ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬರ ಮತದಾನದ ಹಕ್ಕು ಬರಿ ನಾವು ಚಲಾಯಿಸುವ ಹಕ್ಕು ಮಾತ್ರವಲ್ಲ ಇದೊಂದು ಜವಾಬ್ದಾರಿಯೂ ಕೂಡಾ ಹೌದು. ಪ್ರತಿಯೊಬ್ಬ ಅರ್ಹ ನಾಗರಿಕರು ಚುನಾವಣೆಯ ಸಮಯದಲ್ಲಿ ತಮ್ಮ ಮತ ಚಲಾಯಿಸುವ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯವಾಗುತ್ತದೆ. ಪ್ರಸ್ತುತ ತಂತ್ರಜ್ಞಾನ ಪ್ರಗತಿ ಕಾಣುತ್ತಿದ್ದಂತೆ ಎಲ್ಲವೂ ಆನ್‌ಲೈನ್ ಆಗಿರುವಾಗ ನಾವು ಆನ್‌ಲೈನ್ ಮೂಲಕವೇ ವೋಟರ್ ಐಡಿ ಪಡೆದುಕೊಳ್ಳಬಹುದಾಗಿದೆ.
ಲೋಕಸಭೆ ಚುನಾವಣೆಯು 2024 ರಲ್ಲಿ ನಡೆಯಲಿದೆ. ನೀವು ಮತ ಚಲಾಯಿಸಬೇಕಾದರೆ ಅದಕ್ಕೂ ಮುನ್ನ ವೋಟರ್ ಐಡಿ ಹೊಂದಿರುವುದು ಮುಖ್ಯವಾಗುತ್ತದೆ. ಮತ ಚಲಾಯಿಸಲು ನೋಂದಾಯಿಸಿಕೊಳ್ಳುವುದು ಎಂದಿಗಿಂತಲೂ ಈಗ ಹೆಚ್ಚು ಸುಲಭವಾಗಿದೆ ಮತ್ತು ಅನುಕೂಲಕರವಾಗಿದೆ. ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ, ಮುಂದೆ ಓದಿ...

ಭಾರತದ ಮತದಾನದ ಅರ್ಹತೆಯ ಅಗತ್ಯತೆಗಳು
ಭಾರತದಲ್ಲಿ ಮತದಾರರಾಗಿ ನೋಂದಾಯಿಸಲು ಅರ್ಹರಾಗಲು, ಒಬ್ಬ ವ್ಯಕ್ತಿಯು ಈ ಕೆಳಗಿನ ಮಾನದಂಡಗಳನ್ನು ಹೊಂದಿರಬೇಕು:
* ವ್ಯಕ್ತಿಯು ಭಾರತದಲ್ಲಿ ಪೌರತ್ವವನ್ನು ಹೊಂದಿರಬೇಕು.
* ನೋಂದಣಿಗೆ ಕನಿಷ್ಠ ವಯಸ್ಸು 18 ವರ್ಷಗಳು ಆಗಿದೆ. 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಅರ್ಜಿದಾರರು ನೋಂದಾಯಿಸಲು ಬಯಸುವ ಕ್ಷೇತ್ರದ ನಿವಾಸಿಯಾಗಿರಬೇಕು.
* ಅರ್ಹತಾ ದಿನಾಂಕದಂದು ಅಂದರೆ ಮತದಾರರ ಪಟ್ಟಿಯ ಪರಿಷ್ಕರಣೆಯ ವರ್ಷದ ಜನವರಿ 1 ರಂದು 18 ವರ್ಷ ವಯಸ್ಸನ್ನು ತಲುಪಿರಬೇಕು
* ನೀವು ನೋಂದಾಯಿಸಲು ಬಯಸುವ ಕ್ಷೇತ್ರದ ಭಾಗ/ಮತದಾನದ ಪ್ರದೇಶದ ನಿವಾಸಿಗಳಾಗಿರಬೇಕು.
* ಮತದಾರರಾಗಿ ದಾಖಲಾಗಲು ಅನರ್ಹರಾಗಿರಬಾರದು.
ಭಾರತದಲ್ಲಿ ಮತ ಚೀಟಿ ಪಡೆಯಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ
ಭಾರತೀಯ ಚುನಾವಣಾ ಆಯೋಗದ (ಇಸಿಐ) ಬಳಕೆದಾರ ಸ್ನೇಹಿ ವೆಬ್ ಪೋರ್ಟಲ್ ಮೂಲಕ ನಾಗರಿಕರು ಈಗ ಕೆಲವು ಸರಳ ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಮತ ಚೀಟಿಗಾಗಿ ನೋಂದಾಯಿಸಿಕೊಳ್ಳಬಹುದು:
ಹಂತ 1: www.nvsp.in ಗೆ ಅಥವಾ https://voters.eci.gov.in ಗೆ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಭೇಟಿ ನೀಡಿ
ಹಂತ 2: Apply online for new voter registration ಮೇಲೆ ಆಯ್ಕೆ ಮಾಡಿಕೊಳ್ಳಿ
ಹಂತ 3: ಹೆಸರು, ವಯಸ್ಸು, ವಿಳಾಸ ಮತ್ತು ಇತರ ಸಂಬಂಧಿತ ಮಾಹಿತಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 4: ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳಂತಹ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಹಂತ 5: ಮಾಹಿತಿಯನ್ನು ಪರಿಶೀಲಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಹಂತ 6: ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಬಳಿಕ reference number ಜನರೇಟ್ ಆಗುತ್ತದೆ. ನೀವು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿದೆ ಎಂದು ನೀವು ಈ ನಂಬರ್ ಬಳಸಿ ಟ್ರ್ಯಾಕ್ ಮಾಡಬಹುದು.
ಆನ್‌ಲೈನ್‌ನಲ್ಲಿ ಮತದಾರರ ನೋಂದಣಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ಹಂತ 1: www.nvsp.in ಗೆ ಅಥವಾ https://voters.eci.gov.in ಗೆ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ಗೆ ಮತ್ತೆ ಭೇಟಿ ನೀಡಿ
ಹಂತ 2: Track application status ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ಅರ್ಜಿ ಸಲ್ಲಿಕೆ ಸಮಯದಲ್ಲಿ ಸ್ವೀಕರಿಸಿದ reference number ಅನ್ನು ನಮೂದಿಸಿ
ಹಂತ 4: ಅಪ್ಲಿಕೇಶನ್‌ನ ಪ್ರಸ್ತುತ ಸ್ಥಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಭಾರತ ಸರ್ಕಾರವು ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಲಿಂಕ್ ಮಾಡಲು ನೀಡಿರುವ ಗಡುವನ್ನು ವಿಸ್ತರಣೆ ಮಾಡಿದೆ. ಆರಂಭದಲ್ಲಿ ಇವೆರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಲು ನೀಡಿದ್ದ ಅವಧಿಯು 2023ರ ಮಾರ್ಚ್ 31 ಕೊನೆಯಾಗಬೇಕಿತ್ತು. ಆದರೆ, ಇದೀಗ ಗಡುವನ್ನು ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದ್ದು, 2024ರ ಮಾರ್ಚ್ 31 ಆಧಾರ್ ವೋಟರ್ ಐಡಿ ಲಿಂಕ್ ಕೊನೆಯ ದಿನವಾಗಿರುತ್ತದೆ.


Click it and Unblock the Notifications