ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸ್ಥಿರವಾದ ಅವಧಿಗೆ ಸಾಲ ಒದಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. ಅದಕ್ಕಾಗಿಯೇ ಎಸ್ ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯಿಸಲಾಗಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಕ್ರೆಡಿಟ್ ಕಾರ್ಡ್ ಹಾಗೂ ಸಾಲದ ಕಂತಿನ ವಿನಾಯಿತಿಯನ್ನು ಒದಗಿಸುವಂತೆ ಎಲ್ಲ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮನವಿ ಮಾಡಿದೆ.
ಆ ಕಾರಣಕ್ಕೆ 2020ರ ಆಗಸ್ಟ್ 31ನೇ ತಾರೀಕಿನವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಇದೆ. ಎಸ್ ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದವರು ಕೂಡ ಯಾವುದೇ ಮರುಪಾವತಿ ಮಾಡಬೇಕೆಂಬ ಕಡ್ಡಾಯ ಏನಿಲ್ಲ. ಆದರೆ ಸಾಲದ ಮೇಲೆ ಪೂರ್ವ ನಿರ್ಧಾರಿತವಾದ ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ.
ಎಸ್ ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಅನುಕೂಲಗಳೇನು?
* ಕಿಸಾನ್ ಕ್ರೆಡಿಟ್ ದಾರರ ಕೆಸಿಸಿ ಖಾತೆಯಲ್ಲಿ ಇರುವ ಕ್ರೆಡಿಟ್ ಬಾಕಿಗೆ, ಅಂದರೆ ಖಾತೆದಾರರ ಹಣಕ್ಕೆ ಬಡ್ಡಿ ದೊರೆಯುತ್ತದೆ. ಇನ್ನು 3 ಲಕ್ಷ ರುಪಾಯಿ ತನಕ ರೈತರು ಪಡೆಯುವ ಸಾಲಕ್ಕೆ 2% ಬಡ್ಡಿ ದರ ವಿನಾಯಿತಿ ಸಿಗುತ್ತದೆ. ಪ್ರಾಮಾಣಿಕ ಮರುಪಾವತಿಗೆ ವಾರ್ಷಿಕವಾಗಿ 3% ಬಡ್ಡಿ ದರ ವಿನಾಯಿತಿ ಸಿಗುತ್ತದೆ.
* ಘೋಷಿತ ಬೆಳೆಗಳು/ ವರದಿಯಾದ ಪ್ರದೇಶಗಳಿಗೆ ಕೆಸಿಸಿ ಸಾಲದ ಅಡಿಯಲ್ಲಿ ಬೆಳೆ ವಿಮೆ ಇರುತ್ತದೆ. ಮೊದಲ ವರ್ಷದ ಸಾಲದ ಮೊತ್ತವನ್ನು ಕೃಷಿಯ ವೆಚ್ಚ, ಕೊಯ್ಲು ನಂತರದ ವೆಚ್ಚ ಹಾಗೂ ಕೃಷಿ ಭೂಮಿ ನಿರ್ವಹಣೆ ವೆಚ್ಚವನ್ನು ಲೆಕ್ಕ ಹಾಕಿ ನಿರ್ಧರಿಸಲಾಗುತ್ತದೆ. ಸಾಲದ ಮೊತ್ತವನ್ನು ಮೊದಲ ವರ್ಷದ ನಂತರ ಹಣಕಾಸು ಪ್ರಮಾಣದಲ್ಲಿ ಹೆಚ್ಚಳವಾಗುವುದನ್ನು ಗಮನಿಸಿಯೇ ನಿರ್ಧರಿಸಲಾಗುತ್ತದೆ.
* 1.60 ಲಕ್ಷ ರುಪಾಯಿ ತನಕದ ಸಾಲಕ್ಕೆ ಭದ್ರತಾ ಅಡಮಾನ ಮನ್ನಾ ಮಾಡಲಾಗಿದೆ. ಎಸ್ ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಸದ್ಯಕ್ಕೆ ಸರಳ ಬಡ್ಡಿ ದರವಾಗಿ ವಾರ್ಷಿಕ 7% ವಿಧಿಸಲಾಗುತ್ತಿದೆ. ಒಂದು ವರ್ಷ ಅಥವಾ ಮರುಪಾವತಿಸುವ ಅವಧಿ ಎರಡರಲ್ಲಿ ಯಾವುದು ಶೀಘ್ರವೋ ಅದು ಅನ್ವಯ ಆಗುತ್ತದೆ.
* ಒಂದು ವೇಳೆ ಬಾಕಿ ಇರುವ ಅವಧಿಯೊಳಗೆ ಮರುಪಾವತಿ ಮಾಡದಿದ್ದಲ್ಲಿ ಬಡ್ಡಿಯನ್ನು ಕಾರ್ಡ್ ದರದಲ್ಲಿ ಹಾಕಲಾಗುತ್ತದೆ. ನಿಗದಿತ ದಿನಾಂಕದೊಳಗೆ ಸಾಲ ಮರುಪಾವತಿ ಆಗದಿದ್ದಲ್ಲಿ ಅರ್ಧವಾರ್ಷಿಕವಾಗಿ ಸಾಲ ಸೇರ್ಪಡೆ ಆಗುತ್ತಾ ಸಾಗುತ್ತದೆ. ಅಂದಹಾಗೆ ಮರುಪಾವತಿ ಅವಧಿಯು ಕೊಯ್ಲು, ಸಾಲ ಪಡೆದಿದ್ದನ್ನು ಯಾವ ಬೆಳೆಗೆ ಬಳಸಲಾಗಿದೆ, ಅದರ ಮಾರ್ಕೆಟಿಂಗ್ ಅವಧಿಯ ಮೇಲೆ ನಿಗದಿ ಆಗುತ್ತದೆ.
ಅರ್ಹತೆ ಮತ್ತು ಅಗತ್ಯ ದಾಖಲೆಗಳು
ಎಸ್ ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತಾ ಮಾನದಂಡಗಳು ಹೀಗಿವೆ:
* ಯಾವುದೇ ವೈಯಕ್ತಿಕ ರೈತರು, ಜಂಟಿಯಾಗಿ ಕೃಷಿ ಮಾಡುತ್ತಿರುವವರು, ಗೇಣಿದಾರ ರೈತರು ಈ ಕಾರ್ಡ್ ಪಡೆಯಲು ಅರ್ಹರು. ಜಂಟಿ ಬಾಧ್ಯತಾ ಗುಂಪುಗಳು, ಸ್ವಸಹಾಯ ಸಂಘಗಳು ಮತ್ತು ಗೇಣಿದಾರ ರೈತರು ಕೂಡ ಅರ್ಹರು. ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, PAN, ಚಾಲನಾ ಪರವಾನಗಿ, ಸರ್ಕಾರದಿಂದ ಮಾನ್ಯತೆ ಪಡೆದ ಫೋಟೋ ಇರುವಂಥ ಯಾವುದೇ ಗುರುತಿನ ಚೀಟಿ ಮುಂತಾದವು ಆಗುತ್ತದೆ.
* ವಿಳಾಸಕ್ಕೆ ದಾಖಲೆಯಾಗಿ ಆಧಾರ್ ಕಾರ್ಡ್, ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಮತ್ತಿತರ ಗೃಹಬಳಕೆ ಬಿಲ್ ಗಳು ಅಥವಾ ಸರ್ಕಾರದಿಂದ ಪ್ರಮಾಣೀಕೃತವಾದದ್ದು ವಿಳಾಸ ದೃಢೀಕರಣಕ್ಕೆ ಆಗುತ್ತದೆ.
ಅರ್ಜಿ ಹಾಕುವುದು ಹೇಗೆ?
ಎಸ್ ಬಿಐ ಕ್ರೆಡಿಟ್ ಕಾರ್ಡ್ ಗೆ ಅರ್ಜಿಯನ್ನು ಫಿಸಿಕಲ್ ಆಗಿ ಸಲ್ಲಿಸಬೇಕು. ಎಸ್ ಬಿಐ ವೆಬ್ ಸೈಟ್ ನಿಂದ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಎಲ್ಲ ಅಗತ್ಯ ಮಾಹಿತಿಗಳೊಂದಿಗೆ ಅರ್ಜಿಯನ್ನು ತುಂಬಿದ ನಂತರ ಹತ್ತಿರದ ಎಸ್ ಬಿಐ ಶಾಖೆಗೆ ಸಲ್ಲಿಸಬೇಕು. ಸಾಲ ವಿತರಿಸುವ ಅಧಿಕಾರಿಯು ಅರ್ಜಿಯನ್ನು ಪರಿಶೀಲನೆ ಮಾಡಿದ ನಂತರ ಸಾಲ ವಿತರಣೆ ಮಾಡಲಾಗುತ್ತದೆ. ಅರ್ಜಿದಾರರ ಕೈಗೆ ಕಿಸಾನ್ ಕ್ರೆಡಿಟ್ ಕಾರ್ಡ್ ತಲುಪಿದ ಮೇಲೆ ಸಾಲದ ಮೊತ್ತದವನ್ನು ಬಳಸಲು ಶುರು ಮಾಡಬಹುದು.


Click it and Unblock the Notifications