mAadhaar App : ಮೈಆಧಾರ್ ಆಪ್‌ ಎಂದರೇನು, ಹೇಗೆ ಡೌನ್‌ಲೋಡ್ ಮಾಡುವುದು?

ಆಧಾರ್ ಎಂಬುವುದು ಪ್ರಸ್ತುತ ಅತೀ ಮುಖ್ಯವಾದ ದಾಖಲೆಯಾಗಿದೆ. ಓರ್ವ ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ಆಧಾರ್ ಕಾರ್ಡ್ ಪ್ರಮುಖವಾಗಿದೆ. ಎಲ್ಲ ಯೋಜನೆಗಳ ಪ್ರಯೋಜನ ಪಡೆಯಬೇಕಾದರೆ ಆಧಾರ್ ಮುಖ್ಯವಾಗಿದೆ. ಪ್ರಸ್ತುತ ಶಿಶುವಿಗೂ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಗಳು ನಡೆಸಲಾಗುತ್ತಿದೆ. ಪೋಷಕರ ಬಯೋಮೆಟ್ರಿಕ್ ಡೇಟಾಕ್ಕೆ ಲಿಂಕ್ ಮಾಡಿಕೊಂಡು ಶಿಶುವಿನ ಆಧಾರ್ ಕಾರ್ಡ್ ಅನ್ನು ಮಾಡಲಾಗುತ್ತದೆ.

ಇಷ್ಟೊಂದು ಪ್ರಮುಖವಾದ ದಾಖಲೆಯನ್ನು ಪ್ರಯಾಣ ಮಾಡುವಾಗ ಜೊತೆಗೆ ಇಟ್ಟುಕೊಂಡು ಕಳೆದುಕೊಂಡರೆ ಏನು ಮಾಡುವುದು?, ಈ ಸಮಸ್ಯೆಕ್ಕೆ ಯುಐಡಿಎಐ ಪರಿಹಾರವನ್ನು ನೀಡಿದೆ. ನಾವು ಆಧಾರ್ ಕಾರ್ಡ್ ಅನ್ನು ಕೈಯಲ್ಲಿ ಹಿಡಿದುಕೊಳ್ಳಬೇಕಾಗಿಲ್ಲ. ಮೊಬೈಲ್‌ನಲ್ಲೇ ಇಟ್ಟುಕೊಳ್ಳುವಂತಹ ತಂತ್ರಜ್ಞಾನವನ್ನು ಯುಐಡಿಎಐ ಜಾರಿ ಮಾಡಿದೆ.

ಅದುವೇ ಎಂಆಧಾರ್ ಅಥವಾ ಮೈ ಆಧಾರ್ ಆಗಿದೆ. ಆದರೆ ಇದು ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತದೆ, ಹೇಗೆ ಡೌನ್‌ಲೋಡ್ ಮಾಡುವುದು ಎಂದು ನಿಮಗೆ ತಿಳಿದಿದೆಯೇ?, ಪ್ರೊಫೈಲ್ ಅನ್ನು ಸೇರಿಸುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ.

 ಮೈಆಧಾರ್ ಆಪ್ ಎಂದರೇನು?

ಮೈಆಧಾರ್ ಆಪ್ ಎಂದರೇನು?

ಎಂ ಆಧಾರ್ ಅಥವಾ ಮೈ ಆಧಾರ್ ಆಪ್ ಎಂಬುವುದನ್ನು ಯುಐಡಿಎಐ ಬಿಡುಗಡೆ ಮಾಡಿದ ಆಪ್ ಆಗಿದೆ. ಇದರಿಂದಾಗಿ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಈ ಪ್ರಮುಖ ದಾಖಲೆಯನ್ನು ಮೊಬೈಲ್‌ನಲ್ಲೇ ಡಿಜಿಟಲ್ ರೂಪದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿದೆ. ಆಧಾರ್ ಕಾರ್ಡ್ ಹೊಂದಿರುವವರು ಮೈ ಆಧಾರ್ ಆಪ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ಆಡ್ ಮಾಡಿಕೊಳ್ಳಬಹುದು. ಇದರಿಂದಾಗಿ ಯಾವುದೇ ಸಂದರ್ಭದಲ್ಲಿ ಆಧಾರ್ ಕಾರ್ಡ್ ಸೇವೆಯನ್ನು ಪಡೆಯಬಹುದು. ಈ ಆಪ್‌ ಪಾಸ್‌ವರ್ಡ್ ಮೂಲಕ ಸುರಕ್ಷಿತ ಆಗಿರುತ್ತದೆ. ಆಪ್ ಅನ್ನು ತೆರೆಯುವ ಪ್ರತಿ ಸಂದರ್ಭದಲ್ಲಿಯೂ ಬಳಕೆದಾರರು ಪಾಸ್‌ವರ್ಡ್ ಅನ್ನು ನಮೂದಿಸುವುದು ಮುಖ್ಯವಾಗಿದೆ.

 ಈ ಪ್ರಮುಖ ವಿಚಾರಗಳು ತಿಳಿದಿರಲಿ

ಈ ಪ್ರಮುಖ ವಿಚಾರಗಳು ತಿಳಿದಿರಲಿ

* ನೀವು ಈ ಆಪ್ ಮೂಲಕ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಕಳೆದುಹೋದ ಆಧಾರ್ ಕಾರ್ಡ್‌ನ ಪ್ರತಿ ಪಡೆಯಲು ಸಾಧ್ಯವಾಗಲಿದೆ.
* ನಿಮ್ಮಲ್ಲಿ ಎಲ್ಲಿಯಾದರೂ ಆಧಾರ್ ಅನ್ನು ತೋರಿಸುವಂತೆ ಹೇಳಿದಾಗ, ನೀವು ಆಫ್‌ಲೈನ್ ಮೂಲಕವೂ ಆಧಾರ್ ಅನ್ನು ಪ್ರಸ್ತುತಪಡಿಸಬಹುದು.
* ದಾಖಲೆಗಳು ಇಲ್ಲದೆಯೇ ಆಧಾರ್ ವಿಳಾಸವನ್ನು ಅಪ್‌ಡೇಟ್ ಮಾಡಬಹುದು.
* ನಿಮ್ಮ ಮನೆಯ ಐದು ಜನರ ಆಧಾರ್ ಕಾರ್ಡ್ ಮಾಹಿತಿಯನ್ನು ಅನ್ನು ಒಂದೇ ಡಿವೈಸ್‌ನಲ್ಲಿ ಇರಿಸಬಹುದು.
* ಕಾಗದರಹಿತ ಇಕೆವೈಸಿ ಮಾಡಬಹುದು.
* ಆಪ್‌ ಅನ್ನು ಲಾಕ್ ಮಾಡುವ ಮೂಲಕ ಆಧಾರ್ ಅನ್ನು ಸುರಕ್ಷಿತವಾಗಿರಿಸಬಹುದು.
* ಆಫ್‌ಲೈನ್ ಸಂದರ್ಭದಲ್ಲಿ ಆಧಾರ್ ಎಸ್‌ಎಂಎಸ್ ಬಳಕೆ ಮಾಡಬಹುದು.
* ಆಧಾರ್ ಅಪ್‌ಡೇಟ್ ಮಾಡಿದ ಸ್ಟೇಟಸ್ ಅನ್ನು ಪರಿಶೀಲನೆ ಮಾಡಬಹುದು.

 ಎಂಆಧಾರ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಎಂಆಧಾರ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಐಫೋನ್‌ಗಳಲ್ಲಿ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲಿ ನಾವು ಎಂಆಧಾರ್ ಅಥವಾ ಮೈಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಕೆಳಗಿನ ಹಂತಗಳನ್ನು ಪಾಲಿಸಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 1: ಗೂಗಲ್ ಪ್ಲೇ ಅಥವಾ ಆಪ್‌ ಸ್ಟೋರ್‌ಗೆ ಭೇಟಿ ನೀಡಿ(https://goo.gl/WuSCCQ)
ಹಂತ 2: ಇನ್‌ಸ್ಟಾಲ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ಆಪ್‌ಗೆ ಬೇಕಾದ ಅನುಮತಿಯನ್ನು ನೀಡಿ
ಹಂತ 4: ನಿಮ್ಮ ಫೋನ್‌ಗೆ ಆಪ್ ಡೌನ್‌ಲೋಡ್ ಆಗಲಿದೆ.
ಹಂತ 5: ಆಪ್‌