ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಲವಾರು ಆನ್‌ಲೈನ್ ಸೇವೆಗಳನ್ನು ಮೊಬೈಲ್ ಸೇವೆಗಳನ್ನು ನೀಡುತ್ತದೆ. ಮುಖ್ಯವಾಗಿ ತನ್ನ ಗ್ರಾಹಕರಿಗೆ ಬ್ಯಾಂಕ್‌ನ ಯಾವುದೇ ಸೇವೆಯನ್ನು ಪಡೆಯಲು ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈ ಆನ್‌ಲೈನ್ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ. ಅದು ಕೂಡಾ ಎಸ್‌ಬಿಐ 9 ಬ್ಯಾಕಿಂಗ್ ಸೇವೆಗಳನ್ನು ಉಚಿತವಾಗಿ ನೀಡುತ್ತದೆ.
ಎಸ್‌ಬಿಐನ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯು ಯಾವುದೇ ಅಡೆತಡೆ ಇಲ್ಲದ ಬ್ಯಾಂಕಿಂಗ್ ಸೇವೆಯಾಗಿದೆ. ಗ್ರಾಹಕರು ತಮ್ಮ ಬ್ಯಾಂಕಿಂಗ್ ಸೇವೆಯನ್ನು ಯಾವುದೇ ಹೆಚ್ಚುವರಿ ತೊಂದರೆಗಳು ಇಲ್ಲದೆ ಸರಳವಾಗಿ ಪಡೆಯಲು ಸಾಧ್ಯವಾಗಲು ಎಂಬ ನಿಟ್ಟಿನಲ್ಲಿ ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಆರಂಭ ಮಾಡಿದೆ. ಎಸ್‌ಬಿಐ ಸೇವೆಯನ್ನು ಪಡೆಯಬೇಕಾದರೆ, ನೀವು ನಿಮ್ಮ ಮೊಬೈಲ್ ಡಿವೈಸ್ ಅನ್ನು ಬಳಕೆ ಮಾಡಬೇಕಾಗುತ್ತದೆ. ಹಾಗೆಯೇ ನಿಮ್ಮ ಫೋನ್ ನಂಬರ್ ಅಪ್‌ಡೇಟ್ ಆಗಿದೆಯೇ ಎಂದು ನೀವು ಚೆಕ್ ಮಾಡುವುದು ಅತೀ ಮುಖ್ಯವಾಗುತ್ತದೆ.

ವೆಬ್‌ಸೈಟ್, ಆಪ್‌ಗಳ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದ ಬ್ಯಾಂಕುಗಳು ಈಗ ವಾಟ್ಸಾಪ್‌ನಲ್ಲೇ ಸರಳ ಹಾಗೂ ಸುಲಭವಾಗಿ ವಾಟ್ಸಾಪ್ ಸೇವೆಯನ್ನು ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ವಾಟ್ಸಾಪ್ ಮೂಲಕ ಒಟ್ಟು 9 ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ. ಪ್ರಮುಖವಾಗಿ ಗ್ರಾಹಕರು ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡದೆ, ಆನ್‌ಲೈನ್ ಮೂಲಕ ಉಂಟಾಗುವ ಕೆಲವು ಗೊಂದಲಕ್ಕೆ ಒಳಗಾಗದೆ, ವಾಟ್ಸಾಪ್‌ನಲ್ಲಿ ಚಾಟ್ ಮಾಡಿಕೊಂಡು ಸೇವೆಯನ್ನು ಪಡೆಯಬಹುದು. ಉಚಿತ ಸೇವೆಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ವಿಧಾನ
ಹಂತ 1: ಎಸ್‌ಬಿಐ ವೆಬ್‌ಸೈಟ್ https://bank.sbi ಗೆ ನೀವು ಭೇಟಿ ನೀಡಿ, ಅಲ್ಲಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಹಂತ 2: ಎಸ್‌ಬಿಐನ ಸೇವೆಯನ್ನು ಪಡೆಯಬೇಕಾದರೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಮೊಬೈಲ್ ಬಳಸಿ.
