ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರ್ಥಿಕವಾಗಿ ದುರ್ಬಲ ಪರಿಸ್ಥಿತಿಯಲ್ಲಿರುವ ಬ್ರಾಹ್ಮಣ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಅತ್ಯಂತ ಜನಪ್ರಿಯ ಮತ್ತು ಉಪಯುಕ್ತ ಯೋಜನೆ "ಸಾಂದೀಪನಿ ಶಿಷ್ಯವೇತನ". 2025-26ನೇ ಸಾಲಿನ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಈಗ ಆರಂಭವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ದೊಡ್ಡ ಸಹಾಯವಾಗಲಿದೆ.

ಸಾಂದೀಪನಿ ಶಿಷ್ಯವೇತನ ಯೋಜನೆ ಎಂದರೇನು?
ಬ್ರಾಹ್ಮಣ ಸಮುದಾಯದ ಕಡಿಮೆ ಆದಾಯದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳು ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು ಸುಗಮವಾಗಿ ಮುಂದುವರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರಿ ಅನುದಾನದ ನೆರವಿನಿಂದ ನಡೆಯುವ ಈ ವಿದ್ಯಾರ್ಥಿವೇತನವು ಮೆಟ್ರಿಕ್ ನಂತರದ ಎಲ್ಲಾ ಕೋರ್ಸ್‌ಗಳಿಗೆ ಅನ್ವಯಿಸುವಂತೆ ವಿನ್ಯಾಸಗೊಂಡಿದೆ.
ಶುಲ್ಕ ಮರುಪಾವತಿ, ಮಾಸಿಕ ಭತ್ಯೆ, ಪುಸ್ತಕ-ಉಪಕರಣ ವೆಚ್ಚ, ಹಾಸ್ಟೆಲ್ ಹಾಗೂ ಪ್ರಯಾಣದಂತ ಮೂಲಭೂತ ಖರ್ಚುಗಳನ್ನು ಕಡಿಮೆ ಮಾಡಲು ಈ ಯೋಜನೆ ಪರಿಣಾಮಕಾರಿ ಸಹಾಯ ಒದಗಿಸುತ್ತದೆ.
ಈ ಯೋಜನೆಯಡಿ ಸಿಗುವ ಆರ್ಥಿಕ ನೆರವು:
1. ವಾರ್ಷಿಕ ನಿರ್ವಹಣಾ ಭತ್ಯೆ
ಪಿ.ಯು.ಸಿ., ಡಿಪ್ಲೋಮಾ ಮತ್ತು ಸಾಮಾನ್ಯ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ.1,500ರಂತೆ 10 ತಿಂಗಳಿಗೆ ಒಟ್ಟು ರೂ.15,000 ನೀಡಲಾಗುತ್ತದೆ. ಇದು ವಿದ್ಯಾರ್ಥಿಯ ದೈನಂದಿನ ಶಿಕ್ಷಣ ವೆಚ್ಚ ಭರಿಸಲು ಉಪಯೋಗವಾಗುತ್ತದೆ.
2. ಶುಲ್ಕ ಮರುಪಾವತಿ ಸೌಲಭ್ಯ
- CET ಅಥವಾ NEET ಮೂಲಕ ಸಾಮಾನ್ಯ ಪ್ರವೇಶ ಪಡೆದು ವೃತ್ತಿಪರ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸೇರಿರುವವರಿಗೆ ಈ ಸೌಲಭ್ಯ ಅನ್ವಯಿಸುತ್ತದೆ.
- ಸರ್ಕಾರಿ ನಿಗದಿತ ಶುಲ್ಕದ 2/3 ಭಾಗವನ್ನು ಮರುಪಾವತಿ ರೂಪದಲ್ಲಿ ಪಡೆಯಬಹುದು.
- ಗರಿಷ್ಠ ಮಿತಿಯಾಗಿ ರೂ.1 ಲಕ್ಷ ವರೆಗೆ ಪಾವತಿಸಲಾಗುತ್ತದೆ.
ಗಮನಿಸಬೇಕಾದುದು:
- ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಗ್ರಂಥಾಲಯ, ಪರೀಕ್ಷಾ ಮತ್ತು ಕ್ರೀಡಾ ಶುಲ್ಕ ಮಾತ್ರ ಮರುಪಾವತಿಗೆ ಒಳಪಡುತ್ತದೆ.
- COMED-K ಮೂಲಕ ಪ್ರವೇಶ ಪಡೆದವರಿಗೆ ಬೋಧನಾ ಶುಲ್ಕದ ಶೇ.50ಕ್ಕಷ್ಟೇ ಮರುಪಾವತಿ.
- ಮ್ಯಾನೇಜ್‌ಮೆಂಟ್ ಸೀಟ್ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ.
ಯಾರು ಅರ್ಹರು?
ಈ ಯೋಜನೆಗೆ ರಾಜ್ಯ ಸರ್ಕಾರವು ಕೆಲವು ನಿಯಮಗಳನ್ನು ನಿಗದಿಪಡಿಸಿದೆ:
- ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷ ಒಳಗೆ ಇರಬೇಕು.
