ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡಾ ಒಂದಾಗಿದೆ. ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು ಜೂನ್ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಲಕ್ಷಾಂತರ ಜನರು ಈ ಯೋಜನೆಯ ಪ್ರಯೋಜವನ್ನು ಪಡೆಯುತ್ತಿದ್ದಾರೆ.
ಈ ನಡುವೆ ಎಲ್ಲರಿಗಿಂತಲೂ ಉತ್ತಮವಾಗಿ ಈ ಯೋಜನೆಯ ಬಳಕೆಯನ್ನು ವಸತಿ ಗ್ರಾಹಕರು ಮಾಡುತ್ತಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ರಾಜ್ಯಾದ್ಯಂತ ವಸತಿ ಗ್ರಾಹಕರು ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆ 'ಗೃಹ ಜ್ಯೋತಿ'ಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಹೇಗೆ ಎಂದು ತಿಳಿಯೋಣ
ಜೂನ್ 2023 ರಲ್ಲಿ ಪ್ರಾರಂಭವಾದಾಗಿನಿಂದ LT-1 ಮತ್ತು LT2(A) ವರ್ಗಗಳಲ್ಲಿ 85.36% ಗ್ರಾಹಕರು ಯೋಜನೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಇಂಧನ ಇಲಾಖೆಯ ಇತ್ತೀಚಿನ ಡೇಟಾ ತೋರಿಸುತ್ತದೆ. 97.85% ರಷ್ಟು ಜನರು ಯೋಜನೆಯಡಿಯಲ್ಲಿ ಒಳಗೊಂಡಿರುವ ವರ್ಗದಲ್ಲಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಅತಿ ಹೆಚ್ಚು ವ್ಯಾಪ್ತಿಯನ್ನು ಹೊಂದಿದೆ.
ನಂತರ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (94.57%) ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (92.04%) ಇದೆ. ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಬೆಸ್ಕಾಂ) 75.75% ಗ್ರಾಹಕರು ಮಾತ್ರ ಯೋಜನೆಯಡಿಯಲ್ಲಿ ಒಳಗೊಂಡಿರುವ ಕಡಿಮೆ ವ್ಯಾಪ್ತಿಯನ್ನು ದಾಖಲಿಸಿದೆ.
ವ್ಯಾಪ್ತಿಗೆ ವಿದ್ಯುತ್ ಬಳಕೆಯ ಮಾದರಿಗಳು ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯು 200-ಯೂನಿಟ್ ಹೊಂದಿರುವ ಕಾರಣ ಕಡಿಮೆ ವಿದ್ಯುತ್ ಬಳಕೆಯ ಪ್ರದೇಶಗಳು ಹೆಚ್ಚಿನ ವ್ಯಾಪ್ತಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ಅನ್‌ಲಿಂಕ್ ಹೀಗೆ ಮಾಡಿ
ಬಾಡಿಗೆ ವಸತಿಗಳಲ್ಲಿ ಉಳಿದುಕೊಂಡಿರುವ ಮತ್ತು ಸ್ಥಳಾಂತರಗೊಳ್ಳುವಾಗ ಆ ಮನೆಯ ಗೃಹಜ್ಯೋತಿಯಿಂದ ಹೊರಗುಳಿದು ಹೊಸ ಮನೆಯ ಗೃಹಜ್ಯೋತಿಯ ಫಲಾನುಭವಿಯಾಗಲು ನಿಮಗೆ ಸಾಧ್ಯವಾಗುತ್ತಿಲ್ಲವೇ?. ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್‌ನ್ಯೂಸ್ ರಾಜ್ಯ ಸರ್ಕಾರವು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ 'ಡಿಲಿಂಕಿಂಗ್' ಆಯ್ಕೆಗೆ ಈಗ ಅವಕಾಶ ನೀಡಿದೆ.
ಇಂಧನ ಇಲಾಖೆಯು, "ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಗೃಹ ಜ್ಯೋತಿ ಅಡಿಯಲ್ಲಿ ತಮ್ಮ ನೋಂದಣಿಯನ್ನು ಡಿಲಿಂಕ್ ಮಾಡಬಹುದು," ಎಂದು ತಿಳಿಸಿದೆ. ಗ್ರಾಹಕರು/ಬಾಡಿಗೆದಾರರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿದ ಅದೇ ಪೋರ್ಟಲ್‌ಗೆ ಭೇಟಿ ನೀಡಬೇಕು. ಅವರ ಆಧಾರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಬೇಕು ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.


Click it and Unblock the Notifications