ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಹೂಡಿಕೆದಾರರು ಪ್ರತಿ ತಿಂಗಳು ಕೂಡಾ ನಿಗದಿತ ಮೊತ್ತವನ್ನು ಆರ್‌ಡಿ ಖಾತೆಗೆ ಜಮೆ ಮಾಡುತ್ತಾರೆ. ಬ್ಯಾಂಕ್ ಸಾಮಾನ್ಯವಾಗಿ ಒಂದರಿಂದ ಹತ್ತು ವರ್ಷದ ಅವಧಿಯ ಆರ್‌ಡಿಯನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಪ್ರತಿ ತಿಂಗಳು ಕೂಡಾ ಹೂಡಿಕೆ ಮಾಡಬಹುದಾಗಿದ್ದು, ಕಡಿಮೆ ಅವಧಿಯಲ್ಲಿ ಅಧಿಕ ಮೊತ್ತ ಉಳಿತಾಯ ಮಾಡಬಹುದು.
ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಅಥವಾ ನಿಶ್ಚಿತ ಠೇವಣಿಯಂತೆಯೇ ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿಯನ್ನು ಸುರಕ್ಷಿತ ಹೂಡಿಕೆ ವಿಧಾನಗಳಲ್ಲಿ ಒಂದಾಗಿ ಪರಿಗಣನೆ ಮಾಡಲಾಗುತ್ತದೆ. ಫಿಕ್ಸಿಡ್ ಡೆಪಾಸಿಟ್ ಹಾಗೂ ರೆಕ್ಯೂರಿಂಗ್ ಡೆಪಾಸಿಟ್ ಎರಡೂ ಕೂಡಾ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದ್ದು, ನಿಗದಿತ ರಿಟರ್ನ್ ಅನ್ನು ನೀಡುತ್ತದೆ. ಆದರೆ ಫಿಕ್ಸಿಡ್ ಡೆಪಾಸಿಟ್ ಮತ್ತು ರೆಕ್ಯೂರಿಂಗ್ ಡೆಪಾಸಿಟ್ ನಡುವೆ ಹಲವಾರು ವ್ಯತ್ಯಾಸಗಳು ಇದೆ.

ಎಫ್‌ಡಿ ಮತ್ತು ಆರ್‌ಡಿ ನಡುವಿನ ವ್ಯತ್ಯಾಸ ತಿಳಿಯಿರಿ
ಹೂಡಿಕೆದಾರರು ಒಂದೇ ಬಾರಿಗೆ ನಿಗದಿತ ಮೊತ್ತವನ್ನು ನಿಗದಿತ ಅವಧಿಗೆ ಹೂಡಿಕೆ ಮಾಡುವುದಕ್ಕೆ ಫಿಕ್ಸಿಡ್ ಡೆಪಾಸಿಟ್ ಎಂದು ಕರೆಯಲಾಗುತ್ತದೆ. ಆದರೆ ರೆಕ್ಯೂರಿಂಗ್ ಡೆಪಾಸಿಟ್ ಎಂಬುವುದು ಹೂಡಿಕೆದಾರರು ನಿಗದಿತ ಅವಧಿಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಹೂಡಿಕೆ ಮಾಡುವುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಎಫ್‌ಡಿ ಹಾಗೂ ಆರ್‌ಡಿ ಎರಡಕ್ಕೂ ತೆರಿಗೆ ಪ್ರಯೋಜನ ಲಭ್ಯವಾಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಆರು ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಎಫ್‌ಡಿ ಹಾಗೂ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಸಂದರ್ಭದಲ್ಲೇ ಬ್ಯಾಂಕುಗಳು ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗಿದೆ. ಪ್ರಮುಖವಾಗಿ ವರ್ಷಗಳ ಅವಧಿಯ ಆರ್‌ಡಿ ಬಡ್ಡಿದರ ಹೆಚ್ಚಿಸಿದೆ. ಯಾವೆಲ್ಲ ಬ್ಯಾಂಕುಗಳು ಆರ್‌ಡಿ ಬಡ್ಡದರವನ್ನು ಏರಿಸಿದೆ, ಎಲ್ಲಿ ಅಧಿಕ ಬಡ್ಡಿದರವಿದೆ ಎಂದು ತಿಳಿಯೋಣ ಮುಂದೆ ಓದಿ...
ಡಿಸಿಬಿ ಬ್ಯಾಂಕ್: 5 ವರ್ಷಗಳ ಅವಧಿಯ ಆರ್‌ಡಿ ಮೇಲೆ ಡಿಸಿಬಿ ಬ್ಯಾಂಕ್ ಶೇಕಡ 7.60ರಷ್ಟು ಬಡ್ಡಿದರ ನೀಡಿದೆ. ನೀವು 5 ವರ್ಷಗಳ ಕಾಲ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಅಂತಿಮವಾಗಿ 3.66 ಲಕ್ಷ ರೂಪಾಯಿ ಹೂಡಿಕೆಯನ್ನು ನೀಡುತ್ತದೆ.
ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಐದು ವರ್ಷಗಳ ಅವಧಿಯ ಆರ್‌ಡಿ ಮೇಲೆ ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಪ್ರತಿ ತಿಂಗಳು ನೀವು ಆರ್‌ಡಿಗೆ 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಐದು ವರ್ಷದ ಅವಧಿಯಲ್ಲಿ 3.65 ಲಕ್ಷ ರೂಪಾಯಿ ರಿಟರ್ನ್ ಅನ್ನು ಪಡೆಯಬಹುದಾಗಿದೆ.
ಇಂಡಸ್‌ಇಂಡ್ ಬ್ಯಾಂಕ್: 5 ವರ್ಷಗಳ ಅವಧಿಯ ಆರ್‌ಡಿ ಮೇಲೆ ಇಂಡಸ್‌ಇಂಡ್ ಬ್ಯಾಂಕ್ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. ನೀವು 5 ವರ್ಷಗಳ ಕಾಲ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಕೊನೆಯಲ್ಲಿ 3.62 ಲಕ್ಷ ರೂಪಾಯಿ ಮೊತ್ತವನ್ನು ಪಡೆಯಬಹುದಾಗಿದೆ.
ಎಯು ಸ್ಮಾಲ್ ಪೈನಾನ್ಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಐದು ವರ್ಷಗಳ ಅವಧಿಯ ಆರ್‌ಡಿ ಮೇಲೆ ಎಯು ಸ್ಮಾಲ್ ಪೈನಾನ್ಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎರಡು ಕೂಡಾ ಶೇಕಡ 7.20ರಷ್ಟು ಬಡ್ಡಿದರವನ್ನು ನೀಡುತ್ತದೆ. ನೀವು ಈ ಎರಡು ಬ್ಯಾಂಕ್‌ಗಳಲ್ಲಿ ಪ್ರತಿ ತಿಂಗಳು 5000 ರೂಪಾಯಿ ಹೂಡಿಕೆ ಮಾಡಿದರೆ, ಐದು ವರ್ಷದ ಬಳಿಕ ಬಡ್ಡಿದರ ಸೇರ್ಪಡೆಯಾಗಿ 3.62 ಲಕ್ಷ ರೂಪಾಯಿ ರಿಟರ್ನ್ ಲಭ್ಯವಾಗಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications