ಟಾಲಿವುಡ್ ಸ್ಟಾರ್ ಮಹೇಶ್ ಬಾಬು (Mahesh Babu) ಕನ್ನಡ ಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಹೇಶ್ ಬಾಬು ಈಗಾಗಲೇ ತೆಲುಗು ಚಿತ್ರೋದ್ಯಮದಲ್ಲಿ ಮಲ್ಟಿಪ್ಲೆಕ್ಸ್ (Multiplex) ಚಿತ್ರಮಂದಿರಗಳಿಗೆ ಹೂಡಿಕೆ ಮಾಡಿದ್ದಾರೆ. ಈಗ ಕರ್ನಾಟಕದಲ್ಲಿಯೂ ಮಲ್ಟಿಫ್ಲೆಕ್ಸ್‌ಗಳನ್ನು ತೆರೆಯಲು ಸಜ್ಜಾಗಿದ್ದಾರೆ ಎಂದು ವರದಿ ಹೇಳಿದೆ.
ಕರ್ನಾಟಕದಲ್ಲಿ ಬೆಂಗಳೂರು ಕನ್ನಡ ಚಿತ್ರರಂಗದಲ್ಲಿ ಅತೀ ಮುಖ್ಯವಾದ ನಗರವೆಂದು ಪರಿಗಣಿಸಲಾಗುತ್ತದೆ. ರಾಜ್ಯ ರಾಜಧಾನಿಯ ಗಾಂಧಿನಗರದಲ್ಲಿರುವ ಚಿತ್ರಮಂದಿರಗಳಿಗೆ ಸಾಮಾನ್ಯವಾಗಿಯೇ ಬೇಡಿಕೆ ಅಧಿಕವಾಗಿದೆ. ಈ ಪ್ರದೇಶದಲ್ಲೇ ಮಹೇಶ್ ಬಾಬು ಎ.ಎಂ.ಬಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಆರಂಭವಾಗಲಿದೆ.

ಗಾಂಧಿನಗರದಲ್ಲಿ ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಪ್ರದೇಶದಲ್ಲಿ ಸುಮಾರು ಐದು ಅಂತಸ್ತಿನ ಕಟ್ಟಡ ನಿರ್ಮಾಣ ಆಗುತ್ತಿದೆ. ಇದೇ ಕಟ್ಟಡದಲ್ಲೇ ಮಹೇಶ್ ಬಾಬು ಅವರ ಚಿತ್ರಮಂದಿರಗಳು ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಯಾಂಡಲ್‌ವುಡ್‌ನ ನಟರುಗಳು ಚಿತ್ರೋದ್ಯಮದಲ್ಲಿ ಹಣವನ್ನು ಹೂಡಿಕೆ ಮಾಡಿಲ್ಲ. ಆದರೆ ತಮಿಳು ಮತ್ತು ತೆಲುಗಿನಲ್ಲಿ ಅನೇಕ ನಟರು ಬೇರೆ ಬೇರೆ ರೀತಿಯಾಗಿ ಚಿತ್ರೋದ್ಯಮದಲ್ಲೇ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಇನ್ನು ಮಾಹಿತಿ ಪ್ರಕಾರ ಕೆಲವೇ ದಿನಗಳಲ್ಲಿ ಈ ಚಿತ್ರಮಂದಿರವು ಆರಂಭವಾಗಲಿದೆ.
ಮಹೇಶ್ ಬಾಬು ನಿವ್ವಳ ಆದಾಯ
ಮಹೇಶ್ ಬಾಬು ಅವರ ಒಟ್ಟು ನಿವ್ವಳ ಆದಾಯವು 33 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 256 ಕೋಟಿ ರೂಪಾಯಿ ಆಗಿದೆ. ಮಹೇಶ್ ಬಾಬು ಆದಾಯವು ಬಹುಪಾಲು ಚಲನಚಿತ್ರಗಳು ಮತ್ತು ಬ್ರಾಂಡ್ ಜಾಹೀರಾತು ಮೂಲಕ ಲಭ್ಯವಾಗುತ್ತದೆ.
ಮಹೇಶ್ ಬಾಬುರ ನಟನೆಯ ಶುಲ್ಕದ ಹೊರತಾಗಿ ಚಲನಚಿತ್ರಗಳ ಲಾಭವನ್ನು ಕೂಡಾ ಪಡೆಯುತ್ತಾರೆ. ಬ್ರಾಂಡ್ ಅಂಬಾಸಿಡರ್ ಆಗಿಯೂ ಸಂಪಾದನೆ ಮಾಡುತ್ತಾರೆ. ಮಹೇಶ್ ಬಾಬು ಚಲನಚಿತ್ರಗಳಲ್ಲಿ ಬಹು ಮುಖ್ಯವಾಹಿನಿಯ ಪಾತ್ರಗಳನ್ನು ಮಾಡಿದ್ದಾರೆ. ಅವರು ಚಲನಚಿತ್ರ ಕ್ಷೇತ್ರದಲ್ಲಿ ಬಹುಮುಖ ಮತ್ತು ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದಾರೆ.
ಇಷ್ಟು ದೊಡ್ಡ ಲಾಭ ಮತ್ತು ಗಳಿಕೆಯೊಂದಿಗೆ, ಹಂಚಿಕೆ, ದಾನ, ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಮಹೇಶ್ ಬಾಬು ಯಾವಾಗಲೂ ಅಗ್ರ ಸ್ಥಾನದಲ್ಲಿರುತ್ತಾರೆ. ಆದಾಯ ತೆರಿಗೆ ಪಾವತಿಸುವ ವಿಷಯದಲ್ಲಿ ಮಹೇಶ್ ಬಾಬು ಕೂಡ ಅಗ್ರಸ್ಥಾನದಲ್ಲಿದ್ದಾರೆ. ಅವರು ದೇಶದ ಅತಿ ಹೆಚ್ಚು ತೆರಿಗೆ ಪಾವತಿದಾರರಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications