ನವದೆಹಲಿ, ಜೂನ್ 24: ಅನೇಕ ಸಣ್ಣ ಪುಟ್ಟ ಹೂಡಿಕೆದಾರರು ತಮ್ಮ ಹಣವನ್ನು ನೇರವಾಗಿ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಾಗಿ ಮ್ಯೂಚುವಲ್ ಫಂಡ್‌ಗಳ ಮೂಲಕ ಸುರಕ್ಷಿತವಾದ ಆದಾಯದ ಕಡೆ ಹೆಚ್ಚು ಆಸಕ್ತಿ ವಹಿಸುತ್ತಾರೆ.
ಪ್ರಸ್ತುತ ದೇಶದಲ್ಲಿ ಮ್ಯೂಚುವಲ್ ಫಂಡ್ ವ್ಯವಹಾರ ಹೂಡಿಕೆದಾರರು ಆಸಕ್ತಿವಹಿಸುತ್ತಿರುವ ನಡುವೆಯೇ ಪ್ರಮುಖ ಮ್ಯೂಚುವಲ್ ಫಂಡ್ ಕಂಪನಿಯಾದ "ಕ್ವಾಂಟ್ ಮ್ಯೂಚುವಲ್ ಫಂಡ್ಸ್ ಕಂಪನಿ" ಮೇಲೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)ದ ಹದ್ದಿನ ಕಣ್ಣು ಬಿದ್ದಿರುವುದು ಅನೇಕ ಹೂಡಿಕೆದಾರರನ್ನು ಚಿಂತೆಗೀಡುಮಾಡಿವೆ.

ಹೌದು ಜನಪ್ರಿಯವಾದ ಕ್ವಾಂಟ್ ಮ್ಯೂಚುವಲ್ ಫಂಡ್ ಅಕ್ರಮ ರೀತಿಯ ಒಂದು ಷೇರು ವಹಿವಾಟು ಎನಿಸಿರುವ "ಫ್ರಂಟ್ ರನಿಂಗ್"ನಲ್ಲಿ ನಿರತವಾಗಿದೆ ಎಂಬುದು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಆರೋಪಿಸಿದ್ದು ತನಿಖೆಗೆ ಮುಂದಾಗಿದೆ .
ಕ್ವಾಂಟ್ ಮ್ಯೂಚುವಲ್ ಫಂಡ್ ನ ಹೈದರಾಬಾದ್ ಮತ್ತು ಮುಂಬೈ ಕಚೇರಿಗಳಲ್ಲಿ ಸೆಭಿ ಭಾನುವಾರ ಶೋಧ ನಡೆಸಿದ್ದು ಇದು ದೊಡ್ಡ ಸಂಚಲನವನ್ನು ಹುಟ್ಟುಹಾಕಿದೆ. ಕ್ವಾಂಟ್ ಫಂಡ್ನ ಪ್ರಮುಖ ಕಚೇರಿ ಮುಂಬೈನಲ್ಲಿದೆ.
ಕ್ವಾಂಟ್ ಫಂಡ್ ಹೌಸ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮ್ಯೂಚುವಲ್ ಫಂಡ್ ಕಂಪನಿ ಎಂದು ಗುರುತಿಸಲ್ಪಟ್ಟಿದೆ. 2019 ರಲ್ಲಿ ಕೇವಲ ರೂ.100 ಕೋಟಿಗಳ ಸ್ವತ್ತುಗಳನ್ನು ನಿರ್ವಹಿಸುವುದರಿಂದ, ಕಂಪನಿಯು ಪ್ರಸ್ತುತ ರೂ.90,000 ಕೋಟಿ ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತಿದೆ. ಸಂದೀಪ್ ಟಂಡನ್ ಅವರು ಕ್ವಾಂಟ್ ಮ್ಯೂಚುವಲ್ ಫಂಡ್ಸ್ ಕಂಪನಿಯ ಸಿಇಒ ಆಗಿದ್ದು, ಮಾರುಕಟ್ಟೆಯಲ್ಲಿ ಇತರ ಕಂಪನಿಗಳಿಗಿಂತ ಕ್ವಾಂಟ್ ಉತ್ತಮ ಆದಾಯವನ್ನು ನೀಡುತ್ತಿದೆ.
ಫ್ರಂಟ್ ರನ್ನಿಂಗ್ ಅಂದರೇನು?
ಫ್ರಂಟ್ ರನ್ನಿಂಗ್ ಅನೈತಿಕವಾಗಿರುವಂತದ್ದುಎನ್ನಬಹುದು. ಯಾಕೆಂದರೆ ಹೂಡಿಕೆದಾರರ ಆರ್ಡರ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬ್ರೋಕರ್‌ಗಳು ಮುಂಚಿತವಾಗಿಯೇ ಪಡೆಯುತ್ತಾರೆ. ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿ ಲಾಭ ಪಡೆಯಲು ವ್ಯಾಪಾರ ಮಾಡಲು ಅಕ್ರಮವಾಗಿ ಈ ಮಾಹಿತಿಯನ್ನು ಬಳಸಿದರೆ, ಅಂತಹ ಅಭ್ಯಾಸವನ್ನು ಫ್ರಂಟ್ ರನ್ನಿಂಗ್ ಎಂದು ಕರೆಯಲಾಗುತ್ತದೆ.
ಫ್ರಂಟ್ ರನಿಂಗ್ ಇನ್ಸೈಡರ್ ಟ್ರೇಡಿಂಗ್ ಗೆ ಹೋಲಿಕೆ ಮಾಡಬಹುದು. ಈ ಸಂದರ್ಭದಲ್ಲಿ ಸಣ್ಣ ವ್ಯತ್ಯಾಸವೆಂದರೆ ಇಲ್ಲಿ ಬ್ರೋಕರ್ ಕ್ಲೈಂಟ್‌ನ ಬ್ಯುಸಿನೆಸ್ ಗಿಂತ ಹೆಚ್ಚಾಗಿ ಕ್ಲೈಂಟ್‌ನ ಬ್ರೋಕರೇಜ್‌ಗಾಗಿ ಕೆಲಸ ಮಾಡುತ್ತಾನೆ. ಈ ರೂಪವು ಕಾನೂನುಬಾಹಿರ ಮತ್ತು ಅನೈತಿಕವಾಗಿದೆ. ಸಾರ್ವಜನಿಕಗಿ ಸಿಗದ ಮಾಹಿತಿಯನ್ನು ಆಧರಿಸಿ ಬ್ರೋಕರ್ ಲಾಭ ಗಳಿಸಲು ಮುಂದಾಗುತ್ತಾನೆ. ಈ ರೀತಿಯ ಷೇರು ವಹಿವಾಟುಗಳನ್ನು ಮಧ್ಯವರ್ತಿಗಳು ನೇರವಾಗಿ ಮಾಡದೇ, ತಮ್ಮ ಇತರ ಬೇನಾಮಿ ಖಾತೆಗಳ ಮೂಲಕ ಮಾಡುತ್ತಾರೆ. ಈ ಕೆಲಸವನ್ನು ಫ್ರಂಟ್ ರನಿಂಗ್ ಎಂದು ಕರೆಯಲಾಗುತ್ತದೆ.
ಕ್ವಾಂಟ್ ಫಂಡ್ ಹೌಸ್ ಆಡಳಿತ ಮಂಡಳಿ ಸೆಬಿ ತನಿಖೆ ಕುರಿತಂತೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, "ಇತ್ತೀಚೆಗೆ, ಕ್ವಾಂಟ್ ಮ್ಯೂಚುವಲ್ ಫಂಡ್ ಸೆಬಿಯಿಂದ ವಿಚಾರಣೆ ಎದುರಿಸುತ್ತಿದೆ. ಈ ವಿಷಯದ ಬಗ್ಗೆ ನಿಮಗಿರಬಹುದಾದ ಕಾಳಜಿ ಗೊಂದಲ, ಅನುಮಾನ ಕಾಡಬಹುದು. ಕ್ವಾಂಟ್ ಮ್ಯೂಚುವಲ್ ಫಂಡ್ ಒಂದು ನಿಯಂತ್ರಿಣ ಘಟಕವಾಗಿದೆ ಎಂಬ ಭರವಸೆಯನ್ನು ನಾವು ನಿಮಗೆ ಕೊಡುತ್ತಿದ್ದೇವೆ. ನಾಉ ಅಗತ್ಯವಿರುವ ಬೆಂಬಲವನ್ನು ನಿಮಗೆ ನೀಡುತ್ತೇವೆ.
ಇದಲ್ಲದೇ ಡೇಟಾವನ್ನು ಒದಗಿಸುವುದರ ಮೂಲಕ ನಾವು ಸೆಬಿಗೆ ಗೆ ಸಹಕರಿಸಲು ಭದ್ದವಾಗಿದ್ದೇವೆ. ಕ್ವಾಂಟ್ ಮ್ಯೂಚುವಲ್ ಫಂಡ್ ತನ್ನ ಹೂಡಿಕೆದಾರರಿಗೆ ಉತ್ತಮವಾದ ಆದಾಯವನ್ನು ನೀಡಲು ತನ್ನ ಪ್ರಾಥಮಿಕ ಗುರಿಯನ್ನು ಭರವಸೆ ನೀಡಿದೆ. 8 ಮಿಲಿಯನ್ ಫೋಲಿಯೊಗಳು ಮತ್ತು ₹93,000 ಕೋಟಿಗಳ ನಿರ್ವಹಣೆಯಡಿಯಲ್ಲಿ (AUM) ಆಸ್ತಿಯೊಂದಿಗೆ, ಹೂಡಿಕೆದಾರರ ವಿಶ್ವಾಸವನ್ನು ಕಾಪಾಡಿಕೊಳ್ಳಲು ನಮ್ಮ ಬದ್ಧತೆ ಸ್ಥಿರವಾಗಿರುತ್ತದೆ" ಎಂದು ಹೇಳಿದೆ.


Click it and Unblock the Notifications