ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ (Middle East War), ಇದೀಗ ಭಾರತ ಸಂಕಷ್ಟದಲ್ಲಿ ಸಿಲುಕಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯ ಕೊರತೆಯಿಂದಾಗಿ ಇದೀಗ ಭಾರತದಾದ್ಯಂತ ಹಲವು ಉದ್ಯಮಗಳಿಗೆ ಅಡ್ಡಿಯಾಗಿದೆ. ಎಲ್‌ಪಿಜಿ ಸಿಲಿಂಡರ್ ಇಲ್ಲದೇ ಈಗಾಗಲೇ ಹಲವಾರು ಹೋಟೆಲ್, ರೆಸ್ಟೋರೆಂಟ್‌ಗಳನ್ನು ಸಹ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದೀಗ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಕೊರತೆಯ ಬೆನ್ನಲ್ಲೇ, ಕೇಂದ್ರ ಸರ್ಕಾರ ಎಲ್ಲಾ ದೇಶೀಯ ಎಲ್‌ಪಿಜಿ (LPG) ಗ್ರಾಹಕರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು (E-KYC) ಕಡ್ಡಾಯಗೊಳಿಸಿದೆ.

ಹೌದು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇದೀಗ ದೇಶದ ನಾಗರಿಕರಿಗೆ ಎಲ್‌ಪಿಜಿ ಬುಕ್ ಮಾಡುವ ಮುನ್ನ ಇ-ಕೆವೈಸಿ ಪೂರ್ಣಗೊಳಿಸುವಂತೆ ಕಡ್ಡಾಯಗೊಳಿಸಿದೆ. ಆದ್ದರಿಂದ ಎಲ್‌ಪಿಜಿ ಪಡೆಯಬೇಕೆಂದರೆ, ಬಯೋಮೆಟ್ರಿಕ್ ಆಧಾರ್ ದೃಢೀಕರಣದ ಮೂಲಕ ನಡೆಯಬೇಕು ಎಂದು ಸ್ಪಷ್ಟನೆ ನೀಡಿದೆ.
ಎಲ್‌ಪಿಜಿ ಪೂರೈಕೆ ಕೊರತೆ, ಕೇಂದ್ರದ ಮಹತ್ವದ ನಿರ್ಧಾರ!
ಪಶ್ಚಿಮ ಏಷ್ಯಾದಲ್ಲಿ ಅದರಲ್ಲೂ ಇಸ್ರೇಲ್ ಮತ್ತು ಇರಾನ್ ನಡುವೆ ಆರಂಭವಾದ ಘರ್ಷಣೆ, ಭೌಗೋಳಿಕ ರಾಜಕೀಯ ಒತ್ತಡದಿಂದಾಗಿ, ಎಲ್‌ಪಿಜಿ ಆಮದುಗಳಲ್ಲಿ ಭಾರೀ ಅಭಾವ ಉಂಟಾಗಿದೆ. ಭಾರತ ತನ್ನ ಅಗತ್ಯದ ಸುಮಾರು 60% ರಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಹಾರ್ಮುಜ್ ಜಲಸಂಧಿ ಮೂಲಕವೇ ಮುಕ್ಕಾಲು ಭಾಗದಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳಲಾಗುತ್ತದೆ. ಆದ್ರೆ ಇದೀಗ ಸಂಘರ್ಷದಿಂದ ಆಮದಿನ ಮೇಲೆ ಪರಿಣಾಮ ಬೀರಿದ್ದು, ಈ ಹಿನ್ನೆಲೆ ಭಾರತದಲ್ಲಿ ತೈಲ ಬೆಲೆ ಏರಿಕೆ, ಎಲ್‌ಪಿಜಿ ಕೊರತೆ ಹೀಗೆ ಹಲವು ಸಮಸ್ಯೆಗಳು ಉದ್ಭವಿಸಿದೆ.
