ನವದೆಹಲಿ, ಮಾರ್ಚ್ 30: 'ಕ್ರಿಪ್ಟೋ ಕಿಂಗ್' ಎಂದೇ ಕರೆಯಲ್ಪಡುವ ಸ್ಯಾಮ್ಯುಯೆಲ್ ಬೆಂಜಮಿನ್ ಬ್ಯಾಂಕ್‌ಮ್ಯಾನ್ ಫ್ರೈಡ್ ಒಂದು ಕಾಲದಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ 41ನೇ ಶ್ರೀಮಂತ ಅಮೇರಿಕನ್ ಶ್ರೇಯಾಂಕವನ್ನು ಪಡೆದಾತ.
ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಸ್ಥಾಪಿಸಿ ವಂಡರ್ ಕಿಡ್ ಎಂದೇ ಪರಿಗಣಿತವಾಗಿದ್ದ ಸ್ಯಾಮ್ ಬ್ಯಾಂಕ್‌ಮ್ಯಾನ್ ಇದೀಗ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಒಮ್ದು ಕಾಲದಲ್ಲಿ ಸಿರಿವಂತ ಸಂಸ್ಥೆಯಾಗಿದ್ದ ಎಫ್‌ಟಿಎಕ್ಸ್ ಈಗ ದಿವಾಳಿಯಾದ ಸಂಸ್ಥೆಯಾಗಿದ್ದು ಗ್ರಾಹಕರು ಮತ್ತು ಹೂಡಿಕೆದಾರರನ್ನು ವಂಚಿಸಿದಕ್ಕಾಗಿ 25 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಕ್ರಿಪ್ಟೋ ವಂಚನೆ, ಪಿತೂರಿ, ಗ್ರಾಹಕರ $8 ಬಿಲಿಯನ್ ಹಣ ಕಳ್ಳತನ ಮತ್ತು ಹೂಡಿಕೆದಾರರನ್ನು ದಾರಿ ತಪ್ಪಿಸುವ ಆರೋಪ ಸೇರಿದಂತೆ 7 ಕೇಸ್‌ಗಳು ಸ್ಯಾಮ್ ಮೇಲಿದೆ.

ಸ್ಯಾಮ್ ಬ್ಯಾಂಕ್‌ಮನ್-ಫ್ರೈಡ್ ಅವರ ಶಿಕ್ಷೆಯ ವಿಚಾರಣೆಯು ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ನಡೆದಿದ್ದು ನ್ಯಾಯಾಧೀಶ ಲೂಯಿಸ್ ಕಪ್ಲಾನ್ ತನ್ನ ಸಾಕ್ಷ್ಯದ ವಿಚಾರಣೆಯ ಸಮಯದಲ್ಲಿ ಮಾಜಿ ಬಿಲಿಯನೇರ್ ಬ್ಯಾಂಕ್‌ಮ್ಯಾನ್-ಫ್ರೈಡ್ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಘೋಷಿಸಿ ಮಾರ್ಚ್ 28 ರಂದು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.
ಬ್ಯಾಂಕ್‌ಮ್ಯಾನ್-ಫ್ರೈಡ್ ಗೆ ಭವಿಷ್ಯದಲ್ಲಿ ಮತ್ತಷ್ಟು ಅನೈತಿಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಇರುವ ಬಗ್ಗೆ ಜಡ್ಜ್ ಕಳವಳ ವ್ಯಕ್ತಪಡಿಸಿದ್ದು ಶಿಕ್ಷೆ ನೀಡಿದ್ದು ಮಾತ್ರವಲ್ಲದೇ ಆತನಿಗೆ ಸೇರಿದ $11 ಶತಕೋಟಿಗಿಂತ ಹೆಚ್ಚಿನ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ್ದಾರೆ. ಸ್ವಲೀನತೆ ಮತ್ತು ಸಾಮಾಜಿಕ ದುರ್ಬಲತೆಗಳಿಗೆ ಸಂಬಂಧಿಸಿದ ಸುರಕ್ಷತಾ ಪರಿಗಣನೆಗಳಿಂದಾಗಿ ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದ ಮಧ್ಯಮ-ಭದ್ರತಾ ಜೈಲಿನಲ್ಲಿ ಇರಿಸುವಂತೆ ಶಿಫಾರಸು ಮಾಡಲಾಗಿದೆ.
ಆರ್ಥಿಕ ಅಪರಾಧಗಳ ಪ್ರಕರಣದಲ್ಲಿ,ಬ್ಯಾಂಕ್‌ಮನ್-ಫ್ರೈಡ್ ಅನ್ನು ಬಹಾಮಾಸ್‌ನಿಂದ ಡಿಸೆಂಬರ್-2022 ರಲ್ಲಿ ಬಂಧಿಸಲಾಗಿದ್ದು, ಇದರ ನಂತರ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ನವೆಂಬರ್ 2023 ರಲ್ಲಿ ಹೂಡಿಕೆದಾರರು ಮತ್ತು ಗ್ರಾಹಕರಿಗೆ 8 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಅಂದರೆ ಸುಮಾರು 832 ಶತಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದಲ್ಲಿ ಬ್ಯಾಂಕ್‌ಮನ್ ತಪ್ಪಿತಸ್ಥರೆಂದು ಕಂಡುಬಂದಿದೆ. ಮಾತ್ರವಲ್ಲದೇ ಈ ಪ್ರಕರಣವನ್ನು ಅಮೆರಿಕದ ಇತಿಹಾಸದಲ್ಲಿಅತಿ ದೊಡ್ಡ ಹಣಕಾಸಿನ ವಂಚನೆಗಳಲ್ಲಿ ಒಂದೆಂದು ಕಂಡುಬಂದಿದೆ. ಬ್ಯಾಂಕ್‌ಮ್ಯಾನ್-ಫ್ರೈಡ್ ಶಿಕ್ಷೆಗೆ ಒಳಗಾಗಿರುವ ಸುದ್ದಿಗಳು ಪ್ರಸಾರವಾದಂತೆಯೇ ಯುಎಸ್ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿತ್ತು.
ಸ್ಯಾ ಮ್ ಬ್ಯಾಂಕ್‌ಮ್ಯಾನ್ ಫ್ರೈಡ್ 30 ತುಂಬುವ ಮೊದಲೇ ಈ ಯುವಕ ಬಿಲಿಯನೇರ್ ಆಗಿಬಿಟ್ಟಿದ್ದ. 2019 ರಲ್ಲಿ ಅವರು ಸ್ಥಾಪಿಸಿದ ಸಣ್ಣ ಸ್ಟಾರ್ಟ್ -ಅಪ್ FTX ಅನ್ನು ವಿಶ್ವದ ಎರಡನೇ ಅತಿದೊಡ್ಡ ವಿನಿಮಯ ವೇದಿಕೆಯಾಗಿ ಪರಿವರ್ತಿಸಿದ್ದ. ಆದರೆ ನವೆಂಬರ್ 2022 ರಲ್ಲಿ ತಾನು ಸ್ಥಾಪಿಸಿದ್ದ ಕಂಪನಿಯ ಅಧಃಪತನ ಶುರುವಾಗಿತ್ತು.
ಎಫ್‌ಟಿಎಕ್ಸ್‌ನಿಂದ ತನ್ನ ಖಾಸಗಿ ಹೆಡ್ಜ್ ಫಂಡ್, ಅಲ್ಮೇಡಾ ರಿಸರ್ಚ್‌ಗೆ ಶತಕೋಟಿ ಡಾಲರ್‌ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದೊಡನೇ ಬಹಿಂಗವಾಗುತ್ತಿದ್ದಂತೆ, ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಹಣವನ್ನು ಏಕಾಏಕಿ ಹಿಂದೆ ಪಡೆದುಕೊಳ್ಳಲಾರಂಭಿಸಿದ್ದರು.
More From GoodReturns

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ



Click it and Unblock the Notifications