ಪ್ರಸ್ತುತ ಹಣಕಾಸು ಸಾಕ್ಷರತೆಯ ಅಗತ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನಮಗೆ ಎಷ್ಟು ಹಣಕಾಸು ಸಂಬಂಧಿತ ವಿಚಾರಗಳ ಬಗ್ಗೆ ತಿಳಿದಿದ್ದರೂ ನಾವು ಕೆಲವು ಬಾರಿಯಾದರೂ ಎಡವುತ್ತೇವೆ. ಹಾಗಿರುವಾಗ ಚಿಕ್ಕ ವಯಸ್ಸಿನಲ್ಲೇ ಹಣಕಾಸು ವಿಚಾರಗಳ ಬಗ್ಗೆ ಮಾಹಿತಿ ನೀಡುವುದು ಮುಖ್ಯವಾಗಿದೆ. ಮಕ್ಕಳಿಗೆ ಕೆಲವು ಹಣಕಾಸು ವಿಚಾರಗಳ ಬಗ್ಗೆ ತಿಳಿದಿದ್ದರೆ ಅದು ದೇಶದ ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲ, ವೈಯಕ್ತಿಕ ಹಣಕಾಸು ಸ್ಥಿರತೆಗೆ ಸಹಕಾರಿಯಾಗಿದೆ.
ನಾವು ಪ್ರಸ್ತುತ ಹಣಕಾಸು ಸಂಬಂಧಿತ ಕೆಲವು ವಿಚಾರಗಳು ತಿಳಿಯದೆ ತಪ್ಪು ಮಾಡುವುದನ್ನು ನೋಡಿದಾಗ ನಮ್ಮ ಮಕ್ಕಳು ಈ ತಪ್ಪು ಮಾಡದಂತೆ ಅವರನ್ನು ಈಗಲೇ ಸಿದ್ಧಪಡಿಸುವುದು ಮುಖ್ಯ ಎಂದು ಅನಿಸುವುದಿಲ್ಲವೇ?. ಹೌದು ನಾವು ನಮ್ಮ ಮಕ್ಕಳಿಗೆ ಈಗಲೇ ಕೆಲವಾದರೂ ಪ್ರಮುಖ ಆರ್ಥಿಕ ವಿಚಾರಗಳನ್ನು ತಿಳಿಸಬೇಕಾಗಿದೆ.
ಮಕ್ಕಳ ತಲೆಗೆ ನಾವು ದೊಡ್ಡ ದೊಡ್ಡ ವಿಚಾರಗಳನ್ನು ತುರುಕಲು ಸಾಧ್ಯವಾಗುವುದಿಲ್ಲ. ಅದು ಮಕ್ಕಳಿಗೆ ಮಾನಸಿಕವಾಗಿ ಗೊಂದಲ, ಹೊರೆ ಉಂಟು ಮಾಡಬಹುದು. ವಿಚಾರವನ್ನು ಅರ್ಥ ಮಾಡಿಕೊಳ್ಳಲು ಕೂಡಾ ಸಾಧ್ಯವಾಗದೆ ಇರಬಹುದು. ಅದಕ್ಕಾಗಿ ನಾವು ಕೆಲವು ಸರಳ ಹಣಕಾಸು ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ನಿಮ್ಮ ಮಕ್ಕಳು ಪ್ರಮುಖವಾಗಿ ತಿಳಿದಿರಬೇಕಾದ 7 ಹಣಕಾಸು ವಿಚಾರಗಳನ್ನು ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಈ ಓದಿ...
ಉಳಿತಾಯ
ನಿಮ್ಮ ಆದಾಯದಲ್ಲಿ ಕೊಂಚ ಹಣವನ್ನು ಸಂಗ್ರಹ ಮಾಡಿ, ನಿಮ್ಮ ಭವಿಷ್ಯಕ್ಕಾಗಿ ಕಾಪಿಟ್ಟುಕೊಳ್ಳುವುದೇ ಸೇವಿಂಗ್ಸ್ ಅಥವಾ ಉಳಿತಾಯವಾಗಿದೆ. ನಾವು ನಮ್ಮ ಆದಾಯದಲ್ಲಿನ ಹಣವನ್ನು ಉಳಿತಾಯ ಮಾಡುವುದು ಅತೀ ಮುಖ್ಯವಾಗಿದೆ. ಯಾಕೆಂದರೆ ಯಾವ ಸಂದರ್ಭದಲ್ಲಿ ನಮಗೆ ಹಣ ತುರ್ತಾಗಿ ಬೇಕಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಹಾಗಾಗಿ ನಿಮ್ಮ ಮಕ್ಕಳು ಉಳಿತಾಯ ಎಂದರೇನು ಎಂದು ಪ್ರಮುಖವಾಗಿ ತಿಳಿದಿರಬೇಕು. ಹಾಗೆಯೇ ನಾವು ಯಾಕಾಗಿ ಉಳಿತಾಯ ಮಾಡಬೇಕು ಎಂಬುವುದನ್ನು ಕೂಡಾ ತಿಳಿಸಬೇಕು. ಮಕ್ಕಳಲ್ಲಿ ತಾವು ಕೂಡಾ ಹಣ ಉಳಿತಾಯ ಮಾಡಬೇಕು ಎಂಬುವುದರ ಅರಿವು ಮೂಡಿಸಬೇಕು.
ಆಸ್ತಿ
ಭವಿಷ್ಯದಲ್ಲಿ ಆದಾಯವನ್ನು ಗಳಿಸಲು ನಿಮಗೆ ಆರ್ಥಿಕವಾಗಿ ಸಹಾಯ ಮಾಡುವುದರಲ್ಲಿ ಒಂದು ಆಸ್ತಿಯಾಗಿದೆ. ವೈಯಕ್ತಿಕ ಹಣಕಾಸು ವಿಷಯದಲ್ಲಿ, ನಿಮ್ಮ ಸ್ವತ್ತುಗಳು ಆದಾಯವನ್ನು ಗಳಿಸಲು ಮತ್ತು ನಿಮ್ಮ ಭವಿಷ್ಯವನ್ನು ರಕ್ಷಿಸಲು ನಿಮಗೆ ಸಹಾಯ ಮಾಡುವುದು ಆಗಿದೆ. ಇದು ಹೂಡಿಕೆಯಾಗಿರಬಹುದು, ರಕ್ಷಣೆಯ ಯೋಜನೆಯಾಗಿರಬಹುದು ಅಥವಾ ಬಾಡಿಗೆಗೆ ನೀಡುತ್ತಿರುವ ಕಾರುಗಳು ಆಗಿರಬಹುದು. ಆಸ್ತಿಗಳ ಬಗ್ಗೆ ಮಗುವಿಗೆ ತಿಳಿಸಿ. ಹಾಗೆಯೇ ಸ್ವತ್ತುಗಳಿಗೆ ಆದ್ಯತೆ ನೀಡುವುದನ್ನು ಅರ್ಥ ಮಾಡಿಕೊಳ್ಳಿ.
ಬಜೆಟ್
ಬಜೆಟ್‌ನ ಪ್ರಾಮುಖ್ಯತೆಯನ್ನು ನಾವು ಹೆಚ್ಚಾಗಿ ಒತ್ತಿ ಹೇಳಬೇಕಾದ ಅಗತ್ಯವಿಲ್ಲ. ಜೀವನದಲ್ಲಿ, ನಾವು ಎಷ್ಟು ಹಣವನ್ನು ಗಳಿಸುತ್ತೇವೆ ಎಂಬುದರ ಬಗ್ಗೆ ಮಾತ್ರವಲ್ಲ, ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುವುದು ಕೂಡಾ ಮುಖ್ಯವಾಗಿದೆ. ಹಣವನ್ನು ಹೇಗೆ ನಿಯೋಜಿಸಬೇಕು, ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಹೂಡಿಕೆಗಾಗಿ ಹಣವನ್ನು ಹೇಗೆ ಹೊಂದಿಸಬೇಕು ಎಂಬುವುದು ಬಜೆಟ್ ಆಗಿದೆ. ನಿಮ್ಮ ಬಜೆಟ್‌ನ ನಿರ್ದಿಷ್ಟ ವಿಭಾಗದಲ್ಲಿ ಎಷ್ಟು ಖರ್ಚು ಮಾಡಬೇಕೆಂದು ನಿಮ್ಮ ಮಗು ಅರ್ಥಮಾಡಿಕೊಳ್ಳಬೇಕು.
ಸಾಲ
ಸಾಲವು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಇನ್ನೊಬ್ಬ ವ್ಯಕ್ತಿ, ಸಂಸ್ಥೆ ಅಥವಾ ಬ್ಯಾಂಕ್‌ನಿಂದ ಪಡೆಯುವ ಮೊತ್ತವಾಗಿದೆ. ನಿಮ್ಮ ಮಗುವಿಗೆ ಅವರ ಆರ್ಥಿಕ ಸ್ಥಿತಿಗೆ ಸಾಲ ಎಷ್ಟು ಅಗತ್ಯವಾಗಿದೆ. ಸಾಲವನ್ನು ಪಡೆಯುವುದು ಎಷ್ಟು ಮುಖ್ಯ ಎಂಬುವುದನ್ನು ತಿಳಿದಿರಬೇಕು.
ಬಡ್ಡಿದರ
ಸಾಲದ ಬಡ್ಡಿಯು ಸಾಲ ಪಡೆದಿರುವವರು ಅಸಲು ಜೊತೆಗೆ ಸಾಲ ನೀಡಿದ ಸಂಸ್ಥೆ ಅಥವಾ ವ್ಯಕ್ತಿಗೆ ಮರುಪಾವತಿ ಮಾಡಬೇಕಾದ ಮೊತ್ತವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಲವನ್ನು ಪಡೆಯಲು ಸಾಲಗಾರನು ಪಾವತಿಸಬೇಕಾದ ಮೊತ್ತವಾಗಿದೆ. ಬಡ್ಡಿ ಲೆಕ್ಕಾಚಾರವು ಹಣಕಾಸಿನ ಮೂಲಭೂತ ಮತ್ತು ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನಿಮ್ಮ ಮಗುವಿಗೆ ಅರಿವಿನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ತೆರಿಗೆ
ತೆರಿಗೆಯು ನಿಮ್ಮ ಆದಾಯದ ಒಂದು ಭಾಗವಾಗಿದೆ. ಅದನ್ನು ನೀವು ಸರ್ಕಾರಕ್ಕೆ ಪಾವತಿಸಬೇಕು. ಆದಾಯದ ಮೂಲ, ಆದಾಯವನ್ನು ಆಧರಿಸಿ ತೆರಿಗೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ವಿವಿಧ ಸಾರ್ವಜನಿಕ ವೆಚ್ಚಗಳು ಮತ್ತು ಆಡಳಿತದ ಮೇಲೆ ಖರ್ಚು ಮಾಡಲು ಸರ್ಕಾರವು ತೆರಿಗೆಗಳನ್ನು ಸಂಗ್ರಹಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗಾಗಿ ತೆರಿಗೆ ಮೂಲಕ ನೀಡುವ ಕೊಡುಗೆಯನ್ನು ನಿಮ್ಮ ಮಗುವಿಗೆ ಅರ್ಥ ಮಾಡಿಸಿ.
ಹೂಡಿಕೆ
ಆದಾಯವನ್ನು ಸೃಷ್ಟಿಸುವುದು ಹಾಗೂ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವುದೇ ಹೂಡಿಕೆಯ ಉದ್ದೇಶವಾಗಿದೆ. ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ಬ್ಯಾಂಕ್‌ನಲ್ಲಿ ನಾವು ಹೂಡಿಕೆ ಮಾಡಬಹುದು. ನಿಮ್ಮ ಮಕ್ಕಳು ತಮ್ಮ ಭವಿಷ್ಯವನ್ನು ಆರ್ಥಿಕವಾಗಿ ರಕ್ಷಿಸಿಕೊಳ್ಳಲು ಹೂಡಿಕೆಯ ಮಹತ್ವವನ್ನು ತಿಳಿದಿರಬೇಕು. ಹಾಗೆಯೇ ಯಾವುದು ಸುರಕ್ಷಿತ ಹೂಡಿಕೆ, ಯಾವುದು ಅಸುರಕ್ಷಿತ ಹೂಡಿಕೆ ಎಂಬುವುದು ಕೂಡಾ ತಿಳಿದಿರಬೇಕು. ಏಕೆಂದರೆ ಹೂಡಿಕೆಯು ಸಂಪತ್ತನ್ನು ಸೃಷ್ಟಿಸುವ ಏಕೈಕ ಮಾರ್ಗವಾಗಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications