ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದ್ದು, ಅಲ್ಲಿವರೆಗೆ 6.77 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇನ್ನು ಕೂಡ ರಿಟರ್ನ್ಸ್ ಮಾಡದವರು ದಂಡವನ್ನು ಪಾವತಿಸಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಅವಕಾಶವಿದೆ. ಡಿಸೆಂಬರ್‌ವರೆಗೂ ನೀವು ಮಾಡಬಹುದಾಗಿದೆ.
ಆದರೆ ನೀವು ಈಗಾಗಲೇ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದರೆ ಮತ್ತು ಮರುಪಾವತಿಗಾಗಿ ಕಾಯುತ್ತಿದ್ದರೆ ನೀವು ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಬಹುದು ಹಾಗೂ ನಿಮ್ಮ ಐಟಿಆರ್ ಮರುಪಾವತಿ (IT Refund) ವಿಳಂಬಕ್ಕೆ ಕಾರಣವೇನಿರಬಹುದು ಎಂಬುದನ್ನು ನೀವು ಪರಿಶೀಲಿಸಬಹುದು. ಇಲ್ಲಿದೆ ವಿವರ ಮುಂದೆ ಓದಿ...

ನಿಮ್ಮ ಐಟಿಆರ್ ಮರುಪಾವತಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು-
ಹಂತ 1: ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ನೀವು ನಿಮ್ಮ ಮರುಪಾವತಿ ಸ್ಥಿತಿಯನ್ನು ತಿಳಿಯಿರಿ ಎಂಬ ಕ್ವಿಕ್ ಲಿಂಕ್‌ಗಳು ವಿಭಾಗದ ಕೆಳಗೆ ಸ್ಕ್ರಾಲ್ ಮಾಡಿ. ಬಳಿಕ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಪ್ಯಾನ್ ಸಂಖ್ಯೆ, ಮೌಲ್ಯ ಮಾಪನ ವರ್ಷ (ಪ್ರಸ್ತುತ ವರ್ಷಕ್ಕೆ 2023-24) ಮತ್ತು ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ.
ಹಂತ 4: ನೀವು ಆಗ ಒಟಿಪಿಯನ್ನು ಪಡೆಯುವಿರಿ ಹಾಗೂ ಆ ಒಟಿಪಿಯನ್ನು ಭರ್ತಿ ಮಾಡಿ.
ಈಗ ಇದು ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಅನ್ನು ತೋರಿಸುತ್ತದೆ. ನಿಮ್ಮ ಐಟಿಆರ್ ವಿವರಗಳಲ್ಲಿ ಒಂದುವೇಳೆ ಸಮಸ್ಯೆಗಳಿದ್ದರೆ ಆಗ ಅದನ್ನು ತೋರಿಸುತ್ತದೆ: ಯಾವುದೇ ದಾಖಲೆಗಳು ಕಾಣಿಸುತ್ತಿಲ್ಲ; ದಯವಿಟ್ಟು ಇ-ಫೈಲ್ ಮೂಲಕ ನ್ಯಾವಿಗೇಟ್ ಮಾಡಿ ನಿಮ್ಮ ಇ-ಫೈಲಿಂಗ್ ಪ್ರಕ್ರಿಯೆ ಸ್ಥಿತಿಯನ್ನು ಪರಿಶೀಲಿಸಿ- ನಂತರ ತೆರಿಗೆ ರಿಟರ್ನ್ಸ್, ಫೈಲ್ ಮಾಡಿದ ರಿಟರ್ನ್ಸ್ ಅನ್ನು ವೀಕ್ಷಿಸಿ ಎಂಬ ಸಂದೇಶ ತೋರಿಸುತ್ತದೆ.
ಸಾಮಾನ್ಯವಾಗಿ ಐಟಿಆರ್ ಸಲ್ಲಿಸಿದ 7 ರಿಂದ 120 ದಿನಗಳಲ್ಲಿ ತೆರಿಗೆ ಮರುಪಾವತಿ ಹಣ ಖಾತೆಗೆ ಬರುತ್ತದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಇನ್ನೂ ಪ್ರೊಸೆಸ್‌ನಲ್ಲಿದ್ದರೆ ಆಗ ನಿಮ್ಮ ಐಟಿಆರ್ ಮರುಪಾವತಿ ವಿಳಂಬವಾಗಬಹುದು. ಅಲ್ಲದೆ ಇತರೆ ಕಾರಣಗಳೂ ಇರಬಹುದು.
ತಪ್ಪಾದ ಮಾಹಿತಿ: ತೆರಿಗೆದಾರರು ಬ್ಯಾಂಕ್ ಖಾತೆ ಸಂಖ್ಯೆಗಳು, ಹೆಸರು ಅಥವಾ ವಿಳಾಸದಂಥಹ ತಪ್ಪಾದ ವಿವರಗಳನ್ನು ಒದಗಿಸಿದರೆ ಮರುಪಾವತಿಯು ಖಾತೆಗೆ ಜಮೆ ಆಗುವುದಕ್ಕೆ ವಿಫಲವಾಗುತ್ತದೆ. ಪ್ಯಾನ್ ಹಾಗೂ ಬ್ಯಾಂಕ್ ಖಾತೆಯ ವಿವರಗಳು ಹೊಂದಿಕೆಯಾಗಬೇಕು.
ಫೈಲಿಂಗ್ ದೋಷಗಳು: ತೆರಿಗೆ ರಿಟರ್ನ್ಸ್‌ನಲ್ಲಿ ತಪ್ಪುಗಳು, ಅಂದರೆ ತಪ್ಪು ಲೆಕ್ಕಾಚಾರಗಳು ಅಥವಾ ಅಪೂರ್ಣ ಮಾಹಿತಿ.
ಬಾಕಿ ಉಳಿದಿರುವ ಬೇಡಿಕೆ: ಒಂದುವೇಳೆ ತೆರಿಗೆ ಪಾವತಿದಾರರು ಸರ್ಕಾರಕ್ಕೆ ಹಣ ಬಾಕಿ ಉಳಿಸಿಕೊಂಡಿದ್ದರೆ ಮರುಪಾವತಿಯನ್ನು ಬಳಸಬಹುದು.
ನಿಮ್ಮ ಆದಾಯ ತೆರಿಗೆ ಮರುಪಾವತಿ ವಿಫಲವಾದಲ್ಲಿ ನೀವು ಈ ಕೆಳಗಿನ ಹಂತಗಳನ್ನು ತೆಗೆದುಕೊಳ್ಳಬೇಕು.
1. ಮಾಹಿತಿಯನ್ನು ಪರಿಶೀಲಿಸಿ
2. ಐಟಿಆರ್ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಮರುಪಾವತಿಯ ಮಾಡುವ ವಿನಂತಿಯನ್ನು ಮರುಸಲ್ಲಿಸಿ.
3. ರಿಟರ್ನ್ ಅನ್ನು ಸರಿಪಡಿಸಿ ಅಥವಾ ತಿದ್ದುಪಡಿ ಮಾಡಿ.
ಇದರ ಹೊರತಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ದೃಢೀಕರಿಸಬೇಕು.
4. ಬಾಕಿ ಏನಾದರೂ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಿ.
ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ದೃಢೀಕರಿಸಬೇಕು. ಪೂರ್ವ ದೃಢೀಕೃತ ಬ್ಯಾಂಕ್ ಖಾತೆಗಳಿಗೆ ಮಾತ್ರ ಆದಾಯ ತೆರಿಗೆ ಹಣ ಮರುಪಾವತಿಯಾಗುತ್ತದೆ.


Click it and Unblock the Notifications