ಪ್ರಸ್ತುತ ಆಧಾರ್ ಕಾರ್ಡ್‌ನಂತೆಯೇ ಪ್ಯಾನ್ ಕಾರ್ಡ್ ಅತೀ ಪ್ರಮುಖವಾದ ದಾಖಲೆಯಾಗಿದೆ. ಯಾವುದೇ ಬ್ಯಾಂಕ್ ಅಥವಾ ಆರ್ಥಿಕ ವಹಿವಾಟಿಗೆ ಪ್ರಸ್ತುತ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿದೆ. ನಾವು ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೂ ಪ್ಯಾನ್ ಕಾರ್ಡ್ ಬೇಕಾಗುತ್ತದೆ. ಪ್ಯಾನ್ ಕಾರ್ಡ್ ಇಲ್ಲವಾದರೆ ನೀವು ಬ್ಯಾಂಕ್ ಖಾತೆಯನ್ನು ತೆರೆಯಲು ಹಾಗೂ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಜನರ ಆರ್ಥಿಕ ವಹಿವಾಟಿನ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಎಲ್ಲ ವಹಿವಾಟಿಗೂ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ನಿಮ್ಮಲ್ಲಿ ಪ್ಯಾನ್ ಕಾರ್ಡ್ ಇಲ್ಲವಾದರೆ ಕೆಲವು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಕೂಡಾ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮಲ್ಲಿ ಪ್ಯಾನ್ ಕಾರ್ಡ್ ಇಲ್ಲವೆ, ಶೀಘ್ರ ಪ್ಯಾನ್ ಕಾರ್ಡ್ ಬೇಕೇ? ಆತಂಕ ಬೇಡ.
ಫಿನೋ ಪೇಮೆಂಟ್ ಬ್ಯಾಂಕ್ ಜನರು ಶೀಘ್ರವಾಗಿ ಡಿಜಿಟಲ್ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುವಂತಹ ಸೇವೆಯನ್ನು ಆರಂಭ ಮಾಡಿದೆ. ಇದರಲ್ಲಿ ನೀವು ಕೆಲವೇ ಗಂಟೆಗಳಲ್ಲಿ ಡಿಜಿಟಲ್ ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು. ಅದಕ್ಕಾಗಿ ನೀವು ಆಧಾರ್ ಕಾರ್ಡ್ ಅನ್ನು ಮಾತ್ರ ಸಬ್‌ಮಿಟ್ ಮಾಡಿದರೆ ಸಾಕಾಗುತ್ತದೆ.
ಸಂಸ್ಥೆಗಳ ಜಂಠಿ ಸೇವೆ
Protean eGov Technologies (ಎನ್‌ಎಸ್‌ಡಿಎಲ್ ಇ-ಗವರ್ನೆಸ್ ಇನ್‌ಫ್ರಸ್ಟ್ರಕ್ಚರ್ ಲಿಮಿಟೆಡ್) ಹಾಗೂ ಬ್ಯಾಂಕ್ ಭಾರತದಲ್ಲಿ ಪ್ಯಾನ್ ಕಾರ್ಡ್ ಸೇವೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜೊತೆಯಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಪ್ಯಾನ್ ಸೇವೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಜೋಡಿಸಿದೆ. ಈ ಒಪ್ಪಂದದ ಪ್ರಕಾರ Protean ಫಿನೋ ಬ್ಯಾಂಕ್ ವರ್ಚುವಲ್ ನೆಟ್‌ವರ್ಕ್ ಮೂಲಕ ದೇಶದ ಅಧಿಕ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದೆ. 12.2 ಲಕ್ಷಕ್ಕೂ ಅಧಿಕ ಕೇಂದ್ರಗಳ ಮೂಲಕ ಜನರನ್ನು ತಲುಪುತ್ತಿದೆ. ಪ್ಯಾನ್ ಕಾರ್ಡ್ ಸೇವೆಯನ್ನು ನೀಡುವ ಮೊದಲ ಪೇಮೆಂಟ್ ಬ್ಯಾಂಕ್ ಫಿನೋ ಆಗಿದೆ.
ಪ್ಯಾನ್ ಕಾರ್ಡ್ ಅನ್ನು ಪಡೆಯುವುದು ಹೇಗೆ?
ಆಧಾರ್ ಅಥಂಟಿಫಿಕೇಷನ್ ಬಳಿಕ ಯಾವುದೇ ಗ್ರಾಹಕರು ಫಿನೋ ಬ್ಯಾಂಕ್ ಕೇಂದ್ರದ ಮೂಲಕ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್ ಹೊರತುಪಡಿಸಿ ಬೇರೆ ಯಾವುದೇ ದಾಖಲೆಯನ್ನು ನೀಡಬೇಕಾಗಿಲ್ಲ. ಹಾಗೆಯೇ ಗ್ರಾಹಕರು ತಮಗೆ ಡಿಜಿಟಲ್ ಪ್ಯಾನ್ ಕಾರ್ಡ್ ಬೇಕೇ ಅಥವಾ ಪ್ರತಿ ರೂಪದಲ್ಲಿ ಪ್ಯಾನ್ ಕಾರ್ಡ್ ಬೇಕೆ ಎಂದು ಆಯ್ಕೆ ಮಾಡಿಕೊಳ್ಳಬಹುದು. ನೀವು ಅರ್ಜಿಯನ್ನು ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಇಮೇಲ್ ಮೂಲಕ ಡಿಜಿಟಲ್ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗಲಿದೆ.
4-5 ದಿನದಲ್ಲಿ ಮನೆ ಬಾಗಿಲಿಗೆ ಪ್ಯಾನ್ ಕಾರ್ಡ್!
ಇ-ಪ್ಯಾನ್ ಕಾರ್ಡ್ ಅಥವಾ ಡಿಜಿಟಲ್ ಪ್ಯಾನ್ ಕಾರ್ಡ್ ವಿಶ್ವದಾದ್ಯಂತ ವ್ಯಾಲಿಡಿಟಿ ಹೊಂದಿದೆ. ಅದನ್ನು ಯಾವುದೇ ಅಧಿಕೃತವಾಗಿ ಬಳಕೆ ಮಾಡಬಹುದು. ಆದರೆ ನಿಮ್ಮ ಕೈಯಲ್ಲೇ ಪ್ಯಾನ್ ಕಾರ್ಡ್ ಬೇಕಾದರೆ, ಫಿನೋ ಬ್ಯಾಂಕ್ ಸೇವೆಯ ಪ್ರಯೋಜನ ಪಡೆಯಬಹುದು. ನೀವು ಫಿನೋ ಬ್ಯಾಂಕ್ ಸೇವೆಯ ಮೂಲಕ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ 4-5 ದಿನದಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ವಿಳಾಸಕ್ಕೆ ಪ್ಯಾನ್ ಕಾರ್ಡ್ ಬರಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications