ದೇಶದಲ್ಲಿ ಅತೀ ದೊಡ್ಡ ಬ್ಯಾಂಕ್‌ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡಾ ಒಂದಾಗಿದೆ. ಈ ಸಾರ್ವಜನಿಕ ವಲಯದ ಬ್ಯಾಂಕ್ ಜನರಿಗೆ ಹಲವಾರು ಡಿಜಿಟಲ್ ಸ್ವರೂಪದ ಆಯ್ಕೆಗಳನ್ನು ನೀಡುತ್ತಾ ಬಂದಿದೆ. ಜನರಿಗೆ ಎಲ್ಲ ಕಾರ್ಯವು ಸುಲಭವಾಗುವಂತೆ ಎಸ್‌ಬಿಐ ಮಾಡಿದೆ. ಎಲ್ಲಾ ವಹಿವಾಟುಗಳ ಮೇಲೆ ನಿಗಾ ಇಡಬೇಕಾದರೆ, ಎಲ್ಲ ಗ್ರಾಹಕರು ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಉಳಿತಾಯ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.
ಇದಲ್ಲದೆ, ಬ್ಯಾಂಕ್ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದಾಗ ಕೂಡಲೇ ಮಾಹಿತಿ ಲಭ್ಯವಾಗುತ್ತದೆ. ಆದ್ದರಿಂದ, ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಮೊಬೈಲ್ ಫೋನ್ ಸಂಖ್ಯೆಯನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಆದರೆ ಎಸ್‌ಬಿಐ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಅಪ್‌ಡೇಟ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಿ
ಹಂತ 1: www.onlinesbi.com ಗೆ ಲಾಗಿನ್ ಆಗಿ
ಹಂತ 2: My Accounts ಅಡಿಯಲ್ಲಿನ Profile-Personal Details-Change mobile No ಮೇಲೆ ಕ್ಲಿಕ್ ಮಾಡಿ
ಹಂತ 3: ಮುಂದಿನ ಪೇಜ್‌ನಲ್ಲಿ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ
ಹಂತ 4: ಮೊಬೈಲ್ ಸಂಖ್ಯೆ ನಮೂದಿಸಿದ ಬಳಿಕ Submit ಮಾಡಿ
ಹಂತ 5: ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಡಿಜಿಟ್ ಡಿಸ್‌ಪ್ಲೇ ಆಗಲಿದೆ
ಹಂತ 6: ನಿಮ್ಮ ಖಾತೆಯಲ್ಲಿ ಯಾವುದೇ ಅವ್ಯವಹಾರ ಉಂಟಾದರೆ ನಿಮಗೆ ಮಾಹಿತಿ ಲಭ್ಯವಾಗಲಿದೆ.
ಎಸ್‌ಬಿಐ ಬ್ರಾಂಚ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್
ಹಂತ 1: ಸಮೀಪದ ಎಸ್‌ಬಿಐ ಬ್ರ್ಯಾಂಚ್‌ಗೆ ಭೇಟಿ ನೀಡಿ
ಹಂತ 2: ರಿಕ್ವೆಸ್ಟ್ ಪತ್ರವನ್ನು ಭರ್ತಿ ಮಾಡಿ
ಹಂತ 3: ಪತ್ರವನ್ನು ಭರ್ತಿ ಮಾಡಿ ಬಳಿಕ ಅದನ್ನು ಬ್ಯಾಂಕ್‌ನಲ್ಲಿ ನೀಡಿ
ಹಂತ 4: ವೆರಿಫಿಕೇಷನ್ ಬಳಿಕ ನಿಮ್ಮ ಮೊಬೈಲ್ ನಂಬರ್ ಖಾತೆಗೆ ಅಪ್‌ಡೇಟ್ ಆಗಲಿದೆ
ಹಂತ 5: ಇದಾದ ಬಳಿಕ ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ಈ ಬಗ್ಗೆ ಎಸ್‌ಎಂಎಸ್ ಲಭ್ಯವಾಗಲಿದೆ.
ಎಟಿಎಂನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಿ
ಹಂತ 1: ನಿಮ್ಮ ಸಮೀಪದ ಎಟಿಎಂಗೆ ಭೇಟಿ ನೀಡಿ
ಹಂತ 2: ರಿಜಿಸ್ಟ್ರೇಷನ್ ಆಯ್ಕೆಯನ್ನು ಮಾಡಿ
ಹಂತ 3: ಎಟಿಎಂ ಪಿನ್ ಅನ್ನು ನಮೂದಿಸಿ
ಹಂತ 4: ಮೊಬೈಲ್ ನಂಬರ್ ರಿಜಿಸ್ಟ್ರೇಚನ್ ಆಯ್ಕೆ ಮಾಡಿ
ಹಂತ 5: Change Mobile Number ಆಯ್ಕೆಯನ್ನು ಮಾಡಿ
ಹಂತ 6: ನಿಮ್ಮ ಹಳೆಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ confirm ಮಾಡಬೇಕಾಗುತ್ತದೆ.
ಹಂತ 7: ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅದನ್ನು confirm ಮಾಡಿ
ಹಂತ 8: ಹೊಸ ಹಾಗೂ ಹಳೆಯ ಮೊಬೈಲ್ ಸಂಖ್ಯೆಗೆ ಒಟಿಪಿಗಳು ಕಳುಹಿಸಲಾಗುತ್ತದೆ.
ಹಂತ 9: ಒಟಿಪಿ ಅನ್ನು ನಮೂದಿಸಿ, ಮೊಬೈಲ್ ನಂಬರ್ ಅನ್ನು ಅಪ್‌ಡೇಟ್ ಮಾಡಲಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications