ನವದೆಹಲಿ, ಏಪ್ರಿಲ್ 1: ಭಾರತದ ಶ್ರೀಮಂತ ಆಧ್ಯಾತ್ಮಿಕತೆಯ ವ್ಯವಸ್ಥೆಯೊಳಗೆ ಹಲವಾರು ಗೌರವಾನ್ವಿತ ಗುರುಗಳು ಮತ್ತು ಬಾಬಾಗಳು ಕಂಡು ಬರುತ್ತಾರೆ. ಅವರ ಬೋಧನೆಗಳಿಂದ ಪ್ರಭಾವಿತರಾಗಿ ಲಕ್ಷಾಂತರ ಭಕ್ತರು ಅವರನ್ನು ಅನುಸರಿಸುತ್ತಾರೆ, ಆರಾಧಿಸುತ್ತಾರೆ.
ಪ್ರಪಂಚದಾದ್ಯಂತ ಲಕ್ಷಾಂತರ ಅನುಯಾಯಿಗಳು, ಭಕ್ತರನ್ನು ಹೊಂದಿರುವ ಈ ಆಧ್ಯಾತ್ಮಿಕ ನಾಯಕರು ಜನರಿಂದ ಗಣನೀಯ ಸಂಪತ್ತನ್ನು ಸಂಗ್ರಹಿಸಿದ್ದು, ಅಪಾರ ಪ್ರಭಾವವನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಏಳು ಶ್ರೀಮಂತ ಮತ್ತು ಅತ್ಯಂತ ಪ್ರಭಾವಶಾಲಿ ಆಧ್ಯಾತ್ಮಿಕ ಗುರುಗಳು ಮತ್ತು ಬಾಬಾಗಳ ಬಗ್ಗೆ ತಿಳಿಯೋಣ.

ಸದ್ಗುರು ಜಗ್ಗಿ ವಾಸುದೇವ್:
ಆಧ್ಯಾತ್ಮಿಕತೆ ಮತ್ತು ಯೋಗದ ಕುರಿತಾದ ತಮ್ಮದೇ ವಿಭಿನ್ನ ದೃಷ್ಟಿಕೋನಕ್ಕೆ ಹೆಸರುವಾಸಿಯಾದ ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಪ್ರಮುಖ ಆಧ್ಯಾತ್ಮಿಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ ವಿಶ್ವದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವ ಅವರು, ಅಂದಾಜು ನಿವ್ವಳ ಮೌಲ್ಯವು 2023 ರ ಹೊತ್ತಿಗೆ 18 ಕೋಟಿ ರೂ.ಗಳಷ್ಟಿದೆ ಎನ್ನಲಾಗಿದೆ. ಸದ್ಗುರು ಯೋಗ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅವರ ಪರಿಸರ ಯೋಜನೆಗಳನ್ನು ಒಳಗೊಂಡಿದೆ. ಅವರ ಬೋಧನೆಗಳ ಮೂಲಕ ಅವರು ಆಂತರಿಕ ಎಂಜಿನಿಯರಿಂಗ್ ಮತ್ತು ಸಮಗ್ರ ಜೀವನ ತತ್ವಗಳ ಬಗ್ಗೆ ಉಪನ್ಯಾಸವನ್ನು ನೀಡುತ್ತಾರೆ.
ಶ್ರೀ ಶ್ರೀ ರವಿಶಂಕರ್:
ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಅವರು ಜಾಗತಿಕ ಆಧ್ಯಾತ್ಮಿಕ ಗುರು ಎಂದೇ ಗುರುತಿಸಿಕೊಂಡಿದ್ದಾರೆ. ಶಾಂತಿ, ಧ್ಯಾನ ಮತ್ತು ಮಾನವೀಯ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಜಗತ್ತಿನ 151 ದೇಶಗಳಲ್ಲಿ 300 ಮಿಲಿಯನ್ ವ್ಯಕ್ತಿಗಳನ್ನು ಮೀರಿದ ಅಪಾರ ಅನುಯಾಯಿಗಳೊಂದಿಗೆ ವ್ಯಾಪಕ ಪ್ರಭಾವ ಹೊಂದಿದ್ದಾರೆ. ಇಂಡಿಯಾ ಟುಡೇ ಪ್ರಕಾರ, ಶ್ರೀ ಶ್ರೀ ರವಿಶಂಕರ್ ಅವರು ತಮ್ಮ ಆರನೇ ವಯಸ್ಸಿನಲ್ಲಿ ವೈದಿಕ ಸಾಹಿತ್ಯದ ಅಧ್ಯಯನವನ್ನು ಪ್ರಾರಂಭಿಸಿದರು ಹಾಗೂ ತಮ್ಮ ಶಿಕ್ಷಣವನ್ನು ಹದಿನೇಳಕ್ಕೆ ಪೂರ್ಣಗೊಳಿಸಿದರು.
ಅವರ ಆರ್ಟ್ ಆಫ್ ಲಿವಿಂಗ್ ಕೋರ್ಸ್‌ಗಳು ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿವೆ. ಒತ್ತಡ ಮುಕ್ತ ಜೀವನವನ್ನು ಮತ್ತು ಸಾಮರಸ್ಯದ ಸಹಬಾಳ್ವೆಗೆ ಪ್ರೇರಣೆ ನೀಡಿವೆ ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾ ಅವರ ನಿವ್ವಳ ಮೌಲ್ಯವು ರೂ 1,000 ಕೋಟಿ ಎಂದು ಅಂದಾಜಿಸಿದೆ. ಇದು ಆರೋಗ್ಯ ಸೌಲಭ್ಯಗಳು, ಔಷಧಾಲಯಗಳು ಮತ್ತು ಆರ್ಟ್ ಆಫ್ ಲಿವಿಂಗ್ ಕೇಂದ್ರಗಳಂತಹ ಆಸ್ತಿಗಳನ್ನು ಒಳಗೊಂಡಿದೆ.
ಬಾಬಾ ರಾಮದೇವ್:
ಯೋಗ ಗುರು ಮತ್ತು ದಾರ್ಶನಿಕ ಉದ್ಯಮಿ ಬಾಬಾ ರಾಮ್‌ದೇವ್ ಅವರು ತಮ್ಮ ಪತಂಜಲಿ ಆಯುರ್ವೇದ ಸಾಮ್ರಾಜ್ಯದ ಮೂಲಕ ಭಾರತದಲ್ಲಿ ತಮ್ಮದೇ ಖ್ಯಾತಿ ಕುಖ್ಯಾತಿ ಎರಡನ್ನು ಹೊಂದಿದ್ದಾರೆ. ಹರಿಯಾಣದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಹರಿದ್ವಾರದಲ್ಲಿ ಯೋಗ ಕಲಿಸಿದರು. ಪ್ರಸ್ತುತ ಅವರು ಹಲವಾರು ಶಾಖೆಗಳೊಂದಿಗೆ ಪತಂಜಲಿ ಯೋಗಪೀಠ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಅವರ ನಿವ್ವಳ ಮೌಲ್ಯವು 1,600 ಕೋಟಿ ರೂಪಾಯಿಗಳನ್ನು ಮೀರುತ್ತದೆ ಎಂದು ಅಂದಾಜಿಸಲಾಗಿದೆ.
ಮಾತಾ ಅಮೃತಾನಂದಮಯಿ (ಅಮ್ಮ):
ಮಾತಾ ಅಮೃತಾನಂದಮಯಿ ಹಿಂದೂ ಗುರುವಾಗಿ ಗುರುತಿಸಿಕೊಂಡಿದ್ದಾರೆ. ಇವರು ಕೇರಳದ ಮೂಲದವರು. ಅಲ್ಲಿ ಅವರು ಸೆಪ್ಟೆಂಬರ್ 27, 1953 ರಂದು ಜನಿಸಿದರು. ಅಮ್ಮಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಅಮೃತಾನಂದಮಯಿ ಟ್ರಸ್ಟ್ ಅನ್ನು ನೋಡಿಕೊಳ್ಳುತ್ತಾರೆ, ಸುಮಾರು 1,500 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್:(ಡೆರಾ ಸಚ್ಚಾ)
ರಾಮ್ ರಹೀಮ್ ಭಾರತದ ಶ್ರೀಮಂತ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. 1990 ರಿಂದ ಅವರು ಪ್ರಭಾವದಿಂದ ಅಪಾರ ಸಂಖ್ಯೆಯ ಹರಿಜನರು ಮತ್ತು ದಲಿತರು ರಾಮ್ ರಹೀಮ್ ಸಿಂಗ್ ಅವರ ಹಿಂದೆ ರ್ಯಾಲಿ ಮಾಡಿದ್ದರು. ಅವರ ಅಂದಾಜು ನಿವ್ವಳ ಮೌಲ್ಯ ಸುಮಾರು 1,455 ಕೋಟಿ ರೂ. ಎನ್ನಲಾಗಿದೆ.
ಅಸಾರಾಂ ಬಾಪು:
ಅಸಾರಾಂ ಬಾಪು 17,000 ಬಾಲ ಸಂಸ್ಕಾರ ಕೇಂದ್ರಗಳ ಮಾಲೀಕತ್ವದೊಂದಿಗೆ ಜಾಗತಿಕವಾಗಿ 350 ಆಶ್ರಮಗಳ ಜಾಲವನ್ನು ನೋಡಿಕೊಳ್ಳುತ್ತಾರೆ. 2021 ರ ಹೊತ್ತಿಗೆ ವರದಿಗಳ ಪ್ರಕಾರ ಅವರ ಟ್ರಸ್ಟ್ ಸುಮಾರು 350 ಕೋಟಿ ರೂಪಾಯಿಗಳ ವಾರ್ಷಿಕ ಆದಾಯವನ್ನು ಗಳಿಸಿದೆ.
ಸ್ವಾಮಿ ನಿತ್ಯಾನಂದ:
ಸ್ವಾಮಿ ನಿತ್ಯಾನಂದನಿತ್ಯಾನಂದ ಧ್ಯಾನಪೀಠಂ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ. ಇದು ವಿಶ್ವಾದ್ಯಂತ ದೇವಾಲಯಗಳು, ಗುರುಕುಲಗಳು ಮತ್ತು ಆಶ್ರಮಗಳನ್ನು ಒಳಗೊಂಡಿದೆ. ಅವರ ಅಂದಾಜು ನಿವ್ವಳ ಮೌಲ್ಯ ಸುಮಾರು 10,000 ಕೋಟಿ ರೂಪಾಯಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


Click it and Unblock the Notifications