ಬೆಂಗಳೂರು, ಜೂನ್ 6: ನೀವು ಆಹಾರವನ್ನು ಆರ್ಡರ್ ಮಾಡಲು ಝೊಮಾಟೊ ಅಪ್ಲಿಕೇಶನ್ ಬಳಸುತ್ತೀರಾ? ಆದರೆ ಇದೇ ಝೊಮಾಟೊ ಆಪ್ ಬಳಸಿ ನೀವು ಕೂಡಾ ಸಂಪಾದಿಸಬಹುದು. ಆದರೆ ಡೆಲಿವರ್ ಬಾಯ್ ಆಗಿ ಅಲ್ಲ! ಜೊತೆಗೆ ಇದಕ್ಕಾಗಿ ನೀವು ಹೆಚ್ಚು ಹಣವನ್ನು ಹೂಡಿಕೆ ಮಾಡಬೇಕಾಗಿಲ್ಲ. ಹೌದು, ನೀವೂ ಸಹ ಝೊಮಾಟೊಗೆ ಸೇರುವ ಮೂಲಕ ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಅದು ಹೇಗೆ ಎಂದು ಈ ಲೇಖನದಲ್ಲಿ ನೋಡೋಣ
ಝೊಮಾಟೊ ಜೊತೆ ವ್ಯಾಪಾರವನ್ನು ಪ್ರಾರಂಭಿಸುವುದು ಹೀಗೆ:
ಚೆನ್ನಾಗಿ ಅಡಿಗೆ ಮಾಡುತ್ತೇವೆ ಎಂಬ ಭರವಸೆ ನಿಮಗಿದ್ದರೆ ನೀವು ಝೊಮಾಟೊನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ವ್ಯಾಪಾರಕ್ಕಾಗಿ, ನೀವು ದಿನದಲ್ಲಿ ಕೆಲವು ಆರ್ಡರ್‌ಗಳನ್ನು ಪೂರ್ಣಗೊಳಿಸಬೇಕು ಮತ್ತು ಈ ಆರ್ಡರ್‌ಗಳನ್ನು ಪೂರ್ಣಗೊಳಿಸುವ ಮೂಲಕ ನೀವು ಹೆಚ್ಚು ಸುಲಭವಾಗಿ ಗಳಿಸಲು ಸಾಧ್ಯವಾಗುತ್ತದೆ.

ಮೊದಲನೆಯದಾಗಿ ನಿಮ್ಮ ಕ್ಲೌಡ್ ಕಿಚನ್‌ಗೆ ನೀವು ಹೆಸರನ್ನು ಆಯ್ಕೆ ಮಾಡಬೇಕು. ಇದರ ನಂತರ ನೀವುಝೊಮಾಟೊನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಿಮ್ಮ ರೆಸ್ಟೋರೆಂಟ್‌ಗೆ FSSAI ಪರವಾನಗಿಯನ್ನು ಸಹ ಪಡೆಯಬೇಕು.
ಕ್ಲೌಡ್ ಕಿಚನ್ ಮಾಡುವಾಗ ಇದನ್ನು ನೆನಪಿನಲ್ಲಿಡಿ:
ನೀವು ಕ್ಲೌಡ್ ಕಿಚನ್ ತೆರೆಯಲು ಬಯಸಿದರೆ, ಅದನ್ನು ತೆರೆಯಲು, ಮೊದಲು ನೀವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅಂದರೆ FSSAI ನಿಂದ ಅನುಮೋದನೆ ಪಡೆಯಬೇಕು ಮತ್ತು ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನಿಮಗೆ ಸುಮಾರು 1500 ರೂ. ಖರ್ಚು ತಗುಲಬಹುದು . ಈ FSSAI ಖಾತೆರಚಿಸಲು ಸುಮಾರು ಎಂಟರಿಂದ ಹತ್ತು ದಿನಗಳವರೆಗೆ ತೆಗೆದುಕೊಳ್ಳಬಹುದು.
ಮೊದಲನೆಯದಾಗಿ, ಝೊಮಾಟೊದಲ್ಲಿ ನೋಂದಾಯಿಸಲು, ನಿಮಗೆ ಎಫ್‌ಎಸ್‌ಎಸ್‌ಎಐ ಪರವಾನಗಿ, ಜಿಎಸ್‌ಟಿ ಸಂಖ್ಯೆ, ಪ್ಯಾನ್ ಕಾರ್ಡ್‌ನ ನಕಲು, ಬ್ಯಾಂಕ್ ಖಾತೆ ಮಾಹಿತಿ, ರೆಸ್ಟೋರೆಂಟ್ ಮೆನು ಮತ್ತು ಟಾಪ್-5 ಐಟಂಗಳ ಫೋಟೋ ಅಗತ್ಯವಿರುತ್ತದೆ. ಇದರಿಂದಾಗಿ ಝೊಮಾಟೊದಲ್ಲಿ , ನಿಮ್ಮ ಬ್ರ್ಯಾಂಡ್ ಹೆಚ್ಚು ಜನರನ್ನು ತಲುಪುತ್ತದೆ, ಇದು ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಸಹಾಯಮಾಡುತ್ತದೆ.
ಇದರ ನಂತರ, ನಿಮ್ಮ ಅಡುಗೆಮನೆಯನ್ನು ಝೊಮಾಟೊ ಪರಿಶೀಲಿಸುತ್ತದೆ ಮತ್ತು ಈ ಸಂಪೂರ್ಣ ಪ್ರಕ್ರಿಯೆಯು ನಿಮಗೆ ಸುಮಾರು 10 ರಿಂದ 20 ದಿನಗಳನ್ನು ತೆಗೆದುಕೊಳ್ಳುತ್ತದೆ. ಎಲ್ಲವೂ ಸುಗಮಗೊಂಡ ನಂತರ ನೀವು ಝೊಮಾಟೊದಿಂದ ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.
ಪ್ರತಿ ತಿಂಗಳು ಇಷ್ಟು ಆದಾಯ:
ಈ ವ್ಯವಹಾರದಲ್ಲಿ ನೀವು ಪ್ರತಿ ತಿಂಗಳು ಲಕ್ಷ ರೂಪಾಯಿವರೆಗೂ ಗಳಿಸಬಹುದುದಾಗಿದೆ. ಝೊಮಾಟೊದಿಂದ ಪಾವತಿಗಾಗಿ, ಮೊದಲು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಲು ಕೇಳಿರುತ್ತದೆ. ಈ ಮೂಲಕವೇ ನಿಮಗೆ ಪೇಮೆಂಟ್ ಆಗುತ್ತದೆ. ಆನ್ ಲೈನ್ ಆಹಾರ ಪ್ಲಾಟ್‌ಫಾರ್ಮ್‌ಗಳು ಸುಮಾರು 15 ಪ್ರತಿಶತದಷ್ಟು ಕಮಿಷನ್ ತೆಗೆದುಕೊಳ್ಳುತ್ತವೆ, ಹೀಗಾಗಿ ನೀವು ನಿಮ್ಮ ಆಹಾರದ ಬೆಲೆ ನಿರ್ಧರಿಸುವಾಗ ಜಾಗರೂಕರಾಗಿರಬೇದು. ನೀವು ಒಂದು ದಿನದಲ್ಲಿ 30 ಆರ್ಡರ್‌ಗಳನ್ನು ಪಡೆದರೆ ಮತ್ತು ನೀವು ಪ್ರತಿ ಆರ್ಡರ್‌ನಲ್ಲಿ 200 ರೂ ಗಳಿಸಿದರೆ, ನೀವು ದಿನಕ್ಕೆ 6000 ರೂಪಾಯಿಗಳನ್ನು ಗಳಿಸಬಹುದಾಗಿದೆ. ಈ ಅಂದಾಜು ಪ್ರಕಾರ ಒಂದು ತಿಂಗಳಲ್ಲಿ ನಿಮ್ಮ ಗಳಿಕೆಯು 1 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.


Click it and Unblock the Notifications