ಪಾಸ್‌ಪೋರ್ಟ್ ವೆರಿಫಿಕೇಷನ್‌ಗಾಗಿ ಭಾರತ ಸರ್ಕಾರವು ದೆಹಲಿಯಲ್ಲಿ "ಎಂಪಾಸ್ ಪೋರ್ಟ್ ಸೇವಾ" (" mPassport") ಎಂಬ ಹೊಸ ಆನ್‌ಲೈನ್ ಸರ್ವೀಸ್ ಸೇವೆಯನ್ನು ಪ್ರಾರಂಭಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೌಲಭ್ಯವನ್ನು ಆರಂಭಿಸಿದ್ದು, ಈ ಸೌಲಭ್ಯದ ಮೂಲಕ ಪಾಸ್ ಪೋರ್ಟ್ ಪರಿಶೀಲನೆ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಪಾಸ್ ಪೋರ್ಟ್ ಪರಿಶೀಲನೆಗಾಗಿ ಇದ್ದ 15 ದಿನಗಳ ಕಾಯುವಿಕೆ ಅವಧಿಯನ್ನು (ವೇಟಿಂಗ್ ಪಿರೀಯೆಡ್) ಇದು ಕಡಿಮೆ ಮಾಡುವುದಲ್ಲದೆ ಇದು ಜನರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಅನುಕೂಲಕರ ಹಾಗೂ ಸರಳವಾಗಿಸುತ್ತದೆ.
"mPassport ಸೇವಾ" ಸೌಲಭ್ಯವು ಆನ್ ಲೈನ್ ಸೇವೆಯಾಗಿದ್ದು ದೆಹಲಿಯ ನಿವಾಸಿಗಳು ಮೊಬೈಲ್, ಕಂಪ್ಯೂಟರ್ ಅಥವಾ ಟಾಬ್ಲೆಟ್ ಬಳಸಿಕೊಂಡು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಸೇವೆಯ ಬಳಕೆಯೂ ಸರಳವಾಗಿದೆ. ಬಳಕೆದಾರರು ಪಾಸ್ ಪೋರ್ಟ್ ಸೇವಾ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು.

ನಂತರ ಲಾಗಿನ್ ಮಾಡಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ಇದಾದ ಬಳಿಕ ಬಳಕೆದಾರರು ಅಗತ್ಯವಿರುವ ಮಾಹಿತಿಗಳನ್ನು ತುಂಬಿ, ನಿಗದಿಪಡಿಸಿದ ನಗದು ಪಾವತಿಸಿ, ಸ್ಥಳೀಯ ಪಾಸ್ ಪೋರ್ಟ್ ಸೆಂಟರ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕಾಗುತ್ತದೆ. ಅಪಾಯಿಂಟ್ ಮೆಂಟ್ ಕನ್ಫರ್ಮ್ ಆದ ಬಳಿಕ ಅದನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ಔಟ್ ಪ್ರತಿ ಹಾಗೂ ಅಗತ್ಯವಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಗದಿಯಾಗಿರುವ ಅಪಾಯಿಂಟ್ ಮೆಂಟ್ ವೇಳೆ ಕೊಂಡೊಯ್ಯಬೇಕು.
ಪ್ರಸ್ತುತವಾಗಿ ದೆಹಲಿ ಪೊಲೀಸರು ಪ್ರತಿದಿನ ಸರಾಸರಿಯಾಗಿ 2000ಕ್ಕೂ ಹೆಚ್ಚು ಪಾಸ್ ಪೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದ್ದು, ಈ ಹೊಸ ಆನ್‌ಲೈನ್ ಸೇವೆಯಿಂದ ಅವರ ಮೇಲಿರುವ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಿ20 ಶೃಂಗಸಭೆಯ ಹಿನ್ನಲೆಯಲ್ಲಿ ಹೆಚ್ಚಾಗಿರುವ ಪಾಸ್ ಪೋರ್ಟ್ ಬೇಡಿಕೆಯನ್ನು ಮನಗಂಡು ಅದಕ್ಕೆ ತ್ವರಿತಗತಿಯಲ್ಲಿ ಸ್ಪಂದಿಸಲು ಸರ್ಕಾರ ನಿರ್ಧರಿಸಿದೆ.
ಕೇವಲ ಅಂತರಾಷ್ಟ್ರೀಯ ಪ್ರಯಾಣದ ದೃಷ್ಟಿಯಿಂದ ಮಾತ್ರವಲ್ಲದೆ ಇತರ ಉದ್ದೇಶಗಳಿಗೂ ಪಾಸ್ ಪೋರ್ಟ್ ಅತ್ಯಗತ್ಯ ದಾಖಲೆಯಾಗಿದೆ. ಇದನ್ನು ಗುರುತಿನ ಚೀಟಿಯಾಗಿ, ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವ ಸಂದರ್ಭ ಹಾಗೂ ಇತರ ಹಲವು ಅಧಿಕೃತ ಉದ್ದೇಶಗಳಿಗೆ ಬಳಸಬಹುದಾಗಿದೆ. ಈ ಹೊಸ ಆನ್‌ಲೈನ್ ವೆರಿಫಿಕೇಷನ್ ವ್ಯವಸ್ಥೆಯಿಂದಾಗಿ ಹೆಚ್ಚು ತ್ವರಿತ ಮತ್ತು ಸುಲಭವಾಗಿ ಜನರು ಪಾಸ್ ಪೋರ್ಟ್ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications