸ್ ಅಗತ್ಯ ಇಲ್ಲದೆ ಖಾತೆಯನ್ನು ತೆರೆಯಬಹುದು. ಕೆವೈಸಿ ನಿಯಮಗಳು ಅನ್ವಯ ಆಗುತ್ತದೆ. ಚಿನ್ನವನ್ನು ಬ್ಯಾಂಕ್ ನಲ್ಲಿ ಜಮೆ ಮಾಡುವ ಮುನ್ನ ಖಾತೆ ಇರಬೇಕು. ಕನಿಷ್ಠ ಡೆಪಾಸಿಟ್ ಅಂತ ಒಂದು ಸಲಕ್ಕೆ ಮೂವತ್ತು ಗ್ರಾಮ್ ಚಿನ್ನ ಇಡಬೇಕಾಗುತ್ತದೆ. ಇಲ್ಲಿ ಚಿನ್ನ ಅಂದರೆ ಗಟ್ಟಿ, ನಾಣ್ಯ, ಆಭರಣ ಮಾತ್ರ. ಹರಳು ಮತ್ತಿತರ ಲೋಹಗಳು ಆಗಲ್ಲ. ಈ ಯೋಜನೆ ಅಡಿಯಲ್ಲಿ ಗರಿಷ್ಠ ಮಿತಿ ಎಂಬುದಿಲ್ಲ. ಚಿನ್ನದ ಗುಣಮಟ್ಟವನ್ನು ಕೇಂದ್ರದಿಂದ ಮಾನ್ಯತೆ ಪಡೆದ ಮತ್ತು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕೇಂದ್ರದಲ್ಲಿ ಪರೀಕ್ಷಿಸಲಾಗುತ್ತದೆ.
ಚಿನ್ನವನ್ನು ಪಡೆದ 30 ದಿನಗಳ ನಂತರ ಪ್ರಮಾಣೀಕೃತ ಕೇಂದ್ರಗಳಿಂದ ಸಲಹೆಯನ್ನು ಪಡೆದು, 995 ಶುದ್ಧತೆಯ ಚಿನ್ನಕ್ಕೆ ಎಷ್ಟು ಬೆಲೆ ಇರುತ್ತದೋ ಅಷ್ಟು ಮೊತ್ತವನ್ನು ಆ ಬ್ಯಾಂಕ್ ಗಳು ಖಾತೆಗೆ ಜಮೆ ಮಾಡುತ್ತವೆ. ಡೆಪಾಸಿಟ್ ಮಾಡುತ್ತಿರುವ ವ್ಯಕ್ತಿ ತಾನು ಪಡೆದ ಡೆಪಾಸಿಟ್ ರಸೀದಿಯನ್ನು ತಂದು ಬ್ಯಾಂಕ್ ಗೆ ಸಲ್ಲಿಸುತ್ತಾರೋ ಬಿಡುತ್ತಾರೋ ಈ ಮೊತ್ತ ಜಮೆ ಮಾಡುವ ಪ್ರಕ್ರಿಯೆ ನಡೆದುಹೋಗುತ್ತದೆ. ಒಂದು ವೇಳೆ ಡೆಪಾಸಿಟ್ ಮಾಡುವವರ ಬಳಿಯೇ 995 ಶುದ್ಧತೆಗೆ ಬ್ಯಾಂಕ್ ನಿಂದ ಪ್ರಮಾಣೀಕೃತವಾದ ಕೇಂದ್ರದಿಂದ ಪಡೆದ ಪ್ರಮಾಣಪತ್ರ ಇದ್ದಲ್ಲಿ ಅದನ್ನು ಸಲ್ಲಿಸಬಹುದು. ಆ ಪ್ರಮಾಣಪತ್ರ ಸ್ವೀಕರಿಸಿದ ನಂತರವೇ ಬ್ಯಾಂಕ್ ನಿಂದ ಅಂತಿಮವಾದ ಠೇವಣಿ ಪ್ರಮಾಣಪತ್ರ ನೀಡಲಾಗುತ್ತದೆ.
