ನವದೆಹಲಿ, ಜೂನ್ 8: ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದರ ಜತೆಗೆ ಕ್ರೆಡಿಟ್ ಕಾರ್ಡ್ ಬಿಲ್ ತುಂಬುವುದಕ್ಕೂ ಸರಿಯಾದ ಕ್ರಮವಿದೆ. ಇಲ್ಲಿ ಅಚ್ಚರಿ ಪಡುವಂಥದ್ದು ಏನೂ ಇಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಸಹ ನಿಯಮದಲ್ಲಿ ಇತ್ತಿಚೇಗೆ ಕೆಲವು ಬದಲಾವಣೆಗಳನ್ನು ಮಾಡಿದೆ.
ಕ್ರೆಡಿಟ್ ಕಾರ್ಡ್‌ನ ಎರಡು ಸ್ಟೇಟ್‌ಮೆಂಟ್ ಡೇಟ್ ಗಳ ನಡುವಿನ ನಡುವಿನ ಅವಧಿಯನ್ನು ಬಿಲ್ಲಿಂಗ್ ಸೈಕಲ್ ಎಂದು ಕರೆಯಲಾಗುತ್ತದೆ. ಸ್ಟೇಟ್‌ಮೆಂಟ್ ಡೇಟ್ ಎನ್ನುವುದು ಆ ತಿಂಗಳ ಬಿಲ್ ಜನರೇಟ್ ಮಾಡುವ ದಿನಾಂಕವಾಗಿದೆ. ಈ ಬಿಲ್ ನಿರ್ದಿಷ್ಟ ದಿನಾಂಕದಂದು ಜನರೇಟ್ ಆಗುತ್ತದೆ. ಬಿಲ್ ಜನರೇಟ್ ಆದ ಮೇಲೆ ಬಿಲ್ ಕಟ್ಟುವ ಡ್ಯೂ ಟೇಟ್ ಸಾಮಾನ್ಯವಾಗಿ 10 ರಿಂದ 15 ದಿನಗಳು ಇರುತ್ತದೆ.

ಅಂದರೆ ಕಾರ್ಡ್ ಬಳಕೆದಾರರು 45 ದಿನಗಳವರೆಗೆ ಬಡ್ಡಿ ರಹಿತ ಅವಧಿ ಪಡೆದುಕೊಳ್ಳುತ್ತಾರೆ. ಈ 45 ದಿನಗಳಲ್ಲಿ, ಬಿಲ್ಲಿಂಗ್ ಸೈಕಲ್‌ನ 30 ದಿನಗಳು ಮತ್ತು 15 ರಿಂದ 20 ದಿನದ ಡ್ಯೂ ಡೇಟ್ ಅವಧಿ ಸೇರಿಕೊಳ್ಳುತ್ತದೆ. ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸದಿದ್ದರೆ ಬಡ್ಡಿ ವಿಧಿಸಲಾಗುತ್ತದೆ. ನಿಗದಿತ ದಿನಾಂಕದ ನಂತರ ಮಾಡಿದ ಯಾವುದೆ ಪಾವತಿಗೆ ವಿನಾಯಿತಿ ಇರೋದಿಲ್ಲ ಎನ್ನುವುದು ನಿಮಗೆ ನೆನಪಿನಲ್ಲಿರಬೇಕು.
ಕಾರ್ಡ್ ಬಳಕೆದಾರರು ತಿಂಗಳ 1 ರಿಂದ 10 ತಾರೀಕಿನ ನಡುವೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂದು ಭಾವಿಸಿದರೆ ತಿಂಗಳ 25 ರ ನಂತರ ಬಿಲ್ ಜನರೇಟ್ ದಿನಾಂಕ ಹೊಂದಿಸಿಕೊಂಡರೆ ಅವರ ಬಿಲ್ಲಿಂಗ್ ಡ್ಯೂ ಡೇಟ್ ಮುಂದಿನ 10 ಅಥವಾ 15 ತಾರೀಕಿನ ಸುಮಾರಿಗೆ ಬರುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರ ಸುಮಾರು 45 ದಿನಗಳ ಬಡ್ಡಿ-ಮುಕ್ತ ಕ್ರೆಡಿಟ್ ಅವಧಿ ಪಡೆಯುತ್ತಾರೆ. ಅಂದರೆ ನೀವು ಖರ್ಚು ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿ ಕಟ್ಟಬೇಕಾಗಿಲ್ಲ.
ಕ್ರೆಡಿಟ್ ಕಾರ್ಡ್ ಬಿಲ್ ತುಂಬಲು ಈಗ ಕ್ರೆಡ್ ನಂತಹ ಆನ್ ಲೈನ್ ಅಪ್ಲಿಕೇಶನ್ ಗಳು ಸಹ ಇವೆ. ನಿಮ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಗೆ ಲಿಂಕ್ ಮಾಡಿಕೊಂಡಿದ್ದರೆ ಬಿಲ್ಲಿಂಗ್ ದಿನಾಂಕವನ್ನು ಅವು ನೆನಪಿಸುತ್ತಿರುತ್ತವೆ. ನಿಮ್ಮ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿ ಆಟೋ ಡೆಬಿಟ್ ಒಕೆ ಮಾಡಿದ್ದರೆ ಹಣ ತನ್ನಿಂದ ತಾನೇ ಕಟ್ ಆಗುತ್ತದೆ. ಆದರೆ ಬಿಲ್ಲಿಂಗ್ ದಿನಾಂಕದ ವೇಳೆ ಸಾಕಷ್ಟು ಮೊತ್ತ ನಿಮ್ಮ ಖಾತೆಯಲ್ಲಿ ಇರಬೇಕಾಗುತ್ತದೆ.
ನಿಮ್ಮ ಮೊಬೈಲ್ ಕ್ಯಾಲೆಂಡರ್ ನಲ್ಲಿ ಬಿಲ್ ತುಂಬುವ ದಿನಾಂಕಕ್ಕೂ ಮುನ್ನ ರಿಮೈಂಡರ್ ಇಟ್ಟುಕೊಳ್ಳಬಹುದು. ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ಬೇರೆ ಬೇರೆ ಡ್ಯೂ ಡೇಟ್ ಬದಲು ಒಂದೇ ಡ್ಯೂ ಡೇಟ್ ಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ವೇತನದಾರರಾಗಿದ್ದರೆ ನಿಮಗೆ ಸಂಬಳ ಕ್ರೆಡಿಟ್ ಆದ ಒಂದೆರಡು ದಿನದಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ತುಂಬುವಂತೆ ಇಟ್ಟುಕೊಳ್ಳಬಹುದು. ಅನಿವಾರ್ಯ ಸಂದರ್ಭ ಎದುರಾದರೆ ಮಾತ್ರ ಇಎಂಐ ಆಯ್ಕೆ ಮಾಡಿಕೊಳ್ಳಿ.
ಹಾಗಾಯಿ ಯಾವುದೆ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಡ್ಯೂ ಡೇಟ್ ಮುಗಿಯಲು ಬಿಡಬಾರದು. ಕನಿಷ್ಠ ಮಿನಿಮಮ್ ಡ್ಯೂ ಆದರೂ ತುಂಬಲೇಬೇಕು. ಒಂದು ದಿನ ತಡಮಾಡಿದರೂ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು.


Click it and Unblock the Notifications