ಇನ್ನೇನು ಕೆಲವೇ ದಿನಗಳಲ್ಲಿ ಗಣರಾಜ್ಯೋತ್ಸವ ದಿನ (Republic Day 2026) ಬರಲಿದೆ. ಪ್ರತೀ ವರ್ಷವೂ ಗಣರಾಜ್ಯೋತ್ಸವ ದಿನವನ್ನು ಜನವರಿ 26 ರಂದು ಆಚರಿಸಲಾಗುತ್ತದೆ. 1950, ಜನವರಿ 26 ರಂದು ಭಾರತೀಯ ಸಂವಿಧಾನವು (Constitution of India) ಜಾರಿಗೆ ಬಂದಾಗ ಭಾರತವು ಗಣರಾಜ್ಯವಾಯಿತು. ಈ ದಿನವನ್ನು ನೆನಪಿಸುವ ಸಲುವಾಗಿ, ಈ ದಿನದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸುವ ಉದ್ದೇಶದಿಂದ ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ (School-College) ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಅದೇ ರೀತಿ ಗಣರಾಜ್ಯೋತ್ಸವ ಸಂದರ್ಭದಲ್ಲೂ ಭಾಷಣ, ಪ್ರಬಂಧ (Speech-Essay Competition), ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಗಣರಾಜ್ಯೋತ್ಸವ ದಿನ ಭಾಷಣ ಸ್ಪರ್ಧೆಯಲ್ಲಿ ತಾನೂ ಭಾಗವಹಿಸಬೇಕು, ಬಹುಮಾನ ಪಡೆಯಬೇಕು ಎಂದು ಹಲವು ವಿದ್ಯಾರ್ಥಿಗಳ ಕನಸು. ಆದ್ರೆ ಹೆಚ್ಚಿನವರಿಗೆ ಹೇಗೆ ತಯಾರಿ ನಡೆಸಬೇಕೆಂಬುದೇ ಗೊತ್ತಿರಲ್ಲ. ಅಂತಹವರಿಗಾಗಿ ಇಲ್ಲಿದೆ ನೋಡಿ ಟಿಪ್ಸ್. ಹೀಗೆ ಭಾಷಣ ತಯಾರಿ ಮಾಡಿದ್ರೆ, ಬಹುಮಾನ ಪಡೆಯೋದಂತೂ ಗ್ಯಾರಂಟಿ.
ಅಭ್ಯಾಸ ಸರಿಯಾಗಿರಲಿ:
ಭಾಷಣ ಮಾಡುವ ಮೊದಲು, ಗಣರಾಜ್ಯೋತ್ಸವದ ಇತಿಹಾಸ, ಆಚರಣೆ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನದ ಕರಡು ರಚನೆ ಮತ್ತು ಸ್ವಾತಂತ್ರ್ಯ ನಂತರದ ರಾಷ್ಟ್ರದ ಬೆಳವಣಿಗೆ ಬಗ್ಗೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಿ.
ಭಾಷಣ ರಚಿಸುವುದು ಹೇಗೆ?
ಭಾಷಣ ರಚಿಸುವ ಮುನ್ನ ಮೂರು ಭಾಗಗಳಾಗಿ ವಿಂಗಡಿಸಬೇಕು. ಅದರಲ್ಲಿ ಪ್ರಾರಂಭ (Introduction), ಮಧ್ಯ ಭಾಗ (Body) ಮತ್ತು ಮುಕ್ತಾಯವಾಗಿರುತ್ತದೆ (Conclusion).
ಪ್ರಾರಂಭ: ನಮಸ್ಕಾರದಿಂದ ಭಾಷಣ ಆರಂಭಿಸಿ, ದಿನಾಂಕ ಮತ್ತು ಸಂದರ್ಭವನ್ನು ವಿವರಿಸಿ. (ಉದಾ: ಪ್ರೀತಿಯ ಸ್ನೇಹಿತರೇ, ಇಂದು ನಾವು 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ) ಎಂದು ಹೇಳುತ್ತಾ ಒಂದೆರಡು ಮುಖ್ಯ ವಾಕ್ಯಗಳನ್ನು ಸೇರಿಸಿ. ಇದು ಜನರನ್ನು ಗಮನ ಸೆಳೆಯುತ್ತದೆ.
ಮಧ್ಯ ಭಾಗ: ಮುಖ್ಯ ವಿಷಯಗಳನ್ನು ಇಲ್ಲಿ ಹೇಳಬೇಕು. ಅಂದರೆ, ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನದ ಮಹತ್ವ, ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ, ಯುವಕರ ಪಾತ್ರ, ಸಣ್ಣ ಕಥೆಗಳನ್ನು ಹೇಳುತ್ತಾ ಭಾಷಣ ಮುಂದುವರೆಸಬೇಕು.
ಮುಕ್ತಾಯ: ಭಾಷಣದ ಅಂತ್ಯದಲ್ಲಿ ಸ್ಲೋಗನ್‌ಗಳನ್ನು ಬಳಸಬೇಕು. ನಂತರ ಧನ್ಯವಾದ ಹೇಳಬೇಕು.
ಆತ್ಮವಿಶ್ವಾಸ ಇರಲಿ:
ಯಾವುದೇ ವಿಷಯದ ಬಗ್ಗೆ, ಎಲ್ಲಾದರೂ ಮಾತನಾಡುತ್ತಿದ್ದೀರಿ ಎಂದಾದರೆ, ಆ ಬಗ್ಗೆ ಸ್ಪಷ್ಟವಾಗಿ ಮತ್ತು ಆತ್ಮವಿಶ್ವಾಸ, ಭಾವನಾತ್ಮಕವಾಗಿ ಮಾತನಾಡುಲು ಅಭ್ಯಾಸ ಮಾಡಿಕೊಳ್ಳಿ. ಅದಕ್ಕಾಗಿ ಮೊದಲೇ ಅಭ್ಯಾಸ ಮಾಡಿಕೊಂಡರೆ ಬಹಳ ಉತ್ತಮ. ಇನ್ನು ನಿಮ್ಮ ಬಾಡಿ ಲ್ಯಾಂಗ್ವೇಜ್ ಕೂಡಾ ಇಲ್ಲಿ ಮುಖ್ಯವಾಗಿರುತ್ತದೆ.
ಸಮಯ ನಿರ್ವಹಣೆಯೂ ಮುಖ್ಯ
ಇನ್ನು ನೀವು ರೆಡಿ ಮಾಡುವ ಭಾಷಣ ಸಮಯದ ಮಿತಿಯಲ್ಲಿರಲಿ. ಅಂದರೆ ಆಯೋಜಕರು ನೀಡುವ ಸಮಯದ ಒಳಗಿದ್ದರೆ ತುಂಬಾ ಒಳ್ಳೆಯದು. ನಿಮ್ಮ ಭಾಷಣ ಚಿಕ್ಕದಾಗಿ, ಚೊಕ್ಕದಾಗಿದ್ದರೆ ತುಂಬಾನೇ ಒಳ್ಳೆಯದು. ಅತೀ ಉದ್ದದ ಭಾಷಣ ಕೇಳುಗರಿಗೂ ಬೋರಾಗುವಂತೆ ಮಾಡಬಹುದು.
ಭಾಷಣದಲ್ಲಿ ಸೇರಿಸಬೇಕಾದ ಮುಖ್ಯ ವಿಷಯಗಳು:
- ಗಣರಾಜ್ಯೋತ್ಸವದ ಇತಿಹಾಸ: ಜನವರಿ 26,1950ರಂದು ಸಂವಿಧಾನ ಜಾರಿ
- ಸ್ವಾತಂತ್ರ್ಯ ಹೋರಾಟಗಾರರು: ಗಾಂಧೀಜಿ, ಜವಾಹರಲಾಲ್ ನೆಹರೂ, ಅಂಬೇಡ್ಕರ್ ಅವರ ಕೊಡುಗೆಗಳು
- ಸಾಂವಿಧಾನದ ಮೌಲ್ಯಗಳು: ಸ್ವಾತಂತ್ರ್ಯ, ಸಮಾನತೆ, ನ್ಯಾಯದ ಬಗ್ಗೆ ವಿವರಿಸಿ
- ಯುವಕರ ಪಾತ್ರ. ಪ್ರಸ್ತುತ ಸಮಾಜದಲ್ಲಾಗುತ್ತಿರುವ ಸಮಸ್ಯೆಗಳು ಮತ್ತು ನಾವು ಹೇಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂಬುದನ್ನು ಹೇಳಿ.


Click it and Unblock the Notifications