ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಗೆ ಅನಾಮಧೇಯ ವ್ಯಕ್ತಿಯೊಬ್ಬರು ದೇಣಿಗೆಯನ್ನು ನೀಡಿದ್ದಾರೆ. ಸಾವಿರ ಅಥವಾ ಲಕ್ಷ ರೂಪಾಯಿಯ ದೇಣಿಗೆಯನ್ನು ಐಐಟಿ ಬಾಂಬೆಗೆ ನೀಡಿರುವುದು ಅಲ್ಲ, ಬದಲಾಗಿ ಕೋಟ್ಯಾಂತರ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಐಐಟಿ ಬಾಂಬೆಯು 160 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಅನಾಮಧೇಯ ವ್ಯಕ್ತಿಯು ದೇಣಿಗೆಯಾಗಿ ನೀಡಿದ್ದಾರೆ.
ದಾನಿಯೊಬ್ಬರು ತಾನು ಒಂದಲ್ಲ ಎರಡಲ್ಲ 160 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದರೂ ಕೂಡಾ ಅನಾಮಧೇಯರಾಗಿ ಉಳಿಯಲು ಬಯಸುವುದು ಭಾರತದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಅತೀ ಅಪರೂಪದ ಘಟನೆಯಾಗಿದೆ. ಈ ಹಣವನ್ನು ಗ್ರೀನ್ ಎನರ್ಜಿ ಮತ್ತು ಸಸ್ಟೈನಬಿಲಿಟಿ ರಿಸರ್ಚ್ ಹಬ್‌ಗಾಗಿ ಮೀಸಲಿಡಲಾಗಿದೆ ಎಂದು ಐಐಟಿ-ಬಿ ಹೇಳಿದೆ.

ಮುಂಬೈನ ಉಪನಗರ ಪೊವೈನಲ್ಲಿರುವ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿರುವ ಅತ್ಯಾಧುನಿಕ ಶೈಕ್ಷಣಿಕ ಕಟ್ಟಡದೊಳಗೆ ಹಬ್ ಅನ್ನು ಸ್ಥಾಪಿಸಲಾಗುತ್ತದೆ. ಪ್ರಮುಖ ಕ್ಷೇತ್ರಗಳಿಗೆ ವಿಸ್ತರಿಸಲಾಗುತ್ತದೆ ಎಂದು ಐಐಟಿ ಹೇಳಿಕೆಯಲ್ಲಿ ತಿಳಿಸಿದೆ. ಈ ಅಪರಿಚಿತ ವ್ಯಕ್ತಿ ಐಐಟಿಗೆ ನೀಡಿದ ದೇಣಿಗೆಗಿಂತ ಅತೀ ಅಧಿಕ ದೇಣಿಗೆಯನ್ನು ಇತ್ತೀಚೆಗೆ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ ನೀಡಿದ್ದಾರೆ.
315 ಕೋಟಿ ರೂಪಾಯಿ ದಾನ ನೀಡಿದ ಹಳೆ ವಿದ್ಯಾರ್ಥಿ
ಭಾರತದಲ್ಲಿ ಯಶಸ್ವಿಯಾದ ಉದ್ಯಮವನ್ನು ನಡೆಸುತ್ತಿರುವ ಬಿಲಿಯನೇರ್‌ಗಳ ಪೈಕಿ ಕೆಲವರು ಮಾತ್ರ ಐಐಟಿ ಮತ್ತು ಐಐಎಂನ ಹಳೆಯ ವಿದ್ಯಾರ್ಥಿಗಳು ಆಗಿದ್ದಾರೆ. ಹಲವಾರು ಮಂದಿ ಯಾವುದೇ ಪದವಿ ಇಲ್ಲದೆಯೇ ಉದ್ಯಮ ನಡೆಸುತ್ತಿದ್ದಾರೆ. ನಂದನ್ ನಿಲೇಕಣಿ ತಾನು ಕಲಿತ ಕಾಲೇಜಿಗೆ 315 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಇನ್ಫೋಸಿಸ್‌ನ ಸಹ ಸಂಸ್ಥಾಪಕ, ಚೇರ್‌ಮನ್ ಆದ ನಂದನ್ ನಿಲೇಕಣಿ ಸುಮಾರು 315 ಕೋಟಿ ರೂಪಾಯಿಯನ್ನು ತಾನು ಯಶಸ್ವಿ ಉದ್ಯಮಿಯಾಗಲು ಕಾರಣವಾದ ತಾನ ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ದೇಣಿಗೆಯಾಗಿ ನೀಡಿದ್ದಾರೆ. 68 ವರ್ಷದ ನಂದನ್ ನಿಲೇಕಣಿ ಈ ಭಾರೀ ಪ್ರಮಾಣದ ಮೊತ್ತವನ್ನು ತಾನು ಕಲಿತ ಕಾಲೇಜ್ ಆದ ಐಐಟಿ ಬಾಂಬೆಗೆ ದೇಣಿಗೆಯಾಗಿ ನೀಡಿದ್ದಾರೆ.
ಈ ಹಿಂದೆಯೂ ಐಐಟಿ ಬಾಂಬೆಗೆ ನಂದನ್ ನಿಲೇಕಣಿ ಸುಮಾರು 85 ಕೋಟಿ ರೂಪಾಯಿ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಎರಡು ಬಾರಿ ನೀಡಿದ ದೇಣಿಗೆಯನ್ನು ನಾವು ಲೆಕ್ಕ ಹಾಕಿದಾಗ ಈವರೆಗೆ ಈ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಗೆ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ 400 ಕೋಟಿ ರೂಪಾಯಿ ದೇಣಿಗೆ ನೀಡಿದಂತೆ ಆಗುತ್ತದೆ. ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ನಂದನ್ ನೀಡಿದ ದೇಣಿಗೆ ಕಾಲೇಜಿಗೆ ಅತೀ ದೊಡ್ಡ ಕೊಡುಗೆಯಾಗಿದೆ.
ಫೋರ್ಬ್ಸ್ ಪ್ರಕಾರ ಜೂನ್ 20, 2023ರವರೆಗಿನ ಲೆಕ್ಕಾಚಾರದಲ್ಲಿ ನಂದನ್ ನಿಲೇಕಣಿ ನಿವ್ವಳ ಆದಾಯವು 21,320 ಕೋಟಿ ರೂಪಾಯಿ ಆಗಿದೆ. ಹಾಗೆಯೇ ನಂದನ್ ನಿಲೇಕಣಿ ಸುಮಾರು 5.39 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಸಂಸ್ಥೆಯಾದ ಇನ್ಫೋಸಿಸ್‌ನ ನಾನಾ-ಎಕ್ಸಿಕ್ಯೂಟಿವ್ ಚೇರ್‌ಮನ್ ಆಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯನ್ನು 2009ರಲ್ಲಿ ತೊರೆದ ನಂದನ್ ನಿಲೇಕಣಿ ಮತ್ತೆ 2017ರಲ್ಲಿ ಇನ್ಫೋಸಿಸ್‌ಗೆ ಸೇರಿದ್ದಾರೆ. ಆಧಾರ್ ಕಾರ್ಡ್ ಸಂಬಂಧಿತ ಇನ್ಫೋಸಿಸ್‌ನ ಕಾರ್ಯಗಳಲ್ಲಿ ನಂದನ್ ನಿಲೇಕಣಿ ಕೊಡುಗೆ ಮಹತ್ತರವಾಗಿದೆ.


Click it and Unblock the Notifications