ಯಶೋಗಾಥೆ: ಅಣಬೆ ಕೃಷಿಯಲ್ಲಿ ವರ್ಷಕ್ಕೆ 7.5 ಕೋ.ರೂ. ಸಂಪಾದಿಸುವ ಸಹೋದರರು!

ಕೋವಿಡ್‌ ಸಮಯದಲ್ಲಿ ವಿಶ್ವದ ಬಹುತೇಕ ಜನತೆ ಯಾವ ರೀತಿಯಲ್ಲಿ ಕಷ್ಟಪಟ್ಟಿದ್ದರೂ ಎಂಬುದು ನಮಗೆ ತಿಳಿದಿದೆ. ಅದರಲ್ಲೂ ವಿದೇಶಗಳಲ್ಲಿ ಕೆಲಸದಲ್ಲಿ ಇದ್ದವರು ಉದ್ಯೋಗ ಕಳೆದುಕೊಂಡು ಮರಳಿ ಭಾರತಕ್ಕೆ ಬಂದು ಹೊಸ ಉದ್ಯೋಗವನ್ನು ಅರಸುವ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು.

ಕೆಲವರು ಈ ಹಂತದಲ್ಲಿ ಭಾರೀ ಕಷ್ಟಪಟ್ಟಿದ್ದರೂ ಇನ್ನೂ ಕೆಲವರು ಕಷ್ಟ ಸಮಯವನ್ನು ಸದುಪಯೋಗ ಪಡಿಸಿಕೊಂಡು ಲಾಭವಾಗಿ ಪರಿವರ್ತಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಈ ಪೈಕಿ ಉತ್ತರ ಪ್ರದೇಶದ ಆಗ್ರಾದ ರಿಷಬ್‌ ಗುಪ್ತಾ ಕೂಡ ಒಬ್ಬರು. ದುಬೈನಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿದ್ದ ರಿಷಬ್‌ ಗುಪ್ತಾ ಕೋವಿಡ್‌ ಸಮಯದಲ್ಲಿ ಉದ್ಯೋಗ ತ್ಯಜಿಸಿ, ಭಾರತಕ್ಕೆ ಬಂದು ಅಣಬೆ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅವರ ಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟಿದೆ.

 ಅಣಬೆ ಕೃಷಿಯಲ್ಲಿ ವರ್ಷಕ್ಕೆ 7.5 ಕೋ.ರೂ. ಸಂಪಾದಿಸುವ ಸಹೋದರರು!

ರಿಷಬ್‌ ಗುಪ್ತಾಗೆ ಸಹೋದರ ಆಯುಷ್‌ ಗುಪ್ತಾ ಕೂಡ ಸೇರಿದ್ದು , ಸದ್ಯ ಸಹೋದರರು ಜೊತೆಕೂಡಿಕೊಂಡು ವರ್ಷಕ್ಕೆ ಸುಮಾರು ಬರೊಬ್ಬರಿ 7.5 ಕೋಟಿ ರೂ. ಗಳಿಸುತ್ತಿದ್ದಾರೆ. ಸಹೋದರರಿಬ್ಬರು ಸದ್ಯ ದಿನಕ್ಕೆ 1600 ಕೆ.ಜಿ ಅಣಬೆಯನ್ನು ಮಾರಾಟ ಮಾಡುತ್ತಿದ್ದು, ದಿನಕ್ಕೆ ಹೆಚ್ಚು ಕಡಿಮೆ 2 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ಕುಟುಂಬದ 3 ಎಕ್ರೆ ಜಮೀನಿನಲ್ಲಿ ಅಣಬೆ ಕೃಷಿ

ಕೋವಿಡ್‌ ಸಮಯದಲ್ಲಿ ದುಬೈನಲ್ಲಿ ಒಂಟಿತನ ಕಾಡಿದಾಗ ಮರಳಿ ಊರಿಗೆ ಬಂದ ರಿಷಬ್‌ಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿತ್ತು. ಅದೇ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಶಂಸಾಬಾದ್‌ನಲ್ಲಿರುವ ಮೂರು ಎಕ್ರೆ ಜಮೀನಿನ ಸದುಪಯೋಗ ಮಾಡಲು ನಿರ್ಧರಿಸಿದರು. ಇನ್ನು ಅದೇ ಸಮಯದಲ್ಲಿ ಅವರ ಕಿರಿಯ ಸಹೋದರ ಆಯುಷ್ ಗುಪ್ತಾ ಲಂಡನ್ ವಿಶ್ವವಿದ್ಯಾನಿಲಯದಿಂದ BBA ಪದವಿ ಮುಗಿಸಿ ಭಾರತಕ್ಕೆ ಮರಳಿದ್ದರು.

ಹೀಗಾಗಿ ಇಬ್ಬರು ಸಹೋದರರು ಕರ್ನಾಲ್‌ನ ಘರೌಂಡಾದಲ್ಲಿರುವ ತರಕಾರಿಗಳ ಶ್ರೇಷ್ಠತೆಯ ಕೇಂದ್ರದಲ್ಲಿ ತರಕಾರಿ ಕೃಷಿಯ ಕುರಿತು ಆನ್‌ಲೈನ್ ತರಬೇತಿ ಪಡೆದರು. ಇನ್ನು ಇದು ಕೃಷಿ ಸಚಿವಾಲಯದಿಂದ ಅನುಮೋದಿಸಲ್ಪಟ್ಟ ಇಂಡೋ-ಇಸ್ರೇಲ್ ಯೋಜನೆಯಾಗಿದೆ. ಪರಿಣಾಮ 2021ರಲ್ಲಿ ಅವರು ಜಮೀನಿನಲ್ಲಿ ಪಾಲಿಹೌಸ್ ಅನ್ನು ಸ್ಥಾಪಿಸಿದರು. ಇದರಲ್ಲಿ ಇಂಗ್ಲಿಷ್ ಸೌತೆಕಾಯಿ ತಳಿಯ ಸಾವಯವ ಕೃಷಿಯನ್ನು ಪ್ರಾರಂಭಿಸಿದರು.

ಮಾರ್ಚ್ 2021 ರಿಂದ ಸಹೋದರರು ತರಕಾರಿ ಕೊಯ್ಲು ಪ್ರಾರಂಭಿಸಿದ್ದು, ಈ ಅವಧಿಯಲ್ಲಿ ಅವರು ಪ್ರತಿ ಕೆಜಿಗೆ 40 ರೂ.ನಿಂದ ರಿಂದ 45 ರೂ.ಗೆ ಮಾರಾಟ ಮಾಡಿದ್ದರು. ಉತ್ತಮ ಆದಾಯದ ಹೊರತಾಗಿಯೂ ಸಹೋದರರು ವರ್ಷವಿಡೀ ಆದಾಯ ಬರುವ ಕೃಷಿ ಉದ್ಯಮವನ್ನು ಆರಂಭಿಸಲು ಹೆಚ್ಚು ಬಯಸಿದ್ದರು. ಇದರ ಪರಿಣಾಮ ಇಬ್ಬರೂ ಅಣಬೆ ಕೃಷಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರು. ಅದರಂತೆ ಯೂಟ್ಯೂಬ್‌ಗಳಲ್ಲಿ ಅಣಬೆ ಬೆಳೆಸುವ ವಿಡಿಯೋಗಳನ್ನು ನೋಡಿಕೊಂಡೇ ಅವರು ತಮ್ಮ ಉದ್ಯಮವನ್ನು ಆರಂಭಿಸಿದ್ದರು. ಆದರೆ ಅಣಬೆ ಕೃಷಿಗೆ ತಂದೆಗೆ ಮನವರಿಕೆ ಮಾಡುವುದು ಸುಲಭವಾಗಿರಲಿಲ್ಲ.

ಹಾಗಾಗಿ ಸಹೋದರರು ಸೆಪ್ಟೆಂಬರ್ 2021 ರಲ್ಲಿ ಸ್ನೇಹಿತರೊಬ್ಬರ ಮೂಲಕ 20 ಕಾಂಪೋಸ್ಟ್ ಚೀಲಗಳು ಮತ್ತು ಸ್ಪಾನ್‌ (ಮಶ್ರೂಮ್ ಬೀಜಗಳು) ಗಳನ್ನು ಖರೀದಿಸಿದರು. ಈ ವೇಳೆ ಪ್ರಾಯೋಗಿಕ ಅಣಬೆ ಕೃಷಿಯಲ್ಲಿ ಉತ್ತಮ ಫಲಿತಾಂಶ ಸಿಕ್ಕ ಹಿನ್ನೆಲೆಯಲ್ಲಿ ಬಟನ್‌ ಅಣಬೆ ಬೆಳೆಗೆ ತಂದೆ ಅನುಮತಿ ನೀಡಿದರು.

ವಾತಾನುಕೂಲಿ ಪರಿಸ್ಥಿತಿ ನಿರ್ಮಾಣ ಅಗತ್ಯ

ಎಲ್ಲರಿಗೂ ತಿಳಿದಿರುವಂತೆ ಅಣಬೆಯಲ್ಲಿ ಹಲವು ವಿಧಗಳಿದ್ದು, ಪ್ರತಿಯೊಂದಕ್ಕೂ ಅವುಗಳದ್ದೇ ಆದ ವಾತಾವರಣ ಹಾಗೂ ಬೆಳೆಸಲು ಪರಿಸ್ಥಿತಿ ನಿರ್ಮಿಸುವುದು ಅಗತ್ಯವಾಗಿದೆ. ಅದರಲ್ಲೂ ಬಟನ್‌ ಮಶ್ರೂಮ್‌ ಬೆಳೆಸುವುದು ತುಸು ಕಠಿಣದಾಯಕವೇ ಆಗಿದೆ. ಸವಾಲಿನ ಹೊರತಾಗಿಯೂ ಸಹೋದರರು ಅಣಬೆ ಬೆಳೆಯುವ ಕೊಠಡಿಯಲ್ಲಿ ಸೂಕ್ತ ರೀತಿಯ ತಾಪಮಾನವನ್ನು ನಿರ್ಮಿಸುವ ಮೂಲಕ ಕೃಷಿ ಪ್ರಾರಂಭಿಸಿದರು.

ದಿನಕ್ಕೆ ಸರಾಸರಿ 1600 ಕೆ.ಜಿ ಅಣಬೆ!

ಸದ್ಯ ಸಹೋದರರು ಪ್ರತಿದಿನ ಸರಾಸರಿ 1600 ಕೆಜಿ ಅಣಬೆಗಳನ್ನು ಕೊಯ್ಲು ಮಾಡುತ್ತಾರೆ. ಅದರಲ್ಲಿ 1300 ಕೆಜಿ 'ಎ' ದರ್ಜೆಯ ಅಣಬೆಗಳಾಗಿದ್ದು, ಅವುಗಳು ಚೆನ್ನಾಗಿ ಬಲಿತ, ಉತ್ತಮ ಆಕಾರ ಮತ್ತು ಉತ್ತಮ ಸ್ಥಿತಿಯಲ್ಲಿರುತ್ತದೆ. ಉಳಿದಂತೆ 'ಬಿ' ದರ್ಜೆಯ ಅಣಬೆಗಳನ್ನು ಸಮವಾಗಿ ರೂಪಿಸದೆ ಆಹಾರ ಸಂಸ್ಕರಣಾ ಕಂಪನಿಗಳಿಗೆ ಡಬ್ಬಿಯಲ್ಲಿಟ್ಟು ಮಾರಾಟ ಮಾಡುತ್ತಾರೆ.

ಇನ್ನು ಬೇಸಿಗೆಯಲ್ಲಿ ಅಣಬೆ ಕೆ.ಜಿ.ಗೆ 180 ರೂ.ಗೆ ಏರಿದರೆ ಚಳಿಗಾಲದಲ್ಲಿ 90 ರೂ.ಗೆ ಇಳಿಯುತ್ತದೆ. ಹಾಗಾಗಿ ಸರಾಸರಿ ಪ್ರತಿದಿನಕ್ಕೆ ಸಹೋದರರು ಸುಮಾರು 2.144 ಲಕ್ಷ ರೂ. ಗಳಿಕೆ ಮಾಡುತ್ತಾರೆ. ಸದ್ಯ ಆಗ್ರಾದಲ್ಲಿರುವ ಅವರ ಅಣಬೆ ಕೃಷಿಯ ಉತ್ಪಾದನಾ ಘಟಕಕ್ಕೆ ದಿನಕ್ಕೆ ಹಲವು ಮಂದಿ ಭೇಟಿ ನೀಡುತ್ತಿದ್ದು, ಮಾಹಿತಿಗಳನ್ನು ಕೂಡ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+