ಚಿನ್ನದ ಡೆಪಾಸಿಟ್ ಅವಧಿ ಮುಗಿದ ನಂತರ ಅಸಲು ಮತ್ತು ಬಡ್ಡಿಯನ್ನು ನಗದು ರೂಪದಲ್ಲಾದರೂ ಪಡೆಯಬಹುದು ಅಥವಾ ಚಿನ್ನವಾಗಿಯೂ ಪಡೆದುಕೊಳ್ಳಬಹುದು. ಮಧ್ಯಮಾವಧಿ ಅಥವಾ ದೀರ್ಘಾವಧಿ ಬಡ್ಡಿ ಬಂದಲ್ಲಿ ಅಥವಾ ಅವಧಿಗೆ ಮುನ್ನವೇ ಅಸಲು ವಾಪಸ್ ತೆಗೆದುಕೊಳ್ಳುವುದಕ್ಕೆ ಬಯಸಿದಲ್ಲಿ ನಗದನ್ನೇ ನೀಡಲಾಗುತ್ತದೆ. ಅಂದಹಾಗೆ ಡೆಪಾಸಿಟ್ ಮೆಚ್ಯೂರಿಟಿ ಸಂದರ್ಭದಲ್ಲಿ ಠೇವಣಿ ಮಾಡಿದವರಿಗೂ ತಾವು ಯಾವ ಸ್ವರೂಪದಲ್ಲಿ ಚಿನ್ನ ನೀಡಿದ್ದರೋ ಅದೇ ರೀತಿಯಲ್ಲಿ ಸಿಗುವುದಿಲ್ಲ. ಏಕೆಂದರೆ, ಬ್ಯಾಂಕ್ ಅಥವಾ ಸರ್ಕಾರದಿಂದ ಆಭರಣ ವರ್ತಕರಿಗೆ ಚಿನ್ನವನ್ನು ಮಾರುವುದೋ ಅಥವಾ ಸಾಲ ನೀಡುವುದೋ ಮಾಡಲಾಗಿರುತ್ತದೆ. ಇನ್ನು ಈ ಯೋಜನೆಯಲ್ಲಿ ಭಾರತೀಯರು ಮಾತ್ರ ಪಾಲ್ಗೊಳ್ಳಲು ಸಾಧ್ಯ.
ಕನಿಷ್ಠ ಲಾಕಿಂಗ್ ಅವಧಿ
ಅಲ್ಪಾವಧಿ ಠೇವಣಿ: ಬ್ಯಾಂಕ್ ಗಳಲ್ಲಿ ಒಂದರಿಂದ ಮೂರು ವರ್ಷದ ತನಕ ಠೇವಣಿ ಇಡಬಹುದು. ಅಷ್ಟೇ ಅಲ್ಲ, ಒಂದು ವರ್ಷ ಮೂರು ತಿಂಗಳು, ಎಂಟು ತಿಂಗಳು ಈ ರೀತಿಯಾಗಿಯೂ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಥ ಡೆಪಾಸಿಟ್ ಗಳನ್ನು ಬ್ಯಾಂಕ್ ಬ್ಯಾಲೆನ್ಸ್ ಶೀಟ್ ನಲ್ಲಿ ಸಾಲ ಎಂದು ಪರಿಗಣಿಸಲಾಗುತ್ತದೆ. ಈ ಠೇವಣಿಗಳಿಗೆ ಬಡ್ಡಿ ದರ ನಿಗದಿ ಮಾಡಲು ಬ್ಯಾಂಕ್ ಗಳು ಸ್ವತಂತ್ರ. ಆಯಾ ನಿರ್ದಿಷ್ಟ ದಿನಗಳಲ್ಲಿ ಠೇವಣಿ ಖಾತೆಗಳಿಗೆ ಬಡ್ಡಿ ಜಮೆಯಾಗುತ್ತದೆ. ಬ್ಯಾಂಕ್ ಗಳು ಚಿನ್ನವನ್ನು ಪಡೆದು, ಅದರ ಮೌಲ್ಯ ಮಾಪನ ಮಾಡಿಸಿ, ಆ ಬಗ್ಗೆ ಸಲಹೆ ಪಡೆಯುವುದಕ್ಕೆ ಮೂವತ್ತು ದಿನ ಅಥವಾ ಯಾವುದು ಬೇಗ ಆಗುತ್ತದೋ ಆ ದಿನವನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಆವಾಗಿಂದ ಚಿನ್ನದ ವ್ಯವಹಾರ ಮಾಡಲು ಲಭ್ಯ ಎಂದು ಪರಿಗಣಿಸಿ, ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಅವಧಿಗೆ ಮುನ್ನವೇ ತೆಗೆದುಕೊಳ್ಳುವುದಕ್ಕೆ ಅವಕಾಶ ಇದ್ದರೂ ಕನಿಷ್ಠ ಲಾಕಿಂಗ್ ಅವಧಿ ಎಂದು ಒಂದು ವರ್ಷ ಇದೆ.
