ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ಅವರು ಭಾರತದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 83 ವರ್ಷ ವಯಸ್ಸಿನ ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿ ಅವರ ಕೆಲಸ ಮತ್ತು ಅವರ ಅಸಾಮಾನ್ಯ ದಯೆ, ಶಾಂತ ಸ್ವಭಾವಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.
ರತನ್ ಟಾಟಾ ಅವರು ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದರು ಮತ್ತು ಅವರ ತಂದೆ ನೇವಲ್ ಟಾಟಾ ಆಗಿದ್ದಾರೆ. ತಾಯಿ ಸೂನಿ ಟಾಟಾ ಆಗಿದ್ದಾರೆ. ಟಾಟಾ ಅವರ ಪೋಷಕರಾದ ನೇವಲ್ ಮತ್ತು ಸೋನೂ ಅವರು 1948 ರಲ್ಲಿ ಕೇವಲ 10 ವರ್ಷ ವಯಸ್ಸಿನವರಾಗಿದ್ದಾಗ ಬೇರೆ ಬೇರೆಯಾಗಿದ್ದಾರೆ.

ಜಮ್ಸೆಟ್ಜಿ ಟಾಟಾ ರತನ್ ಟಾಟಾ ಮುತ್ತಾತ ಆಗಿದ್ದಾರೆ. ರತಂಜಿ ಟಾಟಾ ಅಜ್ಜ ಆಗಿದ್ದಾರೆ. ಸಿಮಾನ್ ಟಾಟಾ ಮಲ ತಾಯಿ ಆಗಿದ್ದಾರೆ. ನಿಯೋಲ್ ಟಾಟಾ ಮಲ ಸಹೋದರ ಆಗಿದ್ದಾರೆ. ಆದರೆ ನಾವು ರತನ್ ಟಾಟಾರ ಪತ್ನಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿಲ್ಲ. ಅದಕ್ಕೆ ಮುಖ್ಯ ಕಾರಣ ರತನ್ ಟಾಟಾ ವಿವಾಹವಾಗಿಲ್ಲ. ಆದರೆ ರತನ್ ಟಾಟಾ ಪ್ರೀತಿಯ ಬಲೆಗೆ ಬಿದ್ದಿರುವುದು ನಿಜ!
ಪ್ರೇಮ ಜೀವನದ ಬಗ್ಗೆ ಮಾತನಾಡಿದ ರತನ್ ಟಾಟಾ
ಕಳೆದ ವರ್ಷ ಹ್ಯೂಮನ್ಸ್ ಆಫ್ ಬಾಂಬೆ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಮಾತನಾಡಿದ ರತನ್ ಟಾಟಾ ತಮ್ಮ ಬಾಲ್ಯ, ಪ್ರೇಮ ಜೀವನ ಮತ್ತು ಸಂಬಂಧಗಳನ್ನು ಚರ್ಚಿಸಿದರು. ಒಮ್ಮೆ ಪ್ರೀತಿಸಿ ಮದುವೆಯಾಗಿ ಸೆಟಲ್ ಆಗಲು ಬಯಸಿದ್ದಾಗಿ ಹೇಳಿದ್ದಾರೆ. ಆದರೆ 1962 ರ ಇಂಡೋ-ಚೀನಾ ಯುದ್ಧದ ಕಾರಣ ಮದುವೆ ಆಗಲು ಸಾಧ್ಯವಾಗಿಲ್ಲ ಎಂದು ರತನ್ ಟಾಟಾ ಹೇಳಿದ್ದಾರೆ.
"ಕಾಲೇಜಿನ ನಂತರ, ನಾನು ಎಲ್‌ಎ ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ, ಅಲ್ಲಿ ನಾನು ಎರಡು ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ನಾವು ಇಷ್ಟಪಟ್ಟೆ," ಎಂದು ರತನ್ ಹೇಳುತ್ತಾರೆ.
