ಬೆಂಗಳೂರು, ಜೂನ್ 12: ನಿವೃತ್ತಿಯ ನಂತರ ಅಥವಾ ಅನಿವಾರ್ಯ ಸಂದರ್ಭ ಎದುರಾದಾಗ, ಹಣಕಾಸಿನ ಮುಗ್ಗಟ್ಟು ಎದುರಾದಾಗ ಭವಿಷ್ಯ ನಿಧಿ ಅಂದರೆ ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸುತ್ತೇವೆ. ಆದರೆ ಅರ್ಜಿ ರಿರಸ್ಕೃತಗೊಳ್ಳುತ್ತದೆ. ಅದೆಷ್ಟೂ ಓಡಾಡ ಮಾಡಿದರೂ ಪರಿಹಾರ ಸಿಗುತ್ತಿಲ್ಲ. ಹಾಗಿದ್ದರೆ ಇದಕ್ಕೆ ಕಾರಣ ಏನು ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.
ಲಾಲ್ ಸಿಂಗ್ ರಂತೆ ಅನೇಕ ಮಂದಿ ಇಂತಹ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪಿಎಫ್‌ನ ಫೈನಲ್ ಸೆಟಲ್‌ಮೆಂಟ್ ಕ್ಲೈಮ್‌ಗಳ ರಿಜೆಕ್ಷನ್ ರೇಟ್ ಶೇಕಡಾ 13 ರಿಂದ ಶೇಕಡಾ 34ರಷ್ಟು ಹೆಚ್ಚಾಗಿದೆ. ಇದರರ್ಥ ಮೂರು ಅರ್ಜಿಗಳಲ್ಲಿ ಒಂದನ್ನು ತಿರಸ್ಕರಿಸಲಾಗುತ್ತಿದೆ. EPFO ದ ಮಾಹಿತಿಯ ಪ್ರಕಾರ, 2022-23 ರಲ್ಲಿ, PF ಫೈನಲ್ ಸೆಟಲ್ ಮೆಂಟ್ ಗೆ ಒಟ್ಟು 73.87 ಲಕ್ಷ ಕ್ಲೈಮ್‌ಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ ಸರಿಸುಮಾರು ಶೇಡಕಾ 34 ರಷ್ಟು, ಅಂದರೆ, 24.93 ಲಕ್ಷ ಕ್ಲೈಮ್‌ಗಳನ್ನು ತಿರಸ್ಕರಿಸಲಾಗಿದೆ.

ನಿಮ್ಮ PF ಖಾತೆಯಿಂದ ಹಣವನ್ನು ಹಿಂಪಡೆಯಲು ನೀವು ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸಿದಾಗ, ಹೆಸರು, UAN, EPFO ನಲ್ಲಿ ಸೇರ್ಪಡೆಗೊಂಡ ದಿನಾಂಕ, ಬ್ಯಾಂಕ್ ಖಾತೆ ಮತ್ತು KYC ಗೆ ಸಂಬಂಧಿಸಿದ ದಾಖಲೆಗಳಂತಹ ವಿವರಗಳನ್ನು ಕೇಳಲಾಗುತ್ತದೆ. ಯಾವುದೇ ಮಾಹಿತಿಯು EPFO ನಲ್ಲಿರುವ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ.
ವಂಚನೆ ತಡೆಯಲು, ಸರ್ಕಾರವು KYC ಗೆ ವಿಶೇಷ ಒತ್ತು ನೀಡುತ್ತಿದೆ. PF ಖಾತೆಗಳಲ್ಲಿ KYC ಅನ್ನು ಅಪ್ ಡೇಟ್ ಮಾಡಿಸುವುದು ಅಗತ್ಯವಾಗಿದೆ. ನಿಮ್ಮ PF ಖಾತೆಯಲ್ಲಿ ನಿಮ್ಮ KYC ಅಪೂರ್ಣವಾಗಿದ್ದರೆ ಮತ್ತು ನೀವು ಹಿಂಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸಲಾಗುತ್ತೆ. ಆದ್ದರಿಂದ, ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು KYC ಅನ್ನು ಅಪ್ ಡೇಟ್ ಮಾಡುವುದು ಅತ್ಯಗತ್ಯ.
ನಿಮ್ಮ ಆಧಾರ್ ಕಾರ್ಡ್ ಮತ್ತು EPFO ದಾಖಲೆಗಳಲ್ಲಿ ಕೊಟ್ಟ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರೂ ಕೂಡ ನಿಮ್ಮ PF ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ಆದ್ದರಿಂದ, ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಹೆಸರನ್ನು ಅಪ್ ಡೇಟ್ ಮಾಡಿ. ಇದಕ್ಕಾಗಿ, ನೀವು ಜಂಟಿ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ನೀವು ಇದನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಇತ್ತೀಚಿನ ದಿನಗಳಲ್ಲಿ, KYC ಗಾಗಿ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾದ ಜನ್ಮ ದಿನಾಂಕವು ಪಿಎಫ್ ಖಾತೆಯೊಂದಿಗೆ ಹೊಂದಿಕೆಯಾಗದಿದ್ದರೂ ಕೂಡ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ಆದ್ದರಿಂದ, ನಿಮ್ಮ ಆಧಾರ್ ಕಾರ್ಡ್ ಅಥವಾ ಪಿಎಫ್ ಖಾತೆಯಲ್ಲಿ ಜನ್ಮ ದಿನಾಂಕ ತಪ್ಪಾಗಿದ್ದರೆ, ಅದನ್ನು ಸರಿಪಡಿಸಿ.
ನೀವು PF ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್‌ನ IFSC ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ. ನೀವು ಚೆಕ್ ಅಥವಾ ಪಾಸ್‌ಬುಕ್‌ನ ನಕಲನ್ನು ಸಹ ಸಲ್ಲಿಸಬೇಕು. ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವಾಗ ಯಾವುದೇ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದರೆ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ಅದೇ ರೀತಿ, ಕ್ಲೈಮ್‌ನೊಂದಿಗೆ ಲಗತ್ತಿಸಲಾದ ಚೆಕ್‌ನ ಫೋಟೋವು ಮಸುಕಾಗಿದ್ದರೆ, ಕ್ಲೈಮ್ ಅನ್ನು ಅನುಮೋದಿಸಲಾಗುವುದಿಲ್ಲ. ಇದನ್ನು ತಪ್ಪಿಸಲು, EPFO ದಾಖಲೆಗಳಲ್ಲಿ ಯಾವಾಗಲೂ ಬ್ಯಾಂಕ್ ವಿವರಗಳನ್ನು ಅಪ್ ಡೇಟ್ ಮಾಡಿ. ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸುವಾಗ, ಎಚ್ಚರಿಕೆಯಿಂದ ಇರಿ. ನೀವು ಚೆಕ್ ಅಥವಾ ಪಾಸ್‌ಬುಕ್‌ನ ಫೋಟೋವನ್ನು ಅಪ್‌ಲೋಡ್ ಮಾಡುತ್ತಿದ್ದರೆ, ಅದು ಸ್ಪಷ್ಟವಾಗಿರಬೇಕು.
ನೀವು EPFO ನಲ್ಲಿ ಜಂಟಿ ಬ್ಯಾಂಕ್ ಖಾತೆಯನ್ನು ಒದಗಿಸಿದ್ದರೆ ಮತ್ತು ಅದು ಸಂಗಾತಿಯೊಂದಿಗೆ ಇಲ್ಲದಿದ್ದರೆ, ನಿಮ್ಮ ಕ್ಲೈಮ್ ಅನ್ನು ರಿಜೆಕ್ಟ್ ಮಾಡಲಾಗುತ್ತದೆ. EPFO ನಿಮ್ಮ ಕ್ಲೈಮ್‌ನ ಹಣವನ್ನು ನಿಮ್ಮ ವೈಯಕ್ತಿಕ ಖಾತೆಗೆ ಅಥವಾ ನಿಮ್ಮ ಸಂಗಾತಿಯೊಂದಿಗಿನ ಜಂಟಿ ಖಾತೆಗೆ ಮಾತ್ರ ವರ್ಗಾಯಿಸುತ್ತದೆ.
ನಿಮ್ಮ UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೂ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ಅನೇಕ ಬಾರಿ, ಉದ್ಯೋಗಿ ಸೇರುವ ಮತ್ತು ಬಿಡುವ ದಿನಾಂಕವನ್ನು ಪೋರ್ಟಲ್‌ನಲ್ಲಿ ಅಪ್ ಡೇಟ್ ಆಗಿರಲ್ಲ ಅಥವಾ ಸರಿಯಾಗಿರಲ್ಲ.. ಕೆಲವೊಂದು ಬಾರಿ ಜಾಯ್ನಿಂಗ್ ಡೇಟ್ ಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದರೂ ಕೂಡ ನಿಮ್ಮ ಕ್ಲೈಮ್ ತಿರಸ್ಕರಿಸಲಾಗುತ್ತದೆ ಮತ್ತು ಅದಕ್ಕೆ ಡೇಟಾ ಮಿಸ್ ಮ್ಯಾಚ್ ಅನ್ನೋ ಕಾರಣವ ನೀಡಲಾಗುತ್ತೆ. ಲಾಲ್ ಸಿಂಗ್ ಎದುರಿಸುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು, ನಿಮ್ಮ PF ಖಾತೆಯಲ್ಲಿ ಯಾವಾಗಲೂ ಆಧಾರ್, ಬ್ಯಾಂಕ್, ಜನ್ಮ ದಿನಾಂಕ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಪ್ ಡೇಟ್ ಮಾಡಿ. KYC ಅಪೂರ್ಣವಾಗಿದ್ದರೆ ಅದನ್ನು ಪೂರ್ಣಗೊಳಿಸಿ. ನಿಮ್ಮ ಕ್ಲೈಮ್ ಪದೇ ಪದೇ ರಿಜೆಕ್ಟ್ ಆಗುತ್ತಿದ್ದರೆ ನೀವು ನಿಮ್ಮ ಕಂಪನಿಯ HR ಅನ್ನು ಸಂಪರ್ಕಿಸಿ. ಆಗ ನೀವು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.


Click it and Unblock the Notifications