ಪ್ರಸ್ತುತ ಎಲ್ಲ ಕಾರ್ಯವೂ ಕೂಡಾ ಡಿಜಿಟಲ್ ಆಗಿದೆ. ನಾವು ಯಾವುದೇ ಆಹಾರ ಬೇಕಾದರೂ, ದಿನಸಿ ಬೇಕಾದರೂ, ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬೇಕಾದರೂ, ಎಲ್ಲವೂ ಕೂಡಾ ಆನ್‌ಲೈನ್ ಮೂಲಕ ಸಾಧ್ಯವಾಗುತ್ತದೆ. ಸಮಯ ಕಳೆಯುತ್ತಿದ್ದಂತೆ ಭಾರತದಲ್ಲಿ ಬ್ಯಾಂಕಿಂಗ್ ಸೇವೆಯು ಆನ್‌ಲೈನ್ ಮೂಲಕ ಲಭ್ಯವಾಗುತ್ತಿದೆ.
ಬಹುತೇಕ ಎಲ್ಲ ಬ್ಯಾಂಕಿಂಗ್ ಕಾರ್ಯವನ್ನು ನಾವು ಆನ್‌ಲೈನ್ ಮೂಲಕವೇ ಪ್ರಸ್ತುತ ಮಾಡಬಹುದಾಗಿದೆ. ಹಾಗೆಯೇ ಸರಳ ಮತ್ತು ಸುಲಭವಾಗಿದೆ. ಈ ನಡುವೆ ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಈ ವರದಿಯ ಪ್ರಕಾರ ಎಸ್‌ಬಿಐ ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡದೆ ಬರೀ ಒಂದು ಕರೆಯಲ್ಲೇ ಅಕೌಂಟ್ ಸ್ಟೇಟ್‌ಮೆಂಟ್ ಪಡೆಯಲು ಸಾಧ್ಯವಾಗಲಿದೆ.

ಈಗ ನೀವು ಎಸ್‌ಬಿಐ ಖಾತೆಯ ಸ್ಟೇಟ್‌ಮೆಂಟ್ ಅನ್ನು ಪಡೆಯಬೇಕಾದರೆ, ನೀವು ಮನೆಯಲ್ಲಿ ಕುಳಿತೇ ಸ್ಟೇಟ್‌ಮೆಂಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬ್ಯಾಂಕ್ ಕೆಲವೊಂದು ನಂಬರ್‌ಗಳನ್ನು ಬಿಡುಗಡೆ ಮಾಡಿದೆ. ನೀವು ರಿಕ್ವೆಸ್ಟ್ ರಿಜಿಸ್ಟರ್ ಮಾಡಲು ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ನೀವು ರಿಕ್ವೆಸ್ಟ್ ಅನ್ನು ರೈಸ್ ಮಾಡಿದ ಕೆಲವೇ ಸಮಯದಲ್ಲಿ ನಿಮ್ಮ ಮೊಬೈಲ್ ಫೋನ್‌ಗೆ ಇಮೇಲ್ ಮೂಲಕ ಅಕೌಂಟ್ ಸ್ಟೇಟ್‌ಮೆಂಟ್ ಅನ್ನು ಕಳುಹಿಸಲಾಗುತ್ತದೆ.
ಟೋಲ್ ಫ್ರೀ ನಂಬರ್ ಅನ್ನು ತಿಳಿಯಿರಿ
ನಾವು ಮನೆಯಲ್ಲೇ ಕೂತು ನಮ್ಮ ಎಸ್‌ಬಿಐ ಅಕೌಂಟ್‌ನ ಸ್ಟೇಟ್‌ಮೆಂಟ್ ಅನ್ನು ಪಡೆಯಬೇಕಾದರೆ, ಎಸ್‌ಬಿಐ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ. 1800 1234 ಅಥವಾ 1800 2100 ಟೋಲ್ ಫ್ರೀ ಸಂಖ್ಯೆಗೆ ಎಸ್‌ಬಿಐ ಗ್ರಾಹಕರು ಕರೆ ಮಾಡಬಹುದಾಗಿದೆ. ಕರೆ ಮಾಡಿದ ಬಳಿಕ ನಿಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಮತ್ತು ವಹಿವಾಟು ಮಾಹಿತಿಯನ್ನು ಪಡೆಯಲು 1 ಅನ್ನು ಪ್ರೆಸ್ ಮಾಡಿ.
ಇದಾದ ಬಳಿಕ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಡಿಜಿಟ್ ಅನ್ನು ನಮೂದಿಸಿ. ಇನ್ನು ಖಾತೆಯ ಸ್ಟೇಟ್‌ಮೆಂಟ್ ಅನ್ನು ಪಡೆಯಲು ನಾವು ಕರೆ ಮಾಡಿದ ಬಳಿಕ 2 ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಅದಾದ ಬಳಿಕ ಗ್ರಾಹಕರ ಬಳಿ ಸ್ಟೇಟ್‌ಮೆಂಟ್ ಅವಧಿಯನ್ನು ನಮೂದಿಸಲು ಹೇಳಲಾಗುತ್ತದೆ. ಸ್ಟೇಟ್‌ಮೆಂಟ್ ಅವಧಿ ಆಯ್ಕೆ ಮಾಡಿದ ಬಳಿಕ ಬ್ಯಾಂಕ್ ಗ್ರಾಹಕರ ಇಮೇಲ್ ಐಡಿಗೆ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಕಳುಹಿಸಲಿದೆ.
ಬದಲಾಗುತ್ತಿರುವ ಬ್ಯಾಂಕಿಂಗ್ ಕ್ಷೇತ್ರ
ದಿನಕಳೆದಂತೆ ಬ್ಯಾಂಕಿಂಗ್ ಕ್ಷೇತ್ರವು ಖಂಡಿತವಾಗಿಯೂ ಸಾಕಷ್ಟು ಬದಲಾಗಿದೆ. ಈ ಹಿಂದೆ ಜನರು ಬ್ಯಾಂಕ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡಬೇಕಾದರೆ ಬ್ಯಾಂಕ್‌ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಆದರೆ ಅದಾದ ಬಳಿಕ ಎಟಿಎಂ ಬಂದಿದೆ. ಆದರೆ ಎಟಿಎಂನಿಂದಲೂ ಹಣ ಪಡೆಯಬೇಕಾದರೆ ಕೆಲವೊಮ್ಮೆ ಸರತಿ ಸಾಲು ನಿಲ್ಲಲೇಬೇಕು.
ಇನ್ನು ತಾಂತ್ರಿಕ ಪ್ರಗತಿ ಆಗುತ್ತಾ ಸಾಗಿದ್ದಂತೆ ಆನ್‌ಲೈನ್‌ನಲ್ಲೇ ಎಲ್ಲ ಡಿಜಿಟಲ್ ವಹಿವಾಟು ನಡೆಸಲು ಆರಂಭ ಮಾಡಲಾಗಿದೆ. ಡಿಜಿಟಲೈಸೇಷನ್‌ನ ಪ್ರಭಾವವು ಬ್ಯಾಂಕಿಂಗ್ ವಲಯದ ಮೇಲೆ ಹೆಚ್ಚಾಗಿ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಕಳೆದ ಹತ್ತು ವರ್ಷದಲ್ಲಿ ಸಾಕಷ್ಟು ಡಿಜಿಟಲ್ ಪ್ರಗತಿ ಸಂಭವಿಸಿದೆ. ಜನರು ಕೂಡಾ ತಾಂತ್ರಿಕ ಬೆಳವಣಿಗೆಗೆ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದಾರೆ.
ಗ್ರಾಹಕರು ತಮ್ಮ ಬ್ಯಾಂಕ್‌ನೊಂದಿಗೆ ನಡೆಸುವ ವಹಿವಾಟು ಮತ್ತು ಬ್ಯಾಂಕ್‌ಗಳು ನಡೆಸಲು ಬ್ಯಾಂಕಿಂಗ್ ವಹಿವಾಟಿನಲ್ಲಿ ಹಲವಾರು ಬದಲಾವಣೆಗಳು ಈಗಾಗಲೇ ಆಗಿದೆ. ಅದಕ್ಕೆ ಮುಖ್ಯ ಕಾರಣ ಡಿಜಿಟಲ್ ಕಾಂತ್ರಿಯಾಗಿದೆ. ಈ ಹಿಂದೆ ಬ್ಯಾಂಕಿಂಗ್ ವಹಿವಾಟಿಗೆ ಬ್ಯಾಂಕ್‌ನ ಬ್ರ್ಯಾಂಚ್‌ಗೆ ಹೋಗುವುದು ಕಡ್ಡಾಯವಾಗಿತ್ತು. ಆದರೆ ಈಗ ಎಲ್ಲವೂ ಕುಡಾ ಮನೆಯಲ್ಲೇ ಕುಳಿತು ಮಾಡಲು ಸಾಧ್ಯವಾಗುತ್ತದೆ.


Click it and Unblock the Notifications