"ಎಲ್‌ಎನಲ್ಲಿ ನಾನು ಪ್ರೀತಿಸುತ್ತಿದ್ದೆ ಮತ್ತು ಬಹುತೇಕ ಮದುವೆಯಾಗುವುದು ಖಚಿತವಾಗಿತ್ತು. ಆದರೆ ಅದೇ ಸಮಯದಲ್ಲಿ, ಸುಮಾರು 7 ವರ್ಷಗಳಿಂದ ನನ್ನ ಅಜ್ಜಿಯ ಆರೋಗ್ಯ ಸರಿ ಇರಲಿಲ್ಲ. ಆದ್ದರಿಂದಾಗಿ ಅವರನ್ನು ನೋಡಲೆಂದು ನಾನು ತಾತ್ಕಾಲಿಕವಾಗಿ ನನ್ನ ಊರಿಗೆ ಹಿಂದಿರುಗುವ ನಿರ್ಧಾರವನ್ನು ಮಾಡಿದೆ," ಎಂದು ತಿಳಿಸಿದ್ದಾರೆ.
"ನಾನು ಅಜ್ಜಿಯನ್ನು ನೋಡಲು ಬಂದೆ. ನಾನು ಮದುವೆಯಾಗಲು ಬಯಸುವ ವ್ಯಕ್ತಿಯೂ ಕೂಡಾ ನನ್ನೊಂದಿಗೆ ಭಾರತಕ್ಕೆ ಬರುತ್ತಾರೆ ಎಂದು ನಾನು ಭಾವಿಸಿದೆ. ಆದರೆ 1962 ರ ಇಂಡೋ-ಚೀನಾ ಯುದ್ಧದ ಕಾರಣ, ಆಕೆಯ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಟ್ಟಿಲ್ಲ. ಇದಾದ ಬಳಿಕ ನಮ್ಮ ಸಂಬಂಧವೇ ದೂರವಾಯಿತು," ಎಂದು ಹೇಳಿದರು.
ರತನ್ ಟಾಟಾರ ಸಹೋದರ
ರತನ್ ಟಾಟಾಗೆ ನೋಯೆಲ್ ಟಾಟಾ ಎಂಬ ಮಲಸಹೋದರನೂ ಇದ್ದಾರೆ. "ನನಗೆ ಸಂತೋಷದ ಬಾಲ್ಯವಿತ್ತು, ಆದರೆ ನನ್ನ ಸಹೋದರ ಮತ್ತು ನಾನು ವಯಸ್ಸಾದಂತೆ, ನಮ್ಮ ಪೋಷಕರ ವಿಚ್ಛೇದನದಿಂದಾಗಿ ನಾವು ಸ್ವಲ್ಪ ತೊಂದರೆಗೆ ಒಳಗಾದೆವು. ಹಲವಾರು ಸಮಯವನ್ನು ಎದುರಿಸಿದ್ದೇವೆ. ಆ ದಿನಗಳಲ್ಲಿ ವಿಚ್ಛೇದನ ಎಂಬುವುದು ಇಂದಿನಂತೆ ಸಾಮಾನ್ಯವಾಗಿರಲಿಲ್ಲ. ಆದರೆ ನನ್ನ ಅಜ್ಜಿ ನಮ್ಮನ್ನು ಬೆಳೆಸಿದರು," ಎಂದು ರತನ್ ಟಾಟಾ ವಿವರಿಸಿದ್ದಾರೆ.
ರತನ್ ಟಾಟಾರ ತಾಯಿ ಮತ್ತೆ ವಿವಾಹವಾಗಲು ನಿರ್ಧರಿಸಿದಾಗ ಟಾಟಾರ ಶಾಲೆಯ ಹುಡುಗರು ಕೆಟ್ಟದಾಗಿ ಮಾತನಾಡಲು ಆರಂಭಿಸಿದ್ದರು. "ನನ್ನ ತಾಯಿ ಮತ್ತೆ ವಿವಾಹವಾದಾಗ ಜನರು ಕೆಟ್ಟದಾಗಿ ಮಾತನಾಡಲು ಆರಂಭಿದರು. ಆದರೆ ನಮ್ಮ ಅಜ್ಜಿ ಏನೇ ಆದರೂ ಘನತೆಯನ್ನು ಉಳಿಸಿಕೊಳ್ಳಲು ನಮಗೆ ಕಲಿಸಿದರು," ಎಂದು ರತನ್ ಟಾಟಾ ಹೇಳುತ್ತಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications