ಭಾರತದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ವಿತರಕ ಹಣಕಾಸು ಸಂಸ್ಥೆಯಾದ ಎಸ್‌ಬಿಐ ಕಾರ್ಡ್ ತನ್ನ ಗ್ರಾಹಕರಿಗೆ ತಮ್ಮ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಯುಪಿಐ ಪಾವತಿಗಳನ್ನು ಮಾಡಲು ಈಗ ಅವಕಾಶ ನೀಡಲಾಗುತ್ತದೆ ಘೋಷಿಸಿದೆ. ಇದರಿಂದಾಗಿ ಎಸ್‌ಬಿಐ ಕಾರ್ಡ್ ಬಳಕೆದಾರರು ಇನ್ಮುಂದೆ ಯುಪಿಐ ಮರ್ಚೆಂಟ್ ಪೇಮೆಂಟ್ ಮಾಡುವುದು ಸುಲಭವಾಗಲಿದೆ.
ಈ ಸೌಲಭ್ಯವನ್ನು ಪಡೆಯಬೇಕಾದರೆ ಎಸ್‌ಬಿಐ ಕಾರ್ಡ್ ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಕಾರ್ಡ್ ನೋಂದಣಿಯಾದ ನಂತರ, ಗ್ರಾಹಕರು ಕೇವಲ ಮೆರ್ಚೆಂಟ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಅವರ ಯುಪಿಐ ಐಡಿ ಮತ್ತು ಪಿನ್ ಅನ್ನು ನಮೂದಿಸುವ ಮೂಲಕ ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಹೇಗೆ ಲಿಂಕ್ ಮಾಡುವುದು, ಬಳಸುವುದು, ಎಸ್‌ಬಿಐ ಎಂಡಿ ಏನು ಹೇಳುತ್ತಾರೆ ಎಂದು ತಿಳಿಯಲು ಮುಂದೆ ಓದಿ...

ಎಸ್‌ಬಿಐ ಕಾರ್ಡ್ ಎಂಡಿ ಹೇಳುವುದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಬಿಐ ಕಾರ್ಡ್‌ನ ಎಂಡಿ ಮತ್ತು ಸಿಇಒ ಆದ ರಾಮ ಮೋಹನ್ ರಾವ್ ಅಮರ, "ಹೊಸದಾಗಿ ಜಾರಿಗೆ ತಂದ ಈ ವ್ಯವಸ್ಥೆಯಿಂದಾಗಿ ಎಸ್‌ಬಿಐ ಕಾರ್ಡ್ ಗ್ರಾಹಕರು ತಮ್ಮ ಎಸ್‌ಬಿಐ ಕಾರ್ಡ್ ನೀಡಿದ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ ಬಳಸಲು ಸಾಧ್ಯವಾಗುತ್ತದೆ," ಎಂದು ಹೇಳಿದ್ದಾರೆ.
"ಇಂದು, ಯುಪಿಐ ಬೃಹತ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಪ್ರತಿದಿನ ಲಕ್ಷಾಂತರ ವಹಿವಾಟುಗಳು ನಡೆಯುತ್ತಲೇ ಇರುತ್ತದೆ. ಇದು ನಮ್ಮ ಗ್ರಾಹಕರಿಗೆ ಹೆಚ್ಚಿನ ಸರಳವಾದ ಬಳಕೆಗೆ ದಾರಿ ಮಾಡಿಕೊಡುತ್ತದೆ. ಇದರೊಂದಿಗೆ ಉದ್ಯಮವು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಎಸ್‌ಬಿಐ ರುಪೇ ಕ್ರೆಡಿಟ್ ಕಾರ್ಡ್ ಯುಪಿಐಗೆ ಲಿಂಕ್ ಮಾಡಿ
ಹಂತ 1: ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಯುಪಿಐ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಹಂತ 2: ಯುಪಿಐ ಅಪ್ಲಿಕೇಶನ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
ಹಂತ 3: ನೋಂದಣಿ ಪೂರ್ಣಗೊಂಡ ನಂತರ, Add Credit Card/Link Credit Card ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಕ್ರೆಡಿಟ್ ಕಾರ್ಡ್ ವಿತರಕರ ಪಟ್ಟಿಯಲ್ಲಿ SBI Credit Card ಆಯ್ಕೆ ಮಾಡಿ
ಹಂತ 5: ಲಿಂಕ್ ಮಾಡಲು SBI RuPay Credit Card ಅನ್ನು ಆಯ್ಕೆಮಾಡಿ
ಹಂತ 6: ನಿಮ್ಮ ಕ್ರೆಡಿಟ್ ಕಾರ್ಡ್‌ನ ಕೊನೆಯ 6 ಅಂಕೆಗಳನ್ನು ಮತ್ತು ಎಕ್ಸ್‌ಪೆರಿ ದಿನಾಂಕವನ್ನು ನಮೂದಿಸಿ.
ಹಂತ 7: ನಿಮ್ಮ 6-ಅಂಕಿಯ ಯುಪಿಐ ಪಿನ್ ಹಾಕಿಕೊಳ್ಳಿ
ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಇ-ಕಾಮರ್ಸ್ ಮೆರ್ಚೆಂಟ್ ಪೇಮೆಂಟ್ ಹೀಗೆ ಮಾಡಿ
ಹಂತ 1: ನೀವು ವ್ಯಾಪಾರ ಮಾಡಲು ಬಯಸುವ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ, ಪಾವತಿ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ಯುಪಿಯ ಸಕ್ರಿಯಗೊಳಿಸಿದ ಅಪ್ಲಿಕೇಶನ್ ಅನ್ನು ಆಯ್ಕೆಮಾಡಿ
ಹಂತ 2: ಯುಪಿಐ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ಮತ್ತು ನೋಂದಾಯಿತ ಎಸ್‌ಬಿಐ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ
ಹಂತ 3: ಪಾವತಿಯನ್ನು ಖಚಿತಪಡಿಸಲು ನಿಮ್ಮ 6 ಅಂಕಿಯ ಯುಪಿಐ ಪಿನ್ ಅನ್ನು ನಮೂದಿಸಿ
ಹಂತ 4: ಒಮ್ಮೆ ಪಾವತಿ ದೃಢೀಕರಣವನ್ನು ಮಾಡಿದ ನಂತರ, ಪಾವತಿ ಪೂರ್ಣಗೊಂಡ ನಂತರ ನಿಮ್ಮ ಮೆರ್ಚೆಂಟ್ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ.


Click it and Unblock the Notifications