ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಬಜೆಟ್ ಅನ್ನು ಮಂಡನೆ ಮಾಡಲು ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದೆ. ಆದರೆ ಬಜೆಟ್ ಮಾಹಿತಿಯನ್ನು ಸಂಪೂರ್ಣವಾಗಿ ನಿಮ್ಮ ಮೊಬೈಲ್‌ನಲ್ಲಿ ಪಡೆಯುವುದು ಹೇಗೆ ಎಂಬುವುದು ನಿಮಗೆ ತಿಳಿದಿದೆಯೇ?
ಹೌದು ಅದಕ್ಕಾಗಿ ಕೇಂದ್ರ ಸರ್ಕಾರವು 2021ರಲ್ಲಿ ಮೊಬೈಲ್ ಆಪ್ ಒಂದನ್ನು ಆರಂಭಿಸಿದೆ. ಈ ಆಪ್ ಮೂಲಕ ನಾವು ಕೇಂದ್ರ ಬಜೆಟ್‌ನ ಎಲ್ಲ ಪ್ರತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕಾಗದರಹಿತ ಬಜೆಟ್ ಅನ್ನು ಆರಂಭಿಸಿದೆ. ಅದಾದ ಬಳಿಕ ಸರ್ಕಾರವು ಈ ವರ್ಷವೂ ಕೂಡಾ ಪೇಪರ್‌ಲೆಸ್ ಬಜೆಟ್ ಮಂಡಿಸಲಿದೆ.
2021ರ ಬಳಿಕ ನಿರಂತರವಾಗಿ ಕೇಂದ್ರ ಬಜೆಟ್ ಪ್ರತಿಯನ್ನು ಮೊಬೈಲ್ ಆಪ್‌ನಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆ ನಾವು ಮೊಬೈಲ್‌ನಲ್ಲಿಯೇ ಬಜೆಟ್‌ನ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವಹಿವಾಟುಗಳ ಇಲಾಖೆಯು ಈ ಆಪ್ ಅನ್ನು ನಿರ್ವಹಣೆ ಮಾಡುತ್ತದೆ. ನ್ಯಾಷನಲ್ ಇನ್‌ಫಾರ್ಮಟಿಕ್ಸ್ ಸೆಂಟರ್ ಈ ಆಪ್ ಅನ್ನು ವಿನ್ಯಾಸ ಮಾಡಿದೆ, ಅಭಿವೃದ್ಧಿ ಪಡಿಸಿದೆ.

ಈ ಆಪ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಕೇಂದ್ರ ಬಜೆಟ್‌ನ ಆಪ್ ಅನ್ನು ನಾವು ಅಂಡ್ರಾಯ್ಡ್ ಯೂಸರ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದು. iOS ಬಳಕೆದಾರರು ಆಪ್ ಸ್ಟೋರ್ ಮೂಲಕ ಕೇಂದ್ರ ಬಜೆಟ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಸ್ತುತ ಈ ಆಪ್ ಮೂಲಕ ನಾವು ಬಜೆಟ್ 2021-22 ಮತ್ತು ಬಜೆಟ್ 2022-23ರ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮಾಹಿತಿಯನ್ನು ಸರಳವಾಗಿ, ಸುಲಭವಾಗಿ ಪಡೆಯಲು ಸಾಧ್ಯವಾಗಲೆಂದು ಆಪ್‌ನಲ್ಲಿ ಬೇರೆ ಬೇರೆ ಭಾಗವಾಗಿ ಮಾಹಿತಿಯನ್ನು ವಿಂಗಡಿಸಲಾಗಿದೆ.
ಕೆಲವು ವಿಭಾಗದಲ್ಲಿ ಬಜೆಟ್‌ನ ಮುಖ್ಯಾಂಶಗಳು, ಬಜೆಟ್ ಭಾಷಣ, ವಾರ್ಷಿಕ ಹಣಕಾಸು ಹೇಳಿಕೆ, ರಿಸಿಪ್ಟ್ ಬಜೆಟ್, ವೆಚ್ಚ ಬಜೆಟ್, ಕಸ್ಟಮ್ ಬಜೆಟ್ ಎಂಬ ವಿಂಗಡನೆಗಳನ್ನು ಮಾಡಲಾಗಿದೆ. ಬಜೆಟ್ ಮಾಹಿತಿಯನ್ನು ಪಿಡಿಎಫ್ ಮಾದರಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ ಮತ್ತು ಪಿಡಿಎಫ್ ಮಾದರಿಯಲ್ಲಿಯೇ ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು.
ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಆಪ್ ಇದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ 2023-24ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ ಬಳಿಕ ಕೇಂದ್ರ ಬಜೆಟ್ ಮೊಬೈಲ್ ಆಪ್‌ನಲ್ಲಿ ದಾಖಲೆಯು ಲಭ್ಯವಾಗುವ ಸಾಧ್ಯತೆಯಿದೆ. ಈ ಆಪ್‌ನ ಆಂಡ್ರಾಯ್ಡ್ ವರ್ಜನ್ ಅನ್ನು ಕಳೆದ ಬಾರಿ 2022ರ ಜನವರಿ 14ರಂದು ಅಪ್‌ಡೇಟ್ ಮಾಡಲಾಗಿದೆ. ಈ ಆಪ್ ಅನ್ನು ಈವರೆಗೆ 1 ಲಕ್ಷಕ್ಕೂ ಅಧಿಕ ಅಂಡ್ರಾಯ್ಡ್ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಪೇಪರ್‌ಲೆಸ್ ಬಜೆಟ್
2021-22ರಲ್ಲಿ ಕೊರೊನಾ ಕಾರಣದಿಂದಾಗಿ ಬಜೆಟ್ ಅನ್ನು ಕಾಗದರಹಿತ ಅಥವಾ ಪೇಪರ್‌ಲೆಸ್ ಅನ್ನಾಗಿ ಮಾಡಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡನೆ ಮಾಡಲಾಗಿದೆ. ಕಳೆದ ವರ್ಷವೂ ಬಜೆಟ್ ಡಿಜಿಟಲ್ ಆಗಿತ್ತು, ಈ ವರ್ಷವೂ ಬಜೆಟ್ ಡಿಜಿಟಲ್ ಆಗಿದೆ.


Click it and Unblock the Notifications