ವಾಟ್ಸಾಪ್ ಸ್ಟೇಟಸ್ ತ್ವರಿತ ಸಂದೇಶ ಕಳುಹಿಸುವ ವೇದಿಕೆಯಾದ ವಾಟ್ಸಾಪ್‌ನಲ್ಲಿ ಲಭ್ಯವಿರುವ ಒಂದು ಫೀಚರ್ ಆಗಿದೆ. ಬಳಕೆದಾರರು ತಮ್ಮ ಸಂಪರ್ಕಗಳೊಂದಿಗೆ ಫೋಟೋಗಳು, ವೀಡಿಯೊಗಳು ಮತ್ತು ಟೆಸ್ಟ್ ಅಪ್‌ಡೇಟ್‌ಗಳನ್ನು 24-ಗಂಟೆಗಳ ಅವಧಿಗೆ ಹಂಚಿಕೊಳ್ಳಲು ಈ ಫೀಚರ್ ಮೂಲಕ ಸಾಧ್ಯವಾಗುತ್ತದೆ. ಈಗ ವಾಟ್ಸಾಪ್ ಸ್ಟೇಟಸ್ ಎನ್ನುವುದು ಎಲ್ಲರ ಜೀವನದ ಒಂದು ಭಾಗವೆಂಬಂತೆ ಆಗಿದೆ.
ನಿಮ್ಮ ಸ್ನೇಹಿತರು ಅಪ್‌ಡೇಟ್ ಮಾಡಿದ ವಾಟ್ಸಾಪ್ ವೀಡಿಯೊ ಸ್ಟೇಟಸ್ ಅನ್ನು ನೀವು ಇಷ್ಟಪಡಬಹುದು. ಅದನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡಬಹುದು. ಆದರೆ ವಾಟ್ಸಾಪ್ ಸ್ಟೇಟಸ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು?, ಇದರ ವಿವರ ಇಲ್ಲಿದೆ ಮುಂದೆ ಓದಿ....

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಡೌನ್‌ಲೋಡ್ ಮಾಡಿ
ವಾಟ್ಸಾಪ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಟೇಟಸ್ ಫೈಲ್‌ಗಳನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಫೈಲ್ ಮ್ಯಾನೇಜರ್ ಮೂಲಕ ಅವುಗಳನ್ನು ನೀವು ವೀಕ್ಷಿಸಬಹುದಾಗಿದೆ. ಫೈಲ್ ಮ್ಯಾನೇಜರ್ ಅನ್ನು ಬಳಸಿಕೊಂಡು ನೀವು ಇದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ:
ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ಸ್ಟೇಟಸ್ ಅನ್ನು ವೀಕ್ಷಿಸಿ.
ಹಂತ 2: ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ತೆರೆಯಿರಿ.
ಹಂತ 3: ಗುಪ್ತ ವಾಟ್ಸಾಪ್ ಡೈರೆಕ್ಟರಿಯನ್ನು ಬಹಿರಂಗಪಡಿಸಲು "ಶೋಹಿಡನ್ ಫೈಲ್ಸ್" ಆಯ್ಕೆಯನ್ನು ಸಕ್ರಿಯಗೊಳಿಸಿ.
ಹಂತ 4: ಬಳಿಕ ಇಂಟರ್‌ನಲ್ ಸ್ಟೋರೆಜ್‌ಗೆ ಹೋಗಿ ಅಲ್ಲಿ ವಾಟ್ಸಾಪ್ ಕ್ಲಿಕ್ ಮಾಡಿ, ಬಳಿಕ ಮಿಡಿಯಾದಲ್ಲಿ ಸ್ಟೇಟಸ್ ಎಂದು ಇರುತ್ತದೆ, ಅಲ್ಲಿ ವಾಟ್ಸಾಪ್ ಸ್ಟೇಟಸ್ ಇರುತ್ತದೆ.
ಹಂತ 5: ನೀವು ಉಳಿಸಲು ಬಯಸುವ ಫೋಟೋಗಳು ಅಥವಾ ವೀಡಿಯೊಗಳನ್ನು ಕಾಪಿ ಮಾಡಿಕೊಳ್ಳಿ.
ಹಂತ 6: ಸುರಕ್ಷಿತವಾಗಿರಿಸಲು ಅವುಗಳನ್ನು ಬೇರೆ ಫೋಲ್ಡರ್‌ಗೆ ರವಾನೆ ಮಾಡಿಕೊಳ್ಳಿ.
ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಡೌನ್‌ಲೋಡ್ ಮಾಡಿ
ಐಫೋನ್ ಬಳಕೆದಾರರು ತಮ್ಮ ವಾಟ್ಸಾಪ್ ಸಂಪರ್ಕದ ಸ್ಟೇಟಸ್‌ಗಳಿಂದ ಸ್ಕ್ರೀನ್‌ಶಾಟ್ ವಿಧಾನವನ್ನು ಬಳಸಿಕೊಂಡು ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಮೂಲಕ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.
ಸ್ಕ್ರೀನ್‌ಶಾಟ್ ಅನ್ನು ಬಳಸಿಕೊಂಡು ವಾಟ್ಸಾಪ್ ಸ್ಟೇಟಸ್ ಹೀಗೆ ಡೌನ್‌ಲೋಡ್ ಮಾಡಿಕೊಳ್ಳಿ.
ಹಂತ 1: ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಫೋಟೋ ಅಥವಾ ವೀಡಿಯೊವನ್ನು ಉಳಿಸಲು ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಸುಲಭವಾದ ಮಾರ್ಗವಾಗಿದೆ.
ಹಂತ 2: ನೀವು ಉಳಿಸಲು ಬಯಸುವ ಸ್ಟೇಟನ್ ಅನ್ನು ವೀಕ್ಷಿಸಿ.
ಹಂತ 3: ಸ್ಕ್ರೀನ್‌ಶಾಟ್ ಅನ್ನು ಸೆರೆಹಿಡಿಯಲು ವಾಲ್ಯೂಮ್ ಅಪ್ ಮತ್ತು ಪವರ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿರಿ.
ಹಂತ 4: ಸ್ಕ್ರೀನ್‌ಶಾಟ್ ಅನ್ನು ನಿಮ್ಮ ಮೊಬೈಲ್‌ನ ಫೋಟೋ ಗ್ಯಾಲರಿಯಲ್ಲಿ ಸೇವ್ ಮಾಡಲಾಗುತ್ತದೆ.
ಥರ್ಡ್ ಪಾರ್ಟಿ ಅಪ್ಲಿಕೇಶನ್ ಮೂಲಕ ಡೌನ್‌ಲೋಡ್
ಐಫೋನ್‌ಗಳು ತನ್ನ ಭದ್ರತಾ ಕ್ರಮಗಳಿಗಾಗಿ ಜನಪ್ರಿಯವಾಗಿದೆ. ಇದು ವಾಟ್ಸಾಪ್ ಫೈಲ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸುತ್ತದೆ. ಆದರೂ ಮೈಮಿಡಿಯಾ ("MyMedia") ದಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್ ಮೂಲಕ ನೀವು ಈಗಲೂ ನಿಮ್ಮ ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಡೌನ್‌ಲೋಡ್ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ:
ಹಂತ 1: ಆಪ್ ಸ್ಟೋರ್‌ನಿಂದ "ಮೈಮಿಡಿಯಾ" "MyMedia" ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಿ.
ಹಂತ 2: ವಾಟ್ಸಾಪ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ಸ್ಟೇಟಸ್ ಅನ್ನು ನೋಡಿ.
ಹಂತ 3: ಶೇರ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು "Copy Link" ಆಯ್ಕೆಯನ್ನು ಆರಿಸಿ.
ಹಂತ 4: ಮೈಮಿಡಿಯಾ ಅಪ್ಲಿಕೇಶನ್ ತೆರೆಯಿರಿ ಮತ್ತು ಒದಗಿಸಿದ ಜಾಗದಲ್ಲಿ ಲಿಂಕ್ ಅನ್ನು ಪೇಸ್ಟ್ ಮಾಡಿಕೊಳ್ಳಿ.
ಹಂತ 5: ಸ್ಟೇಟಸ್ ಅನ್ನು ನೋಡಿ, ಅದನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ವಿಧಾನವು ಆಂಡ್ರಾಯ್ಡ್‌ಗಿಂತ ಕೆಲವು ಹೆಚ್ಚಿನ ಹಂತಗಳನ್ನು ಒಳಗೊಂಡಿರುವಾಗ, ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಅನ್ನು ಉಳಿಸಲು ಇದು ವಿಶ್ವಾಸಾರ್ಹ ಮಾರ್ಗವಾಗಿದೆ. ನಿಮ್ಮ ವಾಟ್ಸಾಪ್ ಸಂಪರ್ಕದ ಸ್ಟೇಟಸ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಮೊದಲು, ನಿರ್ದಿಷ್ಟ ವೀಡಿಯೊವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇನ್ನೊಬ್ಬ ವ್ಯಕ್ತಿಯನ್ನು ವಿನಂತಿಸುವುದು ಯಾವಾಗಲೂ ಒಳ್ಳೆಯದು.
ಬೇರೊಬ್ಬರ ವಿಷಯವನ್ನು ಡೌನ್‌ಲೋಡ್ ಮಾಡುವುದು ಮತ್ತು ಅವರ ಅನುಮತಿಯಿಲ್ಲದೆ ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದು ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘನೆಯಾಗಬಹುದು. ಆದ್ದರಿಂದ ವಾಟ್ಸಾಪ್ ವಿಡಿಯೋ ಡೌನ್‌ಲೋಡ್ ಮಾಡುವಾಗ ಅದು ಅದು ಖಾಸಗಿ ವಿಡಿಯೋವೆ ಎಂದು ಪರಿಶೀಲಿಸಿ.


Click it and Unblock the Notifications