ಬೆಂಗಳೂರು, ಜೂನ್ 13: ಈ ಜಂಜಾಟದ ಬದುಕಿನಲ್ಲಿ ಅನಾರೋಗ್ಯ ಯಾವಾಗ ಕಾಡುತ್ತದೆ ಎಂದು ಹೇಳುವುದು ಅಸಾಧ್ಯ. ಯುವಕರು ಹೃದಯದಕ್ಕೆ ಸಂಬಂಧಿಸಿದ ತೊಂದರೆಗೆ ಸಿಲುಕುತ್ತಿರುವ ಉದಾಹರಣೆಗಳನ್ನು ಮೇಲಿಂದ ಮೇಲೆ ನೋಡುತ್ತಿದ್ದೇವೆ. ಹಾಗಿದ್ದರೆ ಇದಕ್ಕೆಲ್ಲ ಪರಿಹಾರ ಏನು? ಒಂದು ಪರಿಹಾರ ಇದೆ. ಅದು ನಿಮ್ಮನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕುವುದರಿಂದ ಕಾಪಾಡುತ್ತದೆ. ಅದುವೇ ಆರೋಗ್ಯ ವಿಮೆ. ಹೆಲ್ತ್ ಇನ್ಶೂರೆನ್ಸ್.
ಹಾಗಿದ್ದರೆ ನೀವು ಆರೋಗ್ಯ ವಿಮೆ ಕೊಳ್ಳುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಿಕೊಳ್ಳಬೇಕು? ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ. ಕಳೆದ 5 ವರ್ಷಗಳಲ್ಲಿ ಭಾರತದ ಶೇಕಡಾ 67ರಷ್ಟು ಕುಟುಂಬಗಳು ಉಳಿತಾಯ ವಾಪಸ್ ಪಡೆದುಕೊಂಡಿವೆ. ಈ 67 ಶೇಕಡಾದ ಪೈಕಿ 22.3 ಶೇಕಡಾದಷ್ಟು ಕುಟುಂಬಗಳು ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ತಮ್ಮ ಉಳಿತಾಯವನ್ನು ಮುರಿದಿವೆ ಎನ್ನುವ ಆತಂಕಕಾರಿ ಸಂಗತಿಯನ್ನು ಸಮೀಕ್ಷೆಯೊಂದು ಹೇಳಿದೆ.

ಆರೋಗ್ಯ ವಿಮೆ ಖರೀದಿಗೂ ಮುನ್ನ ಈ ಎಲ್ಲ ಅಂಶಗಳನ್ನು ಗಮನಿಸಿಕೊಳ್ಳಬೇಕು. ಮೊದಲಿಗೆ ನಿಮ್ಮ ವಯಸ್ಸು, ನೀವು ಚಿಕ್ಕವರಾಗಿದ್ದರೆ ನಿಮ್ಮ ಪ್ರೀಮಿಯಂ ಕಡಿಮೆ ಇರುತ್ತದೆ. ಎರಡನೆಯದು ನಿಮ್ಮ ಮತ್ತು ನಿಮ್ಮ ಕುಟುಂಬದ ಮೆಡಿಕಲ್ ಹಿಸ್ಟರಿ. ಮೂರನೆಯದು ನೀವು ವಾಸಿಸುವ ನಗರ ಅಥವಾ ಪಟ್ಟಣ ಯಾವುದು ಎನ್ನುವುದು ಮುಖ್ಯವಾಗುತ್ತದೆ. ನಾಲ್ಕನೆಯದಾಗಿ ನೀವು ಯಾವ ರೀತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರಿ ಎನ್ನುವುದು ಗಣನೆಗೆ ಬರುತ್ತದೆ. ನೀವೆಷ್ಟು ಮೊತ್ತದ ಪ್ರೀಮಿಯಂ ಪಾವತಿಸಬಹುದು ಎನ್ನುವುದು ಸಹ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ ಎಂದರೂ 10 ಲಕ್ಷ ರೂಪಾಯಿಗಳ ವಿಮಾ ಕವರೇಜ್ ಪಡೆದುಕೊಳ್ಳಬೇಕು ಎನ್ನುವ ಸಲಹೆಯನ್ನು ಪರಿಣಿತರು ನೀಡುತ್ತಾರೆ.
ದೆಹಲಿ, ಬೆಂಗಳೂರಿನಂತಹ ಮೆಟ್ರೋ ಸಿಟಿಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿ ಇರುತ್ತದೆ. ಆದರೆ ಸಣ್ಣ ನಗರಗಳಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ ಇರಬಹುದು. ಹೀಗಾಗಿ ದೊಡ್ಡ ನಗರಗಳಲ್ಲಿ ವಾಸಿಸುವ ಮಂದಿ ಹೆಚ್ಚಿನ ಮೊತ್ತದ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡುವುದು ಬೆಸ್ಟ್. ಅದೇ ರೀತಿ ಜನರಲ್ ಹಾಸ್ಪಿಟಲ್ ನ ಸಾಮಾನ್ಯ ಕೊಠಡಿಗೆ ದಾಖಲಾದರೆ ಅಲ್ಲಿ ಒಂದು ದಿನದ ಬಾಡಿಗೆ 2 ಸಾವಿರದಿಂದ 3 ಸಾವಿರ ಇರುತ್ತದೆ.. ಆದರೆ ದೊಡ್ಡ ಆಸ್ಪತ್ರೆಯಲ್ಲಿನ ಡಿಲಕ್ಸ್ ರೂಮ್ ನ ಬಾಡಿಗೆ ದಿನಕ್ಕೆ 10 ರಿಂದ 15 ಸಾವಿರ ಅಥವಾ ಅದಕ್ಕಿಂತ ಜಾಸ್ತಿಯಾಗಿರುತ್ತದೆ.
ಈ ಎಲ್ಲ ಅಂಶಗಳನ್ನು ಆಧರಿಸಿಕೊಂಡು ನಿಮಗೆ ಯಾವ ಬಗೆಯ ಆರೋಗ್ಯ ವಿಮೆ ಬೇಕು ಮತ್ತು ಅದು ನಿಮಗೆ ಹೇಗೆ ಸೂಟ್ ಆಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿಕೊಳ್ಳಬೇಕು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications