ಕರ್ನಾಟಕ ಕಾಂಗ್ರೆಸ್ ಚುನಾವಣೆಗೂ ಮುನ್ನ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ನಾವು ಅಧಿಕಾರಕ್ಕೆ ಬಂದರೆ ಜಾರಿ ಮಾಡಲಾಗುವುದು ಎಂದು ಹೇಳಿತ್ತು. ಅದರಂತೆಯೇ ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದೆ. ಈ ಐದು ಯೋಜನೆಗಳಲ್ಲಿ ಮೊದಲಾಗಿ ಶಕ್ತಿ ಯೋಜನೆ ಆರಂಭವಾಗಿದ್ದು, ಬಹುನಿರೀಕ್ಷಿತ ಶಕ್ತಿ ಯೋಜನೆಗೆ ಶತಕದ ಸಂಭ್ರಮವಾಗಿದೆ.
ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಲಾಗುತ್ತದೆ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ,ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಲಾಗಿದೆ. ಈ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಹಾಗಾದ್ರೆ ಎಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ, ತಿಳಿಯೋಣ ಮುಂದೆ ಓದಿ...

ಶಕ್ತಿ ಯೋಜನೆಯಡಿ ಎಷ್ಟು ಮಹಿಳೆಯರ ಓಡಾಟ?
ಜೂನ್ 11 ರಂದು ಶಕ್ತಿ ಯೋಜನೆ ಆರಂಭ ಮಾಡಲಾಗಿದ್ದು, ಅಂದಿನಿಂದ ಸೆಪ್ಟೆಂಬರ್ 19 ರವರೆಗೆ ನೂರು ದಿನಗಳ ಅವಧಿಯಲ್ಲಿ ಈ ಯೋಜನೆಯಡಿಯಲ್ಲಿ 62,55,39,727 ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ದರ 1456,09,64,867 ರೂಪಾಯಿ ಆಗಿದೆ. 100 ದಿನದಲ್ಲಿ ಯಾವ ಯಾವ ನಿಗಮದಿಂದ ಎಷ್ಟು ಮಹಿಳೆಯರು ಸಂಚಾರ ಮಾಡಿದ್ದಾರೆ, ಟಿಕೆಟ್ ದರ ಎಷ್ಟಾಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ...
ಯಾವ ಯಾವ ನಿಗಮದಿಂದ ಎಷ್ಟು ಮಹಿಳೆಯರು ಸಂಚಾರ?
ಕೆಎಸ್‌ಆರ್‌ಟಿಸಿ: 18,64,69,897
ಬಿಎಂಟಿಸಿ: 20,73,07,516
ಎನ್‌ಡಬ್ಲ್ಯೂಕೆಆರ್‌ಟಿಸಿ: 14,55,22,859
ಕೆಕೆಆರ್‌ಟಿಸಿ: 8,62,39,455
ಒಟ್ಟು ಮಹಿಳೆಯರ ಪ್ರಯಾಣಿಕರ ಟಿಕೆಟ್ ಮೌಲ್ಯ ಎಷ್ಟು?
ಕೆಎಸ್‌ಆರ್‌ಟಿಸಿ: 541,64,12,207
ಬಿಎಂಟಿಸಿ: 264,01,82,826
ಎನ್‌ಡಬ್ಲ್ಯೂಕೆಆರ್‌ಟಿಸಿ: 368,01,97,845
ಕೆಕೆಆರ್‌ಟಿಸಿ: 282,41,71,989
ಶಕ್ತಿ ಯೋಜನೆಯ ಪ್ರಮುಖ ಮಾಹಿತಿ
ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಈ ಯೋಜನೆಯಡಿಯಲ್ಲಿ ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. 'ಶಕ್ತಿ' ಸ್ಮಾರ್ಟ್‌ಕಾರ್ಡ್ ವಿತರಣೆ ಮಾಡಲು ಇನ್ನೂ ಸರ್ಕಾರ ಆರಂಭಿಸಿಲ್ಲ. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.


Click it and Unblock the Notifications