- ಅಭ್ಯರ್ಥಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಕರ್ನಾಟಕ ರಾಜ್ಯಕ್ಕೆ ಸೇರಿದ ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ಅಧ್ಯಯನ ಮಾಡುತ್ತಿರಬೇಕು.
- ಹಿಂದಿನ ವರ್ಷ ಬರೆಯಲಾದ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
- ಅರ್ಜಿದಾರರ ಆಧಾರ್ ಕಾರ್ಡಿನಲ್ಲಿ ಕರ್ನಾಟಕದ ಶಾಶ್ವತ ವಿಳಾಸ ಇರಬೇಕು.
- ಒಂದೇ ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳಿಗೆ ಮಾತ್ರ ಸೌಲಭ್ಯ. ಹೆಣ್ಣು ಮಕ್ಕಳಿಗೆ ಈ ಮಿತಿ ಅನ್ವಯಿಸುವುದಿಲ್ಲ.
ಯಾರು ಅರ್ಹರಲ್ಲ?
- ಒಂದೇ ತರದ ಕೋರ್ಸ್‌ನ್ನು ಎರಡು ಬಾರಿ ಓದುತ್ತಿರುವ ವಿದ್ಯಾರ್ಥಿಗಳು.
- ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಓದುತ್ತಾ ಸ್ಟೈಪೆಂಡ್ ಪಡೆಯುವ ಇಂಟರ್ನ್ ವಿದ್ಯಾರ್ಥಿಗಳು.
- ಪದೇಪದೇ ಕೋರ್ಸ್ ಬದಲಾಯಿಸಿರುವವರು.
ಅರ್ಜಿಗೆ ಕೊನೆಯ ದಿನ:
- ಈ ಯೋಜನೆಗಾಗಿ ಪ್ರಕಟಣೆ ಡಿಸೆಂಬರ್ 03, 2025ರಂದು ಹೊರಬೀಳಲಾಗಿದೆ.
- ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
- ಅರ್ಜಿಯ ಕೊನೆಯ ದಿನಾಂಕ: ಫೆಬ್ರವರಿ 28, 2026
ಆನ್‌ಲೈನ್ ಮೂಲಕ ಅರ್ಜಿ ಹೇಗೆ ಸಲ್ಲಿಸಬೇಕು?
- ಸಾಂದೀಪನಿ ಶಿಷ್ಯವೇತನಕ್ಕೆ ಕಡ್ಡಾಯವಾಗಿ SSP (State Scholarship Portal) ಮೂಲಕವೇ ಅರ್ಜಿ ಸಲ್ಲಿಸಬೇಕು.
- ಜಾಲತಾಣಕ್ಕೆ ಭೇಟಿ ನೀಡಿ: ssp.postmatric.karnataka.gov.in
- ಹೊಸದಾಗಿ ನೋಂದಣಿ ಮಾಡಿ ಅಥವಾ ಲಾಗಿನ್ ಆಗಿ.
- ವೈಯಕ್ತಿಕ ವಿವರ, ಶಿಕ್ಷಣ ಮಾಹಿತಿ, ಬ್ಯಾಂಕ್ ವಿವರ ಸೇರಿ ಎಲ್ಲಾ ಅಗತ್ಯ ಮಾಹಿತಿಯನ್ನು ನಮೂದಿಸಿ.
- ಶುಲ್ಕ ಮರುಪಾವತಿ ಮತ್ತು ಮಾಸಿಕ ಭತ್ಯೆ ಎರಡಕ್ಕೂ ಒಂದೇ ಅರ್ಜಿ ಸಲ್ಲಿಸಬೇಕು.
ಅರ್ಜಿಗೆ ಬೇಕಾಗುವ ದಾಖಲೆಗಳು:
- ತಹಶೀಲ್ದಾರರಿಂದ ಪಡೆದ ಬ್ರಾಹ್ಮಣ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ EWS ಪ್ರಮಾಣ ಪತ್ರ
- ಆಧಾರ್ ಕಾರ್ಡ್
- 10ನೇ ತರಗತಿಯ ಅಂಕಪಟ್ಟಿ
- ಹಿಂದಿನ ತರಗತಿಯ ಅಂಕಪಟ್ಟಿ
- ಪಿ.ಯು.ಸಿ. ನೊಂದಣಿ ಸಂಖ್ಯೆ (1ನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ)
- ಶುಲ್ಕ ಪಾವತಿ ರಸೀದಿ
- ಪ್ರಾಂಶುಪಾಲರಿಂದ ಅಧ್ಯಯನ ದೃಢೀಕರಣ
- ದಿವ್ಯಾಂಗ ವಿದ್ಯಾರ್ಥಿಗಳಿಗೆ ಸರ್ಕಾರದ ವಿಶೇಷ ಚೇತನ ಪ್ರಮಾಣ ಪತ್ರ
ಹೆಚ್ಚಿನ ಮಾಹಿತಿಗೆ:
ಯೋಜನೆ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಮಂಡಳಿಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು:
📞 080 2960 5888
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Education Rules: ಹೊಸ ಶಿಕ್ಷಣ ನೀತಿ ವಿರುದ್ಧ ಪೋಷಕರ ಆಕ್ರೋಶ! ವಯಸ್ಸು ಸಡಿಲಿಕೆಗೆ ಆಗ್ರಹ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications