ಶೇರು ಮಾರುಕಟ್ಟೆ ತೆರೆದಿದೆ, ಆದ್ರೆ ಸೆಟಲ್ಮೆಂಟ್ ರಜೆ! ನಿಮ್ಮ ಹಣ ಮತ್ತು ಶೇರುಗಳ ಮೇಲೆ ಏನಾಗುತ್ತೆ?

ಇಂದು, ಅಂದರೆ 2026ರ ಆಗಸ್ಟ್ 26ರ ಬುಧವಾರ, NSE ಮತ್ತು BSE ಯಲ್ಲಿ ಈಕ್ವಿಟಿ ಶೇರು ವಹಿವಾಟು ಎಂದಿನಂತೆಯೇ ನಡೆಯಲಿದೆ. ಆದರೆ, ಈದ್-ಮಿಲಾದ್ ಆಚರಣೆಯ ಹಿನ್ನೆಲೆಯಲ್ಲಿ ಇಂದು 'ಸೆಟಲ್ಮೆಂಟ್ ರಜೆ' (Settlement Holiday) ಘೋಷಿಸಲಾಗಿದೆ. ಹೀಗಾಗಿ ಕ್ಲಿಯರಿಂಗ್ ಕಾರ್ಪೊರೇಷನ್‌ಗಳು ಇಂದು ಯಾವುದೇ ಪೇ-ಇನ್ ಅಥವಾ ಪೇ-ಔಟ್ ಪ್ರಕ್ರಿಯೆಗಳನ್ನು ನಡೆಸುವುದಿಲ್ಲ. ಕರೆನ್ಸಿ ಡೆರಿವೇಟಿವ್ಸ್ ವಹಿವಾಟು ಸಂಪೂರ್ಣ ಬಂದ್ ಆಗಿರಲಿದೆ. ಆದರೆ ಈಕ್ವಿಟಿ ಡೆರಿವೇಟಿವ್ಸ್ ವಹಿವಾಟು ನಗದು ಮಾರುಕಟ್ಟೆಯಂತೆಯೇ ಮಾಮೂಲಿಯಾಗಿ ನಡೆಯುತ್ತದೆ. ಗಿಫ್ಟ್ ಸಿಟಿಯಲ್ಲಿರುವ 'ಗಿಫ್ಟ್ ನಿಫ್ಟಿ' ತನ್ನದೇ ಆದ 2026ರ ರಜಾದಿನಗಳ ವೇಳಾಪಟ್ಟಿಯನ್ನು ಅನುಸರಿಸುತ್ತದೆ. ಇಂದು ವಹಿವಾಟಿನ ಸಮಯ ಎಂದಿನಂತೆಯೇ ಇದ್ದರೂ, ಬ್ಯಾಕ್ ಆಫೀಸ್ ಕ್ರೆಡಿಟ್‌ಗಳು ಮುಂದಿನ ಕೆಲಸದ ದಿನಕ್ಕೆ ಜಮೆಯಾಗಲಿವೆ.

ಇಂದು ಮುಖ್ಯವಾಗಿ ಬದಲಾಗುವುದು ಸೆಟಲ್ಮೆಂಟ್ ಸಮಯ ಮಾತ್ರ. ಆಗಸ್ಟ್ 25ರ ಮಂಗಳವಾರ ನಡೆಸಿದ ಟ್ರೇಡ್‌ಗಳು ಸಾಮಾನ್ಯವಾಗಿ ಇಂದೇ ಸೆಟಲ್ ಆಗಬೇಕಿತ್ತು. ಆದರೆ ಇಂದು ಕ್ಲಿಯರಿಂಗ್ ರಜೆ ಇರುವುದರಿಂದ, ಅವು ಆಗಸ್ಟ್ 27ರ ಗುರುವಾರ ಸೆಟಲ್ ಆಗಲಿವೆ. ಇನ್ನು T+1 ನಿಯಮದಂತೆ ಇಂದು (ಬುಧವಾರ) ಮಾಡುವ ಟ್ರೇಡ್‌ಗಳು ಸಹ ಗುರುವಾರವೇ ಸೆಟಲ್ ಆಗಲಿವೆ. ಹಣ ಮತ್ತು ಶೇರುಗಳ ಪೇ-ಇನ್ ಹಾಗೂ ಪೇ-ಔಟ್ ಪ್ರಕ್ರಿಯೆಗಳು ಗುರುವಾರ ಬೆಳಿಗ್ಗೆಯಿಂದ ಪುನರಾರಂಭಗೊಳ್ಳಲಿವೆ. ಇಂದು ಆಕ್ಷನ್ ಮಾರುಕಟ್ಟೆ ಮುಚ್ಚಿರಲಿದ್ದು, ಸೆಟಲ್ ಆಗದ ಕ್ರೆಡಿಟ್‌ಗಳು ಗುರುವಾರ ಸಂಜೆಯವರೆಗೆ ಖಾತೆಯಲ್ಲಿ ಕಾಣಿಸುವುದಿಲ್ಲ. ಸೆಟಲ್ ಆಗದ ಮೊತ್ತವನ್ನು ಸೇರಿಸದಿರುವುದರಿಂದ ಇಂದು ನಿಮ್ಮ ಕ್ಲೈಂಟ್ ಲೆಡ್ಜರ್ ಬ್ಯಾಲೆನ್ಸ್ ಕೊಂಚ ಕಡಿಮೆಯಾಗಿ ಕಾಣಿಸಬಹುದು.

ಶೇರು ಮಾರುಕಟ್ಟೆ ಸೆಟಲ್ಮೆಂಟ್ ರಜೆ: ಏನಾಗುತ್ತೆ?

ಸೆಟಲ್ಮೆಂಟ್ ರಜೆ ಮತ್ತು T+1 ನಿಯಮ: ಆಗಸ್ಟ್ 26ರ ಟ್ರೇಡ್‌ಗಳು ಮತ್ತು ಪೇ-ಔಟ್ ಬದಲಾವಣೆ ಹೇಗೆ?

ಮಂಗಳವಾರದ ಸೆಟಲ್ ಆಗದ ಫಂಡ್‌ಗಳನ್ನು ನೆಚ್ಚಿಕೊಳ್ಳದೆ ಇಂದಿನ ಮಾರ್ಜಿನ್ ಯೋಜಿಸಿಕೊಳ್ಳಿ. ಇಂದಿನ ಹೊಸ ಆಪ್ಷನ್ ಪ್ರೀಮಿಯಂ ಅಥವಾ ಮಾರ್ಕ್-ಟು-ಮಾರ್ಕೆಟ್ (MTM) ಲಾಭವನ್ನು ಗುರುವಾರ ಸಂಜೆ ಮಾತ್ರ ವಿತ್‌ಡ್ರಾ ಮಾಡಲು ಸಾಧ್ಯ. ಮಧ್ಯಾಹ್ನ 3:30ಕ್ಕೂ ಮೊದಲು ಸಲ್ಲಿಸುವ ಪ್ಲೆಡ್ಜ್ (Pledge) ಮತ್ತು ಅನ್‌ಪ್ಲೆಡ್ಜ್ (Unpledge) ವಿನಂತಿಗಳು ಸಾಮಾನ್ಯವಾಗಿ ಮುಂದಿನ ವಹಿವಾಟಿನ ದಿನದಂದು ಜಾರಿಗೆ ಬರುತ್ತವೆ. ಕೊಲ್ಯಾಟರಲ್ ಹೇರ್‌ಕಟ್ ಮತ್ತು ರಿಸ್ಕ್ ಚೆಕ್‌ಗಳು ಇಡೀ ಸೆಷನ್‌ನಲ್ಲಿ ಸಕ್ರಿಯವಾಗಿರುತ್ತವೆ. ಇಂದು ಮಾರ್ಜಿನ್ ಫಂಡಿಂಗ್ ಶೇರುಗಳ ಮೇಲೆ BTST (ಬೈ ರುಡೇ, ಸೆಲ್ ಟುಮಾರೋ) ಮಾಡುವುದನ್ನು ತಪ್ಪಿಸಿ, ಏಕೆಂದರೆ ಹಲವು ಬ್ರೋಕರ್‌ಗಳು ಇಂದು ಈ ಸೌಲಭ್ಯವನ್ನು ನಿಷ್ಕ್ರಿಯಗೊಳಿಸುತ್ತಾರೆ. ಒಂದು ವೇಳೆ ಕೊಲ್ಯಾಟರಲ್ ಕೊರತೆ ಇದ್ದರೆ, ಮೊದಲೇ ನಗದು ಅಥವಾ ಅನುಮೋದಿತ ಕೊಲ್ಯಾಟರಲ್ ಸೇರಿಸುವುದು ಒಳ್ಳೆಯದು.

IPO ಕ್ರೆಡಿಟ್‌ಗಳು, OFS ಮತ್ತು ಬೈಬ್ಯಾಕ್ ಕಥೆಯೇನು?

ರಿಜಿಸ್ಟ್ರಾರ್‌ಗಳು, ಸ್ಪಾನ್ಸರ್ ಬ್ಯಾಂಕ್‌ಗಳು ಮತ್ತು ಡಿಪಾಸಿಟರಿಗಳು ಕೆಲಸದ ದಿನದ (Working day) ವೇಳಾಪಟ್ಟಿಯನ್ನೇ ಅನುಸರಿಸುತ್ತವೆ. ಇಂದು IPO ಹಂಚಿಕೆ, ರಿಫಂಡ್ ಅಥವಾ ಡಿಮ್ಯಾಟ್ ಕ್ರೆಡಿಟ್ ಬರಬೇಕಿದ್ದರೆ, ಅದು ಒಂದು ಕೆಲಸದ ದಿನ ಮುಂದೂಡಲ್ಪಡುತ್ತದೆ. ಶೇರು ಮಾರುಕಟ್ಟೆಗಳು ತೆರೆದಿರುವುದರಿಂದ ನೂತನ ಶೇರುಗಳ ಲಿಸ್ಟಿಂಗ್ ಎಂದಿನಂತೆ ನಡೆಯುತ್ತದೆ, ಆದರೆ ನಿಮ್ಮ ಡಿಮ್ಯಾಟ್ ಖಾತೆಗೆ ಶೇರುಗಳು ಜಮೆಯಾಗಿವೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಿ. ಬ್ಯಾಂಕ್ ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಬಿಡ್‌ಗಳು ಮತ್ತು ತಿದ್ದುಪಡಿಗಳನ್ನು ಸ್ವೀಕರಿಸಲಾಗುವುದಿಲ್ಲ. ಸೆಬಿಯ T+3 ಲಿಸ್ಟಿಂಗ್ ಅವಧಿಯು ಕೇವಲ ಕೆಲಸದ ದಿನಗಳನ್ನು ಮಾತ್ರ ಪರಿಗಣಿಸುವುದರಿಂದ, ಯಾವುದೇ ವಿಳಂಬವಾಗುವುದಿಲ್ಲ. ಮ್ಯೂಚುಯಲ್ ಫಂಡ್ ಸರ್ವಿಸ್ ಸಿಸ್ಟಮ್ ವೇಳಾಪಟ್ಟಿ ಬದಲಾವಣೆ ಮತ್ತು ಲಿಸ್ಟಿಂಗ್ ದಿನದ ಸೆಟಲ್ಮೆಂಟ್ ಮಾಹಿತಿಗಾಗಿ ನಿಮ್ಮ ಬ್ರೋಕರ್ ನೀಡುವ ಸೂಚನೆಗಳನ್ನು ಪರಿಶೀಲಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+