ಸರ್ಕಾರದಿಂದಲೇ ಬಡ್ಡಿ ದರ ನಿರ್ಧಾರ
ಈ ಠೇವಣಿಗಳನ್ನು ಬ್ಯಾಂಕ್ ಗಳಲ್ಲೇ ಮಾಡಲಾಗುತ್ತದೆ. ಆದರೆ ಭಾರತ ಸರ್ಕಾರದ ಪರವಾಗಿ ಬ್ಯಾಂಕ್ ಗಳು ತೆಗೆದುಕೊಳ್ಳುತ್ತವೆ. ಈ ಠೇವಣಿಗಳು ಬ್ಯಾಂಕ್ ನ ಬ್ಯಾಲೆನ್ಸ್ ಶೀಟ್ ನಲ್ಲಿ ಕಾಣಿಸುವುದಿಲ್ಲ. ಬದಲಿಗೆ ಇದು ಸರ್ಕಾರದ ಸಾಲವಾಗಿರುತ್ತದೆ. ಮಧ್ಯಮಾವಧಿ ಠೇವಣಿ ಐದರಿಂದ ಏಳು ವರ್ಷಕ್ಕೆ ಹಾಗೂ ದೀರ್ಘಾವಧಿ ಠೇವಣಿ ಹನ್ನೆರಡರಿಂದ ಹದಿನೈದು ವರ್ಷಕ್ಕೆ ಮಾಡಬಹುದು. ಅಥವಾ ಅವಧಿಯನ್ನು ಆಯಾ ಸಮಯಕ್ಕೆ ತಕ್ಕಂತೆ ಸರ್ಕಾರವೇ ನಿರ್ಧರಿಸುತ್ತದೆ. ಮಧ್ಯಮಾವಧಿ ಠೇವಣಿಗಳಿಗೆ ಬಡ್ಡಿ ದರ 2.25%/pa ಇದ್ದರೆ, ದೀರ್ಘಾವಧಿ ಠೇವಣಿಗೆ 2.50%/pa ಇದೆ. ಈ ಠೇವಣಿಗಳಿಗೆ ಬಡ್ಡಿ ದರವನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಪ್ರತಿ ವರ್ಷದ ಮಾರ್ಚ್ 31ಕ್ಕೆ ಪಾವತಿಸಬಹುದು. ಮಧ್ಯಮಾವಧಿ ಠೇವಣಿಗೆ ಕನಿಷ್ಠ ಲಾಕಿಂಗ್ ಅವಧಿ ಮೂರು ವರ್ಷ. ಇನ್ನು ದೀರ್ಘಾವಧಿ ಠೇವಣಿಗೆ ಐದು ವರ್ಷ ಕನಿಷ್ಠ ಲಾಕಿಂಗ್ ಅವಧಿ ಆಗಿರುತ್ತದೆ.
More From GoodReturns

Gold-Silver Today Rates Live Updates: ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ

Gold Price Today: ಯುಗಾದಿ ದಿನವೇ ಚಿನ್ನ ಪ್ರಿಯರಿಗೆ ಬಂಪರ್; 2,090 ರೂ. ಇಳಿಕೆ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications