ಗೌತಮ್ ಸಿಂಘಾನಿಯಾ ಭಾರತದ ಖ್ಯಾತ ಹಾಗೂ ಸಿರಿವಂತ ಉದ್ಯಮಿಗಳಲ್ಲೊಬ್ಬರು. ಇವರು ಸೂಟಿಂಗ್ ಫ್ಯಾಬ್ರಿಕ್ ನ ವಿಶ್ವದ ಅತಿದೊಡ್ಡ ಉತ್ಪಾದಕ ರೇಮಂಡ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಟೆಕ್ಸ್ ಟೈಲ್ ಟೈಕೂನ್ ಆಗಿರುವ ಇವರು ನಾನ್-ಕೋರ್ ಕಾರ್ಯಾಚರಣೆಗಳನ್ನು ಮಾರಾಟ ಮಾಡಿ ಕಂಪನಿಯನ್ನು ಮರುನಿರ್ಮಾಣ ಮಾಡಿದ್ದಾರೆ.
ಗೌತಮ್ ಸಿಂಘಾನಿಯಾ ಅವರು ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಜೆಕೆ ಹೌಸ್‌ನಲ್ಲಿ ವಾಸಿಸುತ್ತಿದ್ದು, ಇದು 6,000 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು ಈ ಶ್ರೀಮಂತ ನಿವಾಸದ ಹೆಮ್ಮೆಯ ಮಾಲೀಕರಾಗಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ಆಂಟಿಲಿಯಾ ನಂತರ ಭಾರತದಲ್ಲಿ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ.

ಜೆಕೆ ಹೌಸ್ 145 ಮೀಟರ್ ಎತ್ತರವಿದ್ದು ಇದು ಭಾರತದ ಎರಡನೇ ಅತಿ ಎತ್ತರದ ಖಾಸಗಿ ಗಗನಚುಂಬಿ ಕಟ್ಟಡವಾಗಿದೆ. ಜೆಕೆ ಹೌಸ್ ಎರಡು ಈಜುಕೊಳಗಳನ್ನು ಹೊಂದಿದ್ದು, ಅದ್ಬುತ ಒಳಂಗಾಣ ಅಲಂಕಾರವನ್ನು ಹೊಂದಿದ್ದು, 30-ಅಂತಸ್ತಿನ ರಚನೆಯಾಗಿದೆ. ಮಾತ್ರವಲ್ಲದೇ ಈ ಕಟ್ಟಡ ಹೆಲಿಪ್ಯಾಡ್ ಹೊಂದಿದ್ದು ಐದು ಮಹಡಿಗಳು ಕೇವಲ ಪಾರ್ಕಿಂಗ್ ಗಾಗಿ ನಿಗದಿಯಾಗಿದೆ.
ಇಷ್ಟು ಮಾತ್ರವಲ್ಲದೇ ಜೆಕೆ ಹೌಸ್‌ನಲ್ಲಿರುವ ಅದ್ದೂರಿ ಸೌಕರ್ಯಗಳು ಸ್ಪಾ, ಜಿಮ್, ಹೋಮ್ ಥಿಯೇಟರ್ ಹಾಗೂ ಇನ್ನಿತರ ಸ್ಥಳಗಳನ್ನು ಒಳಗೊಂಡಿವೆ. ಸಿಂಘಾನಿಯಾ ಕುಟುಂಬವು ಜೆಕೆ ಹೌಸ್‌ನ ಮೇಲಿನ ಹಂತಗಳ ವಸತಿ ಘಟಕಗಳಲ್ಲಿ ವಾಸಿಸುತ್ತಿದ್ದಾರೆ.ಇದಕ್ಕಿಂತಲೂ ವಿಶೇಷವಾಗಿ ಈ ಭವ್ಯ ಮಹಲು ವಸ್ತುಸಂಗ್ರಹಾಲಯವನ್ನು ಕೂಡಾ ಒಳಗೊಂಡಿದೆ.
ಉದ್ಯಮದಲ್ಲಿ ಬೆಳವಣಿಗೆ ಸುದೀರ್ಘ ಇತಿಹಾಸವನ್ನು ಪ್ರದರ್ಶಿಸುವ ಈ ವಸ್ತುಸಂಗ್ರಹಾಲಯದಲ್ಲಿ ವಸ್ತ್ರಗಳ ಅವಶೇಷಗಳು, ಕುಟುಂಬದ ಆರಂಭಿಕ ವರ್ಷಗಳ ಸ್ನ್ಯಾಪ್‌ಶಾಟ್‌ಗಳು, ಸರ್ಟೀಫಿಕೇಟ್‌ಗಳು ಮತ್ತು ಫ್ಯಾಬ್ರಿಕ್ ಉದ್ಯಮದಲ್ಲಿ ಬಳಸಲಾದ ಉಪಕರಣಗಳು ಇತ್ಯಾದಿಗಳನ್ನು ತುಂಬಿದೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ವಸ್ತುಸಂಗ್ರಹಾಲಯದಲ್ಲಿ ಜೇಡ್‌ನ ಗಣನೀಯ ಸಂಗ್ರಹವನ್ನು ಹೊಂದಿದೆ ಎಂದು ವರದಿಯಾಗಿದೆ.ಜೆಕೆ ಹೌಸ್‌ನಲ್ಲಿ ಹಲವಾರು ಕುಟುಂಬ ಸದಸ್ಯರು ವಾಸಿಸುತ್ತಿದ್ದು ಮೇಲಿನ ಅಂತಸ್ತುಗಳನ್ನು ಫ್ಲಾಟ್‌ಗಳಾಗಿ ವಿಂಗಡಿಸಲಾಗಿದೆ ಎಂದು ವರದಿಯಾಗಿದೆ.
ಗೌತಮ್ ಸಿಂಘಾನಿಯಾ ಅವರು ಮಾರ್ವಾಡಿ ಕೈಗಾರಿಕೋದ್ಯಮ ಕುಟುಂಬದಲ್ಲಿ ವಿಜಯಪತ್ ಸಿಂಘಾನಿಯಾ ಮತ್ತು ಆಶಾಬಾಯಿ ಸಿಂಘಾನಿಯಾ ದಂಪತಿಯ ಪುತ್ರರಾಗಿ 1965ರ ಸೆಪ್ಟೆಂಬರ್ 9ರಂದು ಜನಿಸಿದರು. ಸಿಂಘಾನಿಯಾ ಅವರು ಮೊದಲೇ ಹೇಳಿದಂತೆ ಉದ್ಯಮಶೀಲತೆಯ ಸುದೀರ್ಘ ಇತಿಹಾಸವನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಕಾರಣ ತಾವು ಬೆಳೆದು ದೊಡ್ಡವರಾದ ಬಳಿಕ ಅದೇ ಹಾದಿಯಲ್ಲಿ ಸಾಗಿ ತಮ್ಮ ಕುಟುಂಬದ ಪರಂಪರೆಯನ್ನು ಬೆಳೆಸುವುದನ್ನು ಮುಂದುವರೆಸಿದ್ದಾರೆ.


Click it and Unblock the Notifications