ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ಅವರ ಹಣಕಾಸು ನಿರ್ವಹಿಸುವುದಕ್ಕೆ ಹಲವಾರು ಪ್ರಯೋಜನ ಹಾಗೂ ಫೀಚರ್‌ಗಳನ್ನು ನೀಡುವ ಮೂಲಕ 'ಎಸ್‌ಬಿಐ ವೇತನ ಪ್ಯಾಕೇಜ್ ಖಾತೆ' (SBI Salary Package Account) ಗಳನ್ನು ಪರಿಚಯಿಸಿದೆ. ಎಸ್‌ಬಿಐ ಬ್ಯಾಂಕ್ ನಿಗದಿಪಡಿಸುವ ಪ್ಯಾಕೇಜ್ ಹಾಗೂ ಷರತ್ತುಗಳನ್ನು ಆಧರಿಸಿ ಈ ಖಾತೆಗಳಿಗೆ ನೀಡುವ ಬೆನಿಫಿಟ್ ಮತ್ತು ಫೀಚರ್ ಬದಲಾಗುತ್ತದೆ.
ಒಂದು ವೇಳೆ ನೀವು ಎಸ್‌ಬಿಐ ವೇತನ ಪ್ಯಾಕೇಜ್ ಖಾತೆಯನ್ನು ತೆರೆಯುವುದಕ್ಕೆ ಬಯಸುವುದಾದರೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ನೇರವಾಗಿ ಬ್ಯಾಂಕ್‌ನ್ನು ಸಂಪರ್ಕಿಸುವ ಮೂಲಕ ಅಂಥಹ ಅಕೌಂಟ್‌ಗಳಿಗೆ ನೀಡಲಾಗುವ ಆಫರ್ಸ್ ಹಾಗೂ ಅರ್ಹತೆ ಮಾನದಂಡಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಎಸ್‌ಬಿಐ ವೇತನ ಪ್ಯಾಕೇಜ್ ಖಾತೆಗೆ ಸಾಮಾನ್ಯವಾಗಿ ನೀಡಲಾಗಿರುವ ಕೆಲವು ಪ್ರಮುಖ ಫೀಚರ್ಸ್ ಇಲ್ಲಿವೆ:
ಎಸ್‌ಬಿಐ ಸಂಬಳ ಪ್ಯಾಕೇಜ್ ಖಾತೆ ಎಂದರೇನು?
ಸಂಬಳದ ಪ್ಯಾಕೇಜ್ ಖಾತೆಯು ವೇತನ ಪಡೆಯುತ್ತಿರುವ ಗ್ರಾಹಕರಿಗೆ ನೀಡುವ ವಿಶೇಷ ಉಳಿತಾಯ ಖಾತೆಯಾಗಿದ್ದು, ಅದು ಅನನ್ಯ ಪ್ರಯೋಜನ ಹಾಗೂ ಸೇವೆಗಳನ್ನು ಒದಗಿಸುತ್ತದೆ. ಜತೆಗೆ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸರ್ವೀಸ್‌ಗಳಿಗೂ ನಿರಂತರ ಪ್ರವೇಶವನ್ನು ಒದಗಿಸುತ್ತದೆ.
ಸಂಬಳ ಪ್ಯಾಕೇಜ್ ಖಾತೆಯ ಪ್ರಯೋಜನಗಳೇನು?
>ಶೂನ್ಯ ಬಾಲೆನ್ಸ್ ಖಾತೆ
>ಮಾಸಿಕ ಸರಾಸರಿ ಬಾಲೆನ್ಸ್ ಶುಲ್ಕಗಳಿಲ್ಲ
>ಆಟೋ ಸ್ವೀಪ್ ಫೆಸಿಲಿಟಿ (Optional)
> ವಿಶೇಷ ಅನುಕೂಲಗಳೊಂದಿಗೆ ಉಚಿತ ಡೆಬಿಟ್ ಕಾರ್ಡ್
>ಎಸ್‌ಬಿಐ/ ಇತರೆ ಬ್ಯಾಂಕ್ ಎಟಿಎಂಗಳಲ್ಲಿ ಅನಿಯಮಿತ ಸಂಖ್ಯೆಯ ವಹಿವಾಟು
>ಡಿಡಿ ಪಡೆಯುವುದಕ್ಕೆ ಯಾವುದೇ ಶುಲ್ಕವಿಲ್ಲ
>ತಿಂಗಳಿಗೆ 25 ಚೆಕ್ ಲೀವ್‌ಗಳವರೆಗೆ ಮಲ್ಟಿ ಸಿಟಿ ಚೆಕ್‌ಗಖ ವಿತರಣಾ ಶುಲ್ಕದಲ್ಲಿ ಮನ್ನಾ
>ಶುಲ್ಕ ರಹಿತ ಆರ್‌ಟಿಜಿಎಸ್/ಎನ್‌ಇಎಫ್‌ಟಿ ಸೇವೆ
>ಪೂರಕ ವೈಯಕ್ತಿಕ/ವಾಯು ಅಪಘಾತ ವಿಮಾ ಕವರೇಜ್
ವೈಯಕ್ತಿಕ ಸಾಲ, ಕಾರು ಸಾಲ ಹಾಗೂ ಗೃಹ ಸಾಲದ ಮೇಲೆ ಸ್ಪರ್ಧಾತ್ಮಕವಾದ ಬಡ್ಡಿ ದರಗಳು
>ಅರ್ಹತೆ ಆಧರಿಸಿ ಓವರ್ ಡ್ರಾಫ್ಟ್ ಸೌಲಭ್ಯ
>ವಾರ್ಷಿಕ ಲಾಕರ್ ಬಾಡಿಗೆ ಶುಲ್ಕಗಳ ಮೇಲಿನ ರಿಯಾಯಿತಿ
ಎಸ್‌ಬಿಐ ನೀಡುವ ವಿವಿಧ ರೀತಿಯ ಸಂಬಳ ಖಾತೆ ಪ್ಯಾಕೇಜ್‌ಗಳು ಯಾವುವು?
>ಕೇಂದ್ರ ಸರ್ಕಾರದ ಸಂಬಳ ಪ್ಯಾಕೇಜ್(ಸಿಜಿಎಸ್‌ಪಿ)
>ರಾಜ್ಯ ಸರ್ಕಾರದ ಸಂಬಳ ಪ್ಯಾಕೇಜ್(ಎಸ್‌ಜಿಎಸ್‌ಪಿ)
>ರೈಲ್ವೆ ವೇತನ ಪ್ಯಾಕೇಜ್(ಆರ್‌ಎಸ್‌ಪಿ)
>ರಕ್ಷಣಾ ವೇತನ ಪ್ಯಾಕೇಜ್(ಡಿಎಸ್‌ಪಿ)
>ಕೇಂದ್ರ ಸಶಸ್ತ್ರ ಪೊಲೀಸ್ ಸಂಬಳ ಪ್ಯಾಕೇಜ್(ಸಿಎಪಿಎಸ್‌ಪಿ)
>ಪೊಲೀಸ್ ಸಂಬಳ ಪ್ಯಾಕೇಜ್(ಪಿಎಸ್‌ಪಿ)
>ಭಾರತೀಯ ಕೋಸ್ಟ್ ಗಾರ್ಡ್ ಸಂಬಳ ಪ್ಯಾಕೇಜ್(ಸಿಐಜಿಎಸ್‌ಪಿ)
>ಕಾರ್ಪೊರೇಟ್ ಸಂಬಳ ಪ್ಯಾಕೇಜ್(ಸಿಎಸ್‌ಪಿ)
>ಆರಂಭಿಕ ಸಂಬಳ ಪ್ಯಾಕೇಜ್ ಖಾತೆ(ಎಸ್‌ಯುಎಸ್‌ಪಿ)
ವೇತನ ಖಾತೆ ತೆರೆಯಲು ಲಭ್ಯವಿರುವ ಅಗತ್ಯ ದಾಖಲೆಗಳು
>ಪಾಸ್‌ಪೋರ್ಟ್ ಗಾತ್ರದ ಫೋಟೊ
>ಪ್ಯಾನ್ ಕಾರ್ಡ್ ಕಾಪಿ
> ಆರ್‌ಬಿಪಿ ಸೂಚನೆ ಆಧರಿಸಿದ ವಿಳಾಸದ ದಾಖಲೆಗಳು
>ಉದ್ಯೋಗದ ಪುರಾವೆ/ಸೇವಾ ಪ್ರಮಾಣ ಪತ್ರ
>ಇತ್ತೀಚಿನ ವೇತನದ ಸ್ಲಿಪ್
ಎಸ್‌ಬಿಐನಲ್ಲಿ ಚಾಲ್ತಿಯಲ್ಲಿರುವ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಿಸಬಹುದೇ?: ಹೌದು. ಎಸ್‌ಬಿಐನಲ್ಲಿ ಅಸ್ತಿತ್ವದಲ್ಲಿರುವ ಉಳಿತಾಯ ಖಾತೆಗಳನ್ನು ಅರ್ಜಿ, ಉದ್ಯೋಗ, ಉದ್ಯೋಗ ಪುರಾವೆ, ಸಂಬಳದ ಸ್ಲಿಪ್/ ಸೇವಾ ಪ್ರಮಾಣ ಪತ್ರವನ್ನು ಸಲ್ಲಿಸಿದ ನಂತರ ವೇತನ ಪ್ಯಾಕೇಜ್ ಖಾತೆಯಾಗಿ ಪರಿವರ್ತಿಸಬಹುದು.
ಖಾತೆಗೆ ಯಾವುದೇ ವೇತನ ಕ್ರೆಡಿಟ್ ಆಗದಿದ್ದರೆ ನಿಮ್ಮ ಸಂಬಳ ಪ್ಯಾಕೇಜ್ ಖಾತೆ ಏನಾಗುತ್ತದೆ?: ಒಂದು ವೇಳೆ ಮಾಸಿಕ ವೇತನವನ್ನು ಸತತ ಮೂರು ತಿಂಗಳಿಗಿಂತ ಹೆಚ್ಚು ಕಾಲ ಖಾತೆಗೆ ಜಮೆ ಆಗದಿದ್ದರೆ ಆ ಖಾತೆಗೆ ನೀಡಲಾಗಿರುವ ವಿಶೇಷ ಫೀಚರ್‌ಗಳನ್ನು ಹಿಂಪಡೆಯಲಾಗುತ್ತದೆ. ಜತೆಗೆ ಖಾತೆಯನ್ನು ಮಾಹಿತಿ ನೀಡದೆ ಸಾಮಾನ್ಯ ಉಳಿತಾಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಎಲ್ಲ ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತದೆ.
ವೇತನ ಪ್ಯಾಕೇಜ್ ಖಾತೆಗೆ ಲಭ್ಯವಿರುವ ಲಾಕರ್ ಸೌಲಭ್ಯ ಏನು?: ವೇತನ ಪ್ಯಾಕೇಜ್ ಖಾತೆಗೆ ವಾರ್ಷಿಕ ಲಾಕರ್ ಬಾಡಿಗೆಗೆ ಗರಿಷ್ಠ ಶೇಕಡ 50 ರವರೆಗೆ ರಿಯಾಯಿತಿ.
ವೇತನ ಪ್ಯಾಕೇಜ್ ಗ್ರಾಹಕರಿಗೆ ತಿಂಗಳಿಗೆ ಲಭ್ಯವಿರುವ ಉಚಿತ ಡ್ರಾಫ್ಟ್‌ಗಳ ಒಟ್ಟು ಸಂಖ್ಯೆ ಎಷ್ಟು?: ಸಂಬಳ ಪ್ಯಾಕೇಜ್ ಖಾತೆದಾರರಿಗೆ ತಿಂಗಳಿಗೆ ಡ್ರಾಫ್ಟ್‌ಗಳ ಸಂಖ್ಯೆ ಮತ್ತು ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.
ಇನ್ನು ವೇತನ ಪ್ಯಾಕೇಜ್ ಖಾತೆದಾರರಿಗೆ ವೈಯಕ್ತಿಕ ಅಪಘಾತ ವಿಮೆ(ಪಿಎಐ) ಮತ್ತು ವಿಮಾನ ಅಪಘಾತ ವಿಮೆ(ಎಎಐ) ರಕ್ಷಣೆಯನ್ನು ಒದಗಿಸಲಾಗುತ್ತದೆ. ಈ ಗರಿಷ್ಠ ಕವರೇಜ್ ಮೊತ್ತವು ಸಂಬಳ ಪ್ಯಾಕೇಜ್ ಖಾತೆಯನ್ನು ಅವಲಂಬಿಸಿರುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications