ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಅಂಚೆ ಕಚೇರಿ ಡೆಪಾಸಿಟ್ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆದಾರರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಖಾತೆಗೆ ಲಿಂಕ್ ಮಾಡಬೇಕಾಗಿದೆ.
ಸಣ್ಣ ಉಳಿತಾಯ ಯೋಜನೆಯ ಖಾತೆಗಳಿಗೆ ಈ ತಿಂಗಳ ಅಂತ್ಯದೊಳಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದಕ್ಕಾಗಿ ನೀವು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆಧಾರ್ ಪ್ರತಿ ಸಲ್ಲಿಸಬೇಕಾಗುತ್ತದೆ. ಈ ದಿನಕ್ಕೂ ಮುನ್ನ ನೀವು ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಖಾತೆ ಫ್ರೀಜ್ ಆಗಲಿದೆ. ಈ ಮೂಲಕ ನೀವು ಖಾತೆ ಫ್ರೀಜ್ ಆಗುವುದನ್ನು ತಡೆಯಬಹುದು.

ಪಿಪಿಎಫ್, ಎಸ್‌ಎಸ್‌ವೈ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹಣಕಾಸು ಸಚಿವಾಲಯವು 31ನೇ ಮಾರ್ಚ್ 2023 ರಂದು ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆದಾರರಿಗೆ ಸೆಪ್ಟೆಂಬರ್ 30 ಗಡುವು
ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಸಣ್ಣ ಉಳಿತಾಯ ಚಂದಾದಾರರು ಪಿಪಿಎಫ್, ಎಸ್‌ಎಸ್‌ವೈ, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್ ಅಥವಾ ಯಾವುದೇ ಇತರ ಸಣ್ಣ ಉಳಿತಾಯ ಖಾತೆಯನ್ನು ತೆರೆಯುವಾಗ ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸದಿದ್ದರೆ 30 ನೇ ಸೆಪ್ಟೆಂಬರ್ 2023 ರೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ.
ಖಾತೆ ತೆರೆದ ಆರು ತಿಂಗಳ ಒಳಗಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ ನಿಮ್ಮ ಸಣ್ಣ ಉಳಿತಾಯ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಅಸ್ತಿತ್ವದಲ್ಲಿರುವ ಚಂದಾದಾರರಿಗೆ, ನೀಡಿರುವ ಗಡುವಿನೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಸಣ್ಣ ಉಳಿತಾಯ ಖಾತೆಯೊಂದಿಗೆ ಲಿಂಕ್ ಮಾಡಲು ವಿಫಲವಾದರೆ, ಖಾತೆಯನ್ನು ಅಕ್ಟೋಬರ್ 1 ರಿಂದ ಫ್ರೀಜ್ ಮಾಡಲಾಗುತ್ತದೆ.
ಸಣ್ಣ ಉಳಿತಾಯ ಯೋಜನೆಗಳು ಯಾವುವು?
ಸಣ್ಣ ಉಳಿತಾಯ ಯೋಜನೆಗಳು ಹೂಡಿಕೆಯ ಮಾರ್ಗಗಳಾಗಿವೆ. ಇದು ಜನರಿಗೆ ಹೂಡಿಕೆಯನ್ನು ಮಾಡಲು, ಸಂಗ್ರಹಿಸಲು ಅವಕಾಶ ಮಾಡಿಕೊಳ್ಳುತ್ತದೆ. ಇವು ಸರ್ಕಾರ ಬೆಂಬಲಿತ ಯೋಜನೆಯಾಗಿದೆ. ಈ ಹಲವು ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುವುದರಿಂದ ತೆರಿಗೆ ಪ್ರಯೋಜನ ಪಡೆಯಬಹುದಾಗಿದೆ.
ಈ ಪೈಕಿ ಕೆಲವು ಸಾಮಾನ್ಯ ಯೋಜನೆಗಳು ಎಸ್‌ಸಿಎಸ್‌ಎಸ್ ಮತ್ತು ಪಿಪಿಎಫ್ ಆಗಿದೆ. ಐ-ಟಿ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ನೀವು 1.5 ಲಕ್ಷ ರೂಪಾಯಿವರೆಗೆ ತೆರಿಗೆಯನ್ನು ಪಡೆಯಬಹುದು. ಸರ್ಕಾರವು ತ್ರೈಮಾಸಿಕದಲ್ಲಿ ದರವನ್ನು ಪರಿಶೀಲಿಸುತ್ತದೆ.
ಸಣ್ಣ ಉಳಿತಾಯ ಯೋಜನೆ ಬಡ್ಡಿದರ
*ಎಸ್‌ಸಿಎಸ್‌ಎಸ್ - ಶೇಕಡ 8.2
*ಸುಕನ್ಯಾ ಯೋಜನೆ - ಶೇಕಡ 8.0
*ಎನ್‌ಎಸ್‌ಸಿ - ಶೇಕಡ 7.7
*ಕಿಸಾನ್ ವಿಕಾಸ್ ಪತ್ರ - ಶೇಕಡ 7.5
*5 ವರ್ಷದ ಡೆಪಾಸಿಟ್ - ಶೇಕಡ 7.5
*ಪಿಒ ಮಾಸಿಕ ಆದಾಯ ಯೋಜನೆ - ಶೇಕಡ 7.4
*ಪಿಪಿಎಫ್ - ಶೇಕಡ 7.1
*2 ವರ್ಷದ ಡೆಪಾಸಿಟ್ - ಶೇಕಡ 7.0
*3 ವರ್ಷದ ಡೆಪಾಸಿಟ್- ಶೇಕಡ 7.0
*1 ವರ್ಷದ ಡೆಪಾಸಿಟ್ - ಶೇಕಡ 6.9
*5 ವರ್ಷದ ಆರ್‌ಡಿ - ಶೇಕಡ 6.5


Click it and Unblock the Notifications