ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆಗಿದೆ. ಆದರೆ ಭಾರತದಲ್ಲಿ ಜನರು ಕ್ರಿಕೆಟ್ ಮೇಲೆ ಅತೀ ಅಧಿಕ ಒಲವು ತೋರುತ್ತಾ ಬಂದಿದ್ದಾರೆ. ಭಾರತೀಯರು ಕ್ರಿಕೆಟ್ ಅನ್ನು ಕೇವಲ ಕ್ರೀಡೆಯಾಗಿ ನೋಡಲ್ಲ. ಬದಲಾಗಿ ಅದೊಂದು ನಮ್ಮ ಆಟಗಾರರ ರಾಷ್ಟ್ರೀಯ ಧರ್ಮ ಎಂಬಂತೆ ನೋಡುತ್ತಾರೆ.
ಸಾಮಾನ್ಯವಾಗಿಯೇ ಕ್ರಿಕೆಟಿಗರಿಗೆ ದೇವರ ಪಟ್ಟವನ್ನು ನೀಡಲಾಗುತ್ತದೆ. ಇನ್ನು ಅದೆಷ್ಟೋ ಮಂದಿ ಕ್ರಿಕೆಟ್ ದಿಗ್ಗಜರ ಮಂದಿರವನ್ನು ಕೂಡಾ ಕಟ್ಟಿಸಿಕೊಂಡಿದ್ದಾರೆ. ಈ ನಡುವೆ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡೆಗಳಲ್ಲಿ ಒಂದಾಗಿದೆ ಎಂಬುವುದು ಗಮನಾರ್ಹ.

ಭಾರತೀಯ ಕ್ರಿಕೆಟಿಗರು ಬೃಹತ್ ಆದಾಯವನ್ನು ಕ್ರಿಕೆಟ್‌ನಿಂದ ಪಡೆಯುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ, ಬೇರೆ ಹೂಡಿಕೆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಭಾರತದ 7 ಶ್ರೀಮಂತ ಕ್ರಿಕೆಟಿಗರ ಆದಾಯ, ಆಸ್ತಿ ವಿವರವನ್ನು ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ...
1. ಸಚಿನ್ ತೆಂಡೂಲ್ಕರ್
'ಕ್ರಿಕೆಟ್ ದೇವರು' ಎಂದೂ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಹೇಳಬಹುದು. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಕೂಡ ಹೌದು. ಸಚಿನ್ ತೆಂಡೂಲ್ಕರ್ ನಿವ್ವಳ ಆದಾಯ 150 ಮಿಲಿಯನ್ ಡಾಲರ್ ಅಥವಾ ಅಂದಾಜು 1250 ಕೋಟಿ ರೂಪಾಯಿ ಆಗಿದೆ.
2. ವಿರಾಟ್ ಕೊಹ್ಲಿ
ಕ್ರಿಕೆಟಿಗ ವಿರಾಟ್ ಕೊಹ್ಲಿ ಆಸ್ತಿ ಸುಮಾರು 1000 ಕೋಟಿ ರೂಪಾಯಿ ಆಗಿದೆ. ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ವಿರಾಟ್ ಕೊಹ್ಲಿ 126 ಮಿಲಿಯನ್ ಡಾಲರ್ ಅಥವಾ ಸುಮಾರು ಅಂದಾಜು 1050 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಹಲವಾರು ಬ್ರ್ಯಾಂಡ್‌ಗಳ ಅಂಬಾಸಿಡರ್ ಕೂಡಾ ಆಗಿದ್ದಾರೆ.
3. ಎಂಎಸ್ ಧೋನಿ
ಭಾರತದ ಅತೀ ಶ್ರೀಮಂತ ಕ್ರಿಕೆಟಿಗರ ಪೈಕಿ ಮೂರನೇ ಸ್ಥಾನದಲ್ಲಿ ನಾವು ಮಹಿ ಎಂದು ಕರೆಯುವ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಇದ್ದಾರೆ. ವರದಿಗಳ ಪ್ರಕಾರ ಎಂಎಸ್ ಧೋನಿ ನಿವ್ವಳ ಆದಾಯವು ಅಂದಾಜು 125 ಮಿಲಿಯನ್ ಡಾಲರ್ ಅಥವಾ 1040 ಕೋಟಿ ರೂಪಾಯಿ ಆಗಿದೆ.
4. ಸೌರವ್ ಗಂಗೂಲಿ
ದಾದ ಎಂದೇ ಪ್ರಸಿದ್ಧರಾದ ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡಾ ನಮ್ಮ ಶ್ರೀಮಂತ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸೌರವ್ ಗಂಗೂಲಿ ನಿವ್ವಳ ಆದಾಯವು 60 ಮಿಲಿಯನ್ ಡಾಲರ್ ಅಥವಾ 498.9 ಕೋಟಿ ರೂಪಾಯಿ ಆಗಿದೆ.
5. ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್ 1999 ರಿಂದ 2013 ರವರೆಗೆ ಭಾರತವನ್ನು ಪ್ರತಿನಿಧಿಸಿದ ಆಟವಾಡಿದ ಭಾರತದ ಮಾಜಿ ಕ್ರಿಕೆಟಿಗರಾಗಿದ್ದಾರೆ. ಈ ಮಾಜಿ ಕ್ರಿಕೆಟಿಗ ಕೂಡಾ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ವೀರೇಂದ್ರ ಸೆಹ್ವಾಗ್ ಅಂದಾಜು 45 ಮಿಲಿಯನ್ ಡಾಲರ್ ಅಥವಾ 374 ಕೋಟಿ ರೂಪಾಯಿ ನಿವ್ವಳ ಆದಾಯವನ್ನು ಹೊಂದಿದ್ದಾರೆ.
6. ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಭಾರತದ ಮಾಜಿ ಕ್ರಿಕೆಟಿಗರಾಗಿದ್ದು, ಎಲ್ಲ ರೀತಿಯ ಕ್ರಿಕೆಟ್ ಪಂದ್ಯಗಳಲ್ಲಿ ಯುವರಾಜ್ ಸಿಂಗ್ ಆಟವಾಡಿದ್ದಾರೆ. ಆಲ್ ರೌಂಡರ್ ಕೂಡಾ ಆಗಿದ್ದಾರೆ. ಭಾರತದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಕೂಡ ಇದ್ದಾರೆ. ವರದಿಯ ಪ್ರಕಾರ, ಯುವರಾಜ್ ಸಿಂಗ್ ನಿವ್ವಳ ಆದಾಯ 35 ಮಿಲಿಯನ್ ಡಾಲರ್ ಅಥವಾ 291 ಕೋಟಿ ರೂಪಾಯಿ ಆಗಿದೆ.
7. ರೋಹಿತ್ ಶರ್ಮಾ
ರೋಹಿತ್ ಗುರುನಾಥ್ ಶರ್ಮಾ ಪ್ರಸ್ತುತ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಪ್ರಸ್ತುತ ಭಾರತದ ತಂಡದ ನಾಯಕನ ನಿವ್ವಳ ಆದಾಯವು 26 ಮಿಲಿಯನ್ ಡಾಲರ್ ಅಥವಾ 216 ಕೋಟಿ ರೂಪಾಯಿ ಆಗಿದೆ.


Click it and Unblock the Notifications