ಹಂತ 3: ವಾಟ್ಸಾಪ್ ಸೇವೆಯನ್ನು ಆರಂಭ ಮಾಡಬೇಕಾದರೆ ಮೊದಲು ನಿಮ್ಮ ವಾಟ್ಸಾಪ್‌ನಿಂದ "Hello" ಎಂದು ಟೈಪ್ ಮಾಡಿ +919022690226ಗೆ ಮೆಸೇಜ್ ಮಾಡಿ. ಅದಾದ ಬಳಿಕ ಚಾಟ್ ಸೂಚನೆಯನ್ನು ಉಲ್ಲೇಖ ಮಾಡಿ.
ಹಂತ 4: ನೀವು ಪರ್ಯಾಯವಾಗಿ ನಿಮ್ಮ ಎಸ್‌ಬಿಐ ರಿಜಿಸ್ಟಾರ್ ಸಂಖ್ಯೆಗೆ +91720893314 ಮೂಲಕ ಎಸ್‌ಎಂಎಸ್ ಕೂಡಾ ಮಾಡಬಹುದು.
ಹಂತ 5: ರಿಜಿಸ್ಟ್ರೇಷನ್ ಸಂಪೂರ್ಣವಾದ ಬಳಿಕ ನಿಮಗೆ ವಾಟ್ಸಾಪ್‌ನಲ್ಲಿ ಕನ್ಫರ್ಮೆಷನ್ ಮೆಸೇಜ್ ಲಭ್ಯವಾಗಲಿದೆ.
ಹಂತ 6: ಅದಾದ ಬಳಿಕ ವಾಟ್ಸಾಪ್ ನಂಬರ್ +919022690226ಗೆ "Hello" ಎಂದು ಕಳುಹಿಸುವ ಮೂಲಕ ವಾಟ್ಸಾಪ್ ಸೇವೆಯನ್ನು ಆರಂಭ ಮಾಡಬೇಕಾಗುತ್ತದೆ. ಚಾಟ್‌ನ ಸೂಚನೆಯನ್ನು ಫಾಲೋ ಮಾಡಿದರೆ ಸೇವೆ ಲಭ್ಯವಾಗಲಿದೆ.
ಎಸ್‌ಬಿಐ ಬ್ಯಾಂಕ್‌ನಲ್ಲಿ ಲಭ್ಯವಿರುವ 9 ಬ್ಯಾಂಕಿಂಗ್ ಸೇವೆಗಳು
1. ಮಿನಿ ಸ್ಟೇಟ್‌ಮೆಂಟ್
2. ಖಾತೆಯಲ್ಲಿನ ಮೊತ್ತ
2. ಪಿಂಚಣಿ ರಶೀದಿ
4. ಸಾಲದ ಬಗ್ಗೆ ಮಾಹಿತಿ: (ಗೃಹ ಸಾಲ, ಕಾರು ಸಾಲ, ಚಿನ್ನದ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಸಾಲ) ಅರ್ಹತೆ, ಬಡ್ಡಿದರ ಇತ್ಯಾದಿ
5. ಡೆಪಾಸಿಟ್ ಬಗ್ಗೆ ಮಾಹಿತಿ: (ಉಳಿತಾಯ ಖಾತೆ, ರೆಕ್ಯೂರಿಂಗ್ ಡೆಪಾಸಿಟ್, ಟರ್ಮ್ ಡೆಪಾಸಿಟ್) ಬಡ್ಡಿದರ, ಮೊತ್ತ ಇತ್ಯಾದಿ
6. ಎನ್‌ಆರ್‌ಐ ಸೇವೆ: (ಎನ್‌ಆರ್‌ಇ ಖಾತೆ, ಎನ್‌ಆರ್‌ಒ ಖಾತೆ) ಫೀಚರ್, ಬಡ್ಡಿದರ
7. ಇನ್ಸ್ಟಾ ಖಾತೆಯನ್ನು ತೆರೆಯುವ ಮಾಹಿತಿ: (ಫೀಚರ್, ಅರ್ಹತೆ, ದಾಖಲೆ, ಇತ್ಯಾದಿ
8. ಸಹಾಯವಾಣಿ
9. ಪ್ರೀ ಅಪ್ರೋವ್ ಆದ ಸಾಲದ ಬಗ್ಗೆ ಮಾಹಿತಿ (ವೈಯಕ್ತಿಕ ಸಾಲ, ಕಾರು ಸಾಲ, ದ್ವಿಚಕ್ರ ಸಾಲ)


Click it and Unblock the Notifications