ಇದೀಗ ದೇಶದಲ್ಲಿ ಎಲ್‌ಪಿಜಿ ಕೊರತೆ ಆರಂಭವಾಗಿದ್ದು, ನಕಲಿ ಸಂಪರ್ಕಗಳನ್ನು ತೆಗೆದುಹಾಕಲು, ಸರಿಯಾದ ಫಲಾನುಭವಿಗಳಿ ಸಬ್‌ಸಿಡಿ ತಲುಪಿಸುವ ಉದ್ದೇಶದಿಂದ, ಕಾಳಸಂತೆ ಮತ್ತು ದುರುಪಯೋಗಗಳಿಗೆ ಬ್ರೇಕ್ ನೀಡುವ ಉದ್ದೇಶದಿಂದ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
ಇ-ಕೆವೈಸಿ ಮಾಡುವುದು ಹೇಗೆ?
ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಮನೆಯಿಂದಲೇ ಕೂತು ಮಾಡಬಹುದು.
- ಮೊದಲಿಗೆ ನೀವು ಬಳಸುವ ಎಲ್‌ಪಿಜಿ ಕಂಪನಿಯ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಆ ನಂತರ ನಿಮ್ಮ ಗ್ಯಾಸ್ ಕನೆಕ್ಷನ್ ನಂಬರ್ ಮತ್ತು ರಿಫಿಲ್ ಬುಕಿಂಗ್ ವಿವರಗಳನ್ನು ಆಡ್ ಮಾಡಿ ಲಾಗಿನ್ ಮಾಡಿಕೊಳ್ಳಬೇಕು.
- ಅಲ್ಲಿ ನಿಮಗೆ ಇ-ಕೆವೈಸಿ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು.
- ಅಲ್ಲದೇ ಆಧಾರ್ FaceRD ಆಪ್ ಬಳಸಿ ಫೇಸ್ ಅಥೆಂಟಿಕೇಶನ್ ಮೂಲಕ ಬಯೋಮೆಟ್ರಿಕ್ ದೃಢೀಕರಿಸಿಕೊಳ್ಳಿ.
- ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ದೃಢೀಕರಣದ ಮೆಸೇಜ್ ನಿಮಗೆ ಬರುತ್ತದೆ.
ಇನ್ನು ಆಫ್‌ಲೈನ್‌ನಲ್ಲಿ ನೀವು ಇ-ಕೆವೈಸಿ ಮಾಡುವುದಾದ್ರೆ, ಗ್ಯಾಸ್ ಏಜೆನ್ಸಿಗೆ ಹೋಗಿ ಅಥವಾ ಡೆಲಿವರಿ ಬಾಯ್ ಮೂಲಕ ಬಯೋಮೆಟ್ರಿಕ್ ಮಾಡಬಹುದು.
ಎಲ್‌ಪಿಜಿ ಸಿಲಿಂಡರ್ ಪೂರೈಕೆ ಕೊರತೆ ಬಗ್ಗೆ ಸುದ್ದಿಗಳು ಹರಡುತ್ತಿದ್ದಂತೆ, ಇತ್ತ ಗ್ರಾಹಕರು ಕೂಡಾ ಮುಂಜಾಗೃತಾ ಕ್ರಮವಾಗಿ ಗ್ಯಾಸ್ ಬುಕ್ ಮಾಡುತ್ತಿದ್ದಾರೆ. ಆದ್ರೆ ಸರ್ಕಾರ ಪ್ಯಾನಿಕ್ ಆಗಿ ಬುಕಿಂಗ್ ಮಾಡಬೇಡಿ. ಸರಬರಾಜು ಸಾಮಾನ್ಯವಾಗಿದೆ ಎಂದು ಭರವೆ ನೀಡಿದೆ. ಆದ್ರೆ ಇದೀಗ ಇ-ಕೆವೈಸಿ ಕಡ್ಡಾಯಗೊಳಿಸಿದ್ದು, ಇಲ್ಲದಿದ್ದರೆ ಸಿಲಿಂಡರ್ ಬುಕಿಂಗ್ ಅಥವಾ ಡೆಲಿವರಿಯಲ್ಲಿ ತೊಂದರೆ ಆಗಬಹುದು ಎಂದು ಎಚ್ಚರಿಕೆ ನೀಡಿದೆ.


Click it and Unblock the Notifications