ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದ್ದಾಗಿದ್ದರೆ, ನೀವು ಶೀಘ್ರವೇ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವುದಕ್ಕೆ ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಅವಕಾಶ ನೀಡಿದೆ.
ಹೌದು, ಆಧಾರ್ ದಾಖಲೆಗಳನ್ನು ಯುಐಡಿಎಐ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಪ್ರಕಾರ, ಲಕ್ಷಾಂತರ ಭಾರತೀಯರು ಈ ಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೂ ಕೂಡಾ ಉಚಿತ ಸೇವೆಗಳು 15 ಮಾರ್ಚ್ 2023 ರಿಂದ 14 ಜೂನ್ 2023 ರವರೆಗೆ ಮಾತ್ರ ಲಭ್ಯವಿರುತ್ತವೆ. ಈ ಉಚಿತ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಆಧಾರ್ ಕೇಂದ್ರಗಳಲ್ಲಿ 50 ರೂಪಾಯಿ ಶುಲ್ಕವಿದೆ.

ಭಾರತದಲ್ಲಿ ಆಧಾರ್ ಆರಂಭದಿಂದ ಈವರೆಗೆ
ಒಂದು ದಶಕದ ಅವಧಿಯಲ್ಲಿ, ಆಧಾರ್ ಕಾರ್ಡ್ ಭಾರತದಲ್ಲಿ ವ್ಯಕ್ತಿಯ ಗುರುತನ್ನು ಸಾಬೀತುಪಡಿಸುವ ಅತ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟ ದಾಖಲೆಯಾಗಿದೆ. ಹೋಟೆಲ್ ಬುಕಿಂಗ್‌ನಿಂದ ವಿಮಾನದ ಚೆಕ್-ಇನ್ ಪ್ರಕ್ರಿಯೆಯವರೆಗೆ, ಭಾರತದಲ್ಲಿ ಹಲವಾರು ಸೇವೆಗಳಿಗೆ ಆಧಾರ್ ಪ್ರಮುಖ ಗುರುತಿನ ದಾಖಲೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ನಿರ್ವಹಿಸಲ್ಪಡುವ ಸುಮಾರು 1,200 ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳು ಆಧಾರ್ ಆಧಾರಿತ ಪರಿಶೀಲನಾ ಪ್ರಕ್ರಿಯೆಯನ್ನು ಹೊಂದಿದೆ. ತಮ್ಮ ಜನಸಂಖ್ಯಾ ಮಾಹಿತಿಯನ್ನು ನವೀಕರಿಸದ ನಾಗರಿಕರಿಗೆ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಯುಐಡಿಎಐ ತಿಳಿಸಿದೆ.
ಧಾರ್ ಪೋರ್ಟಲ್‌ನ ಪ್ರಮುಖ ಪ್ರಯೋಜನಗಳು
* ಯುಐಡಿಎಐ ಕಾರ್ಯಕ್ರಮದಡಿಯಲ್ಲಿ ಆಧಾರ್ ದಾಖಲೆಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದಾಗಿದೆ.
* ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮಾರ್ಚ್ 15 ರಿಂದ ಜೂನ್ 14, 2023 ರವರೆಗೆ ಮುಂದಿನ ಮೂರು ತಿಂಗಳವರೆಗೆ ಉಚಿತ ಸೇವೆಯನ್ನು ಮೈಆಧಾರ್‌ನಲ್ಲಿ ಪಡೆಯಬಹುದಾಗಿದೆ.
* ಸಚಿವಾಲಯದ ಪ್ರಕಾರ, ಜೀವನವನ್ನು ಸರಳಗೊಳಿಸಲು, ಸುಲಭಗೊಳಿಸಲು ಆಧಾರ್ ಸಹಕಾರಿಯಾಗಿದೆ.
* ನಿವಾಸಿಗಳು ಸ್ಥಳೀಯ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು, ಅಲ್ಲಿ ಸಾಮಾನ್ಯ ಶುಲ್ಕಗಳು ಅನ್ವಯಿಸುತ್ತದೆ ಅಥವಾ ತಮ್ಮ ಜನಸಂಖ್ಯಾ ಮಾಹಿತಿಯನ್ನು ತಿದ್ದುಪಡಿ ಮಾಡಬೇಕಾದರೆ ನಿಯಮಿತ ಆನ್‌ಲೈನ್ ಅಪ್‌ಡೇಟ್ ಸೇವೆಯನ್ನು ಬಳಸಬೇಕಾಗುತ್ತದೆ.
ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: 'My Aadhaar' ಮೇಲೆ ಕ್ಲಿಕ್ ಮಾಡಿ
ಹಂತ 3: 'Update Your Aadhaar' ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: 'Update demographics data online' ಮೇಲೆ ಕ್ಲಿಕ್ ಮಾಡಿ
ಹಂತ 5: 'Proceed to update Aadhaar' ಅನ್ನು ಬಳಿಕ ಆಯ್ಕೆ ಮಾಡಿ
ಹಂತ 6: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಹಂತ 7: ಕ್ಯಾಪ್ಚಾ ವೆರಿಫಿಕೇಷನ್ ಅನ್ನು ಮಾಡಿ
ಹಂತ 8: Send OTP ಮೇಲೆ ಕ್ಲಿಕ್ ಮಾಡಿ
ಹಂತ 9: 'Update Demographics Data' ಮೇಲೆ ಕ್ಲಿಕ್ ಮಾಡಿ
ಹಂತ 10: ನವೀಕರಿಸಲು ವಿವರಗಳ ಆಯ್ಕೆಯನ್ನು ಆಯ್ಕೆಮಾಡಿ
ಹಂತ 11: ಹೊಸ ವಿವರಗಳನ್ನು ನಮೂದಿಸಿ
ಹಂತ 12: ದಾಖಲೆಗಳ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
ಹಂತ 13: ನಮೂದಿಸಿದ ಮಾಹಿತಿಯು ನಿಖರವಾಗಿದೆಯೇ ಎಂದು ಪರಿಶೀಲಿಸಿ, ಒಟಿಪಿ ಉಲ್ಲೇಖಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.


Click it and Unblock the Notifications