ಷೇರು ಮಾರುಕಟ್ಟೆಯಲ್ಲಿ ಲಾಭಾಂಶ ಅಥವಾ ಬೋನಸ್ ಷೇರು ಎಂಬುದು ಜನಪ್ರಿಯ ಪದ. ಯಾವುದೇ ಕಂಪನಿ ಹೆಚ್ಚುವರಿ ವೆಚ್ಚ ಹಾಕದೆ ಹಾಲಿ ಷೇರುದಾರರಿಗೆ ನೀಡುವ ಹೆಚ್ಚುವರಿ ಷೇರು ಇದಾಗಿದೆ. ಕಂಪನಿಯಲ್ಲಿ ಷೇರುದಾರ ಹೊಂದಿರುವ ಷೇರುಗಳ ಸಂಖ್ಯೆಗೆ ಅನುಗುಣವಾಗಿ ಆತನಿಗೆ ಬೋನಸ್ ಷೇರುಗಳನ್ನು ಕಂಪನಿ ನೀಡುತ್ತದೆ. ಕಂಪನಿ ಗಳಿಸುವ ಸಂಚಿತ ಆದಾಯವನ್ನು ಷೇರುದಾರರಿಗೆ ಲಾಭಾಂಶ ರೂಪದಲ್ಲಿ ನೀಡದೆ, ಉಚಿತ ಷೇರುಗಳಾಗಿ ಪರಿವರ್ತಿಸಿ, ಬೋನಸ್ ಷೇರಿನ ರೂಪದಲ್ಲಿ ನೀಡುತ್ತದೆ.
ಈ ರೀತಿ ಕಂಪನಿಯು ಬೋನಸ್ ಷೇರುಗಳನ್ನು ಷೇರುದಾರರಿಗೆ ನೀಡಿ, ಷೇರು ಮಾರುಕಟ್ಟೆಯಲ್ಲಿ ತನ್ನ ಬಂಡವಾಳ ಮೌಲ್ಯ ಮತ್ತು ಸ್ಥಾನವನ್ನು ಹೆಚ್ಚಿಸಿಕೊಳ್ಳುತ್ತದೆ. ಜತೆಗೆ, ಹಾಲಿ ಷೇರುದಾರರಿಂದ ನಂಬಿಕೆ ಗಳಿಸಿಕೊಳ್ಳಲು ಇದು ಕಂಪನಿಗೆ ಸಹಾಯಕವಾಗಲಿದೆ. ಎಲ್ಲಕ್ಕಿಂತ ವಿಶೇಷವಾಗಿ, ಬಂಡವಾಳ ತೊಡಗಿಸುವಂತೆ ಸಣ್ಣ ಹೂಡಿಕೆದಾರರನ್ನು ಸೆಳೆಯಲು ನೆರವಾಗುತ್ತದೆ. ಅಲ್ಲದೆ, ಷೇರುದಾರರಿಗೆ ಬೋನಸ್ ಷೇರುಗಳನ್ನು ಹಂಚುವುದರಿಂದ ನಗದು ರೂಪದಲ್ಲಿ ಲಾಭಾಂಶ ಪಾವತಿಸುವ ಗೊಂದಲ, ಗೋಜಲು ನಿವಾರಣೆಯಾಗುತ್ತದೆ. ಬೋನಸ್ ಷೇರುಗಳನ್ನು ಘೋಷಿಸುವುದರಿಂದ, ಸಹಜವಾಗಿ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ಬಂಡವಾಳ ನೆಲೆ ಹೆಚ್ಚಾಗಲಿದೆ.
ಬೋನಸ್ ಷೇರುಗಳ ವಿತರಣೆಯಿಂದ ಒಟ್ಟು ಷೇರುಗಳ ಸಂಖ್ಯೆ ಏರಿಕೆ ಕಾಣುತ್ತದೆ. ಅಲ್ಲದೆ, ಹಾಲಿ ಇರುವ ಷೇರುಗಳ ಜತೆಗೆ ಸ್ಥಿರ ಅನುಪಾತದಲ್ಲಿ ಬೋನಸ್ ಷೇರುಗಳ ಸಂಖ್ಯೆ ಹೆಚ್ಚುತ್ತಿರುತ್ತದೆ. ಉದಾಹರಣೆಗೆ, ನಿರ್ದಿಷ್ಟ ಕಂಪನಿಯೊಂದರಲ್ಲಿ ನೀವು 2 ಸಾವಿರ ಷೇರುಗಳನ್ನು ಹೊಂದಿದ್ದೀರಿ ಎಂದು ಭಾವಿಸಿ. ಆ ಕಂಪನಿ ನಿಮ್ಮ ಪ್ರತಿ 2 ಷೇರುಗಳಿಗೆ 1 ಬೋನಸ್ ಷೇರು ಘೋಷಿಸುತ್ತದೆ. ಆಗ ನಿಮ್ಮ ಪ್ರತಿ 2 ಷೇರುಗಳಿಗೆ 1 ಉಚಿತ ಷೇರು ಸಿಕ್ಕಂತಾಗುತ್ತದೆ. ಒಟ್ಟಾರೆ ನೀವು 1 ಸಾವಿರ ಉಚಿತ ಷೇರುಗಳನ್ನು ಪಡದಂತಾಗುತ್ತದೆ. ಷೇರುದಾರ ಬೋನಸ್ ಷೇರುಗಳನ್ನು ಗಳಿಸಿದರೆ ಕಂಪನಿಯಲ್ಲಿ ಹೆಚ್ಚಿನ ಪ್ರಮಾಣದ ಷೇರುಗಳನ್ನು ಹೊಂದಿದಂತಾಗುತ್ತದೆ. ಇದಕ್ಕೆ ಷೇರುದಾರ ಯಾವುದೇ ರೀತಿಯ ಹೆಚ್ಚುವರಿ ವೆಚ್ಚ, ಶುಲ್ಕ ಅಥವಾ ಹೂಡಿಕೆ ಮಾಡಿರುವುದಿಲ್ಲ.

ಒಂದು ವೇಳೆ ಕಂಪನಿಯ ಷೇರು ದರ ಅತ್ಯಧಿಕ ಮಟ್ಟಕ್ಕೆ ಏರಿಕೆ ಕಂಡಾಗ, ಹೂಡಿಕೆದಾರರಿಗೆ ಷೇರು ಖರೀದಿ ಮಾಡಲು ಅಥವಾ ಹೆಚ್ಚಿನ ಹೂಡಿಕೆ ಮಾಡಲು ಬಯಸಿದರೂ, ಅದು ಕಷ್ಟವಾಗುತ್ತದೆ, ಆಗ ಬೋನಸ್ ಷೇರುಗಳು ಹಾಲಿ ಷೇರುದಾರರಿಗೆ ಭರ್ಜರಿ ಆದಾಯ ತಂದುಕೊಡುತ್ತವೆ. ಯಾವುದೇ ವೆಚ್ಚವಿಲ್ಲದೆ ಷೇರುದಾರರು ಅಧಿಕ ದರದ ಷೇರುಗಳನ್ನು ಗಳಿಸಿ, ಕಂಪನಿಯಲ್ಲಿ ತಮ್ಮ ಬಂಡವಾಳ ನೆಲೆಯನ್ನು ಬಹುಪಟ್ಟು ಹೆಚ್ಚಿಸಿಕೊಳ್ಳಬಹುದು. ಈಕ್ವಿಟಿ ಮಾರುಕಟ್ಟೆಯಲ್ಲಿ 2 ವಿಧದ ಬೋನಸ್ ಷೇರುಗಳು ಲಭ್ಯವಿವೆ. ಪೂರ್ಣ ಪಾವತಿಯ ಬೋನಸ್ ಷೇರುಗಳು ಮತ್ತು ಭಾಗಶಃ ಪಾವತಿಯ ಬೋನಸ್ ಷೇರುಗಳು.
ಬೋನಸ್ ಷೇರುಗಳಲ್ಲಿ ನಿರ್ಧರಿತ ದಿನಾಂಕ ಮತ್ತು ಹಿಂದಿನ ದಿನಾಂಕ ಏನಿದು?
ಬೋನಸ್ ಷೇರುಗಳನ್ನು ಹಂಚುವಾಗ ಕಂಪನಿಗಳು ಕಟ್-ಆಫ್(ನಿರ್ಧರಿತ) ದಿನಾಂಕ ಮತ್ತು ಹಿಂದಿನ ದಿನಾಂಕ (ಎಕ್ಸ್-ಡೇಟ್) ಎಂದು 2 ದಿನಾಂಕಗಳನ್ನು ಗೊತ್ತು ಮಾಡುತ್ತವೆ. ಷೇರುದಾರ ಬೋನಸ್ ಷೇರುಗಳನ್ನು ಪಡೆಯಲು ಹೊಂದಿರುವ ಅರ್ಹತೆಗಳನ್ನು ಇವೆರಡು ದಿನಾಂಕಗಳು ನಿರ್ಧರಿಸುತ್ತವೆ. ಕಂಪನಿ ನಿರ್ಧರಿಸುವ ಕಟ್-ಆಫ್ ದಿನಾಂಕದೊಳಗೆ ಷೇರುಗಳನ್ನು ಖರೀದಿಸಿದ್ದರೆ, ಷೇರುದಾರ ಬೋನಸ್ ಷೇರುಗಳಿಗೆ ಅರ್ಹತೆ ಪಡೆಯುತ್ತಾನೆ.
ಇನ್ನೊಂದೆಡೆ, ಘೋಷಿತ ದಾಖಲು ದಿನಾಂಕದ ಹಿಂದಿನ ದಿನ ಎಕ್ಸ್-ಡೇಟ್ ಆಗಿರುತ್ತದೆ. ಷೇರುದಾರ ಬೋನಸ್ ಷೇರುಗಳನ್ನು ಪಡೆಯಬೇಕಾದರೆ ಆತನ ಎಕ್ಸ್-ಡೇಟ್‌ಗೆ ಮುನ್ನ ಷೇರು ಖರೀದಿಸಿರಬೇಕು. ಈ ಎರಡು ದಿನಾಂಕಗಳಗೆ ಷೇರು ಖರೀದಿಸಿದ್ದರೆ ಮಾತ್ರ ಷೇರುದಾರನಿಗೆ ಬೋನಸ್ ಷೇರುಗಳು ಲಭ್ಯವಾಗುತ್ತವೆ.
ಆದಾಗ್ಯೂ, ಹೂಡಿಕೆದಾರರಿಗೆ ಬೋನಸ್ ಷೇರುಗಳಲ್ಲಿ ಸಿಗುವ ಲಾಭಾಂಶ ಒಂದೇ ಆಗಿರುತ್ತದೆ. ಷೇರುಗಳ ಸಂಖ್ಯೆ ಹೆಚ್ಚಾಗುತ್ತದೆ, ಆದರೆ ಪ್ರತಿ ಷೇರಿನ ಗಳಿಕೆ ಕೊಂಚ ಕಡಿಮೆಯಾಗುತ್ತದೆ. ಬೋನಸ್ ಷೇರುಗಳಿಗೆ ಅಂತಾರಾಷ್ಟ್ರೀಯ ಭದ್ರತಾ ಠೇವಣಿಗಳ ಗುರುತಿನ ಸಂಖ್ಯೆ (ಐಎಸ್ಐಎನ್) ಹಂಚಿಕೆ ಮಾಡಿದ ನಂತರ, ಷೇರುದಾರರ ಖಾತೆಗೆ 15 ದಿನಗಳಲ್ಲಿ ನೇರವಾಗಿ ಹಣ ಜಮೆ ಆಗಲಿದೆ.


Click it and Unblock the Notifications