ಭಾರತದಲ್ಲಿ ಆಧಾರ್ ಕಾರ್ಡ್ ಪ್ರಸ್ತುತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನಮ್ಮ ಎಲ್ಲ ವಹಿವಾಟಿಗೂ, ಎಲ್ಲ ಕಾರ್ಯಕ್ಕೂ ಆಧಾರ್ ಕಾರ್ಡ್ ಮುಖ್ಯವಾಗಿದೆ. ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನವನ್ನು ನಾವು ಪಡೆಯಬೇಕಾದರೂ ಆಧಾರ್ ಕಾರ್ಡ್ ಸಬ್‌ಮಿಟ್ ಮಾಡಬೇಕಾಗುತ್ತದೆ. ಹಾಗಿರುವಾಗ ನಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗದಿರದು ಎಂಬ ನಂಬಿಕೆ ಏನಿದೆ?
ಆಧಾರ್ ಕಾರ್ಡ್ ಬಳಕೆದಾರರು ಒಂದು ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮತ್ತು ಅನ್‌ಲಾಕ್ ಮಾಡಿಕೊಳ್ಳಬಹುದು. ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದ ಬಳಿಕ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಯಾರೂ ಕೂಡಾ ದುರ್ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ಈ ಆಧಾರ್ ಕಾರ್ಡ್ ಲಾಕ್ ಮಾಡುವುದು ಅತೀ ಕಷ್ಟವಾಗಿರಬಹುದು ಎಂಬುವುದು ನಿಮ್ಮ ತಲೆಯಲ್ಲಿ ಇರಬಹುದು. ಆದರೆ ಆಧಾರ್ ಕಾರ್ಡ್ ಲಾಕ್ ಮತ್ತು ಅನ್‌ಲಾಕ್ ಪ್ರಕ್ರಿಯೆ ಅತೀ ಸರಳವಾದ ಪ್ರಕ್ರಿಯೆಯಾಗಿದೆ. ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದ ಬಳಿಕ ಬೇರೆ ಯಾವುದೇ ವ್ಯಕ್ತಿ ಅಥವಾ ನೀವು ಆಧಾರ್ ನಂಬರ್ ಅನ್ನು ಬಳಸಲಾಗುವುದಿಲ್ಲ ಮತ್ತು ವೇರಿಫಿಕೇಷನ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಧಾರ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆದಂದು ತಿಳಿಯೋಣ ಮುಂದೆ ಓದಿ...
ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದ ಬಳಿಕ ನೀವು ಆಧಾರ್ ಸಂಖ್ಯೆಯನ್ನು ವೇರಿಫಿಕೇಷನ್‌ಗಾಗಿ ಬಳಕೆ ಮಾಡುವುದಾದರೆ ನೀವು ವರ್ಚುವಲ್ ಐಡೆಂಟಿಫಿಕೇಷನ್ ಬಳಕೆ ಮಾಡಬೇಕಾಗುತ್ತದೆ. ಈ ಆಧಾರ್ ಕಾರ್ಡ್ ಬ್ಲಾಕಿಂಗ್ ವ್ಯವಸ್ಥೆಯು ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗುವುದನ್ನು ತಡೆಯುತ್ತದೆ. ಆಧಾರ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ಎಂದು ಈ ಕೆಳಗಿದೆ.
ಆಧಾರ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?
ನೀವು ಆಧಾರ್ ಕಾರ್ಡ್ ಬ್ಲಾಕ್ ಮಾಡಲು ಒಂದು ಫಾರ್ಮಟ್‌ನಲ್ಲಿ ಎಸ್‌ಎಂಎಸ್ ಅನ್ನು ಟೈಮ್ ಮಾಡಬೇಕಾಗುತ್ತದೆ. GETOTPLAST ಎಂದು ಟೈಮ್ ಮಾಡಬೇಕಾಗುತ್ತದೆ. LAST ಎಂಬಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಕೊನೆಯ ನಂಬರ್ ಅನ್ನು ಟೈಮ್ ಮಾಡಬೇಕಾಗುತ್ತದೆ.
ಲಾಕಿಂಗ್ ರಿಕ್ವೆಸ್ಟ್ ಅನ್ನು ಕಳುಹಿಸಲು LOCKUIDLast ಎಂದು ಟೈಮ್ ಮಾಡಬೇಕು, ಕೊನೆಯಲ್ಲಿ ನಿಮ್ಮ ಆಧಾರ್ ಕಾರ್ಡ್‌ನ 4 ಮತ್ತು 8 ಸಂಖ್ಯೆಗಳನ್ನು ನಮೂದಿಸಬೇಕಾಗುತ್ತದೆ. 1947ಕ್ಕೆ ಕಳುಹಿಸಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಅದನ್ನು 1947 ನಂಬರ್‌ಗೆ ಕಳುಹಿಸಬೇಕಾಗುತ್ತದೆ. ನಿಮಗೆ ದೃಡೀಕರಣಕ್ಕಾಗಿ ಎಸ್‌ಎಂಎಸ್ ಬರಲಿದೆ.


Click it and Unblock the Notifications