ನವದೆಹಲಿ, ಜೂನ್ 8: ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಆಸಕ್ತಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು. ಸಾಂಪ್ರದಾಯಿಕ ಎಫ್ ಡಿ, ಅಂಚೆ ಕಚೇರಿ ಸ್ಕಿಂಗಳ ಬದಲಾಗಿ ಜನ ಮ್ಯೂಚುವಲ್ ಫಂಡ್ ಕಡೆ ನೋಡುತ್ತಿದ್ದಾರೆ.
ಹೂಡಿಕೆ ಅಂತ ಬಂದಾಗ ಮ್ಯೂಚುವಲ್ ಫಂಡ್‌ಗಳು ಒಂದೊಳ್ಳೆ ಆಯ್ಕೆ. ಯಾಕೆಂದರೆ ಅವು ಬ್ಯಾಂಕ್ ಎಫ್‌ಡಿ, ಸರ್ಕಾರಿ ಸಣ್ಣ ಉಳಿತಾಯ ಸ್ಕೀಮ್‌ಗಳು, ಚಿನ್ನ ಮತ್ತು ರಿಯಲ್ ಎಸ್ಟೇಟ್‌ಗೆ ಹೋಲಿಸಿದರೆ ಹೆಚ್ಚಿನ ಆದಾಯ ಕೊಡುತ್ತವೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಕು ಎರಡು ವಿಧಾನಗಳಿವೆ.

ಮೊದಲನೆಯದು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಥವಾ SIP. ಎರಡನೆಯದು ಲಂಪ್ಸಮ್ ಇನ್ವೆಸ್ಟ್‌ಮೆಂಟ್. SIP ಮೂಲಕ, ನಿಮ್ಮ ಹಣ ಪ್ರತಿ ತಿಂಗಳು, ಮೂರು ತಿಂಗಳು ಅಥವಾ ಆರು ತಿಂಗಳಿಗೆ ಕಂತುಗಳಲ್ಲಿ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಲ್ಲಿ ಹೂಡಿಕೆ ಆಗುತ್ತದೆ. ಲಂಪ್ಸಮ್ ಇನ್ವೆಸ್ಟ್‌ಮೆಂಟ್‌ನಲ್ಲಿ, ನೀವು ಅಷ್ಟೂ ಹಣವನ್ನು ಒಂದೇ ಬಾರಿ ಹೂಡಿಕೆ ಮಾಡುತ್ತೀರಿ.
SIP ಪ್ರಾರಂಭಿಸೋಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಒಂದು ಪಿಜ್ಜಾದ ಹಣದಲ್ಲಿ SIP ಶುರು ಮಾಡಬಹುದು. ಹೆಚ್ಚಿನ ಮ್ಯೂಚುಯಲ್ ಫಂಡ್ ಸ್ಕೀಮ್‌ಗಳು ತಿಂಗಳಿಗೆ 500 ರೂಪಾಯಿ SIP ಮಾಡೋಕೆ ನಿಮಗೆ ಅವಕಾಶ ಮಾಡಿಕೊಡುತ್ತವೆ. ICICI Pru ಇನ್ಫ್ರಾಸ್ಟ್ರಕ್ಚರ್ ಫಂಡ್, ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್, ಮೋತಿಲಾಲ್ ಓಸ್ವಾಲ್ ಮಿಡ್‌ಕ್ಯಾಪ್ ಫಂಡ್, ಮತ್ತು ICICI Pru ಲಾರ್ಜ್ ಮತ್ತು ಮಿಡ್‌ಕ್ಯಾಪ್ ಫಂಡ್‌ನಂತಹ ಕೆಲವು ಯೋಜನೆಗಳು ಕೇವಲ ರೂ. 100 ರ ಮಾಸಿಕ SIP ಆಯ್ಕೆಯನ್ನೂ ಕೊಟ್ಟಿವೆ. ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ, ಮ್ಯೂಚುವಲ್ ಫಂಡ್‌ಗಳಲ್ಲಿ SIP ಮಾಡೋದು ಒಳ್ಳೆಯ ವಿಧಾನ.
SIP ಮೂಲಕ ಇನ್ವೆಸ್ಟ್ ಮಾಡೋದು ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಮಾತ್ರ ಸಾಧ್ಯ. ನಿಮಗೆ ಬೇಕಾದಾಗ ನಿಮ್ಮ ಹಣ ವಿತ್‌ಡ್ರಾ ಮಾಡಲು ನಿಮಗೆ ಇದು ಸ್ವಾತಂತ್ರ್ಯ ನೀಡುತ್ತದೆ. ವಿತ್‌ಡ್ರಾ ಮಾಡಿದ ಹಣ 1 ರಿಂದ 3 ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ನಿಮ್ಮ ಆದಾಯದ ಮಟ್ಟವನ್ನು ಆಧರಿಸಿ SIP ಅಮೌಂಟ್ ಅನ್ನು ನಂತರ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಯಾವುದೇ ತುರ್ತು ಸಂದರ್ಭದಲ್ಲಿ, ನೀವು ಸ್ವಲ್ಪ ಸಮಯದವರೆಗೆ SIP ನಿಲ್ಲಿಸಲೂ ಸಾಧ್ಯವಿದೆ.
ನಿಮ್ಮ ವಯಸ್ಸು ಆಧರಿಸಿ ಎಸ್ ಐಪಿ ಹೂಡಿಕೆ ಆರಂಭಿಕೊಂಡರೆ ಒಳಿತು. ಕಡಿಮೆ ವಯಸ್ಸಿದ್ದಾಗ ಎಸ್ ಐಪಿ ಆರಂಭಿಸಿಕೊಂಡರೆ ಕಾಂಪೌಂಡಿಂಗ್ ಲಾಭ ಪಡೆಯಲು ಸಾಧ್ಯವಾಗುತ್ತದೆ. ಹಣಕಾಸು ಪರಿಣಿತರ ಸಲಹೆ ಆಧರಿಸಿ ನಿಮ್ಮ ಹೂಡಿಕೆ ಕಂತುಗಳನ್ನು ನಿರ್ಧರಿಸಿಕೊಳ್ಳಬಹುದು. ನಿಮ್ಮ ವೇತನ, ಹಣಕಾಸಿನ ಪರಿಸ್ಥಿತಿ, ವಹಿವಾಟು ಎಲ್ಲವನ್ನು ಆಧರಿಸಿಕೊಂಡು ಎಸ್ ಐಪಿ ಶುರು ಮಾಡಬಹುದು.


Click it and Unblock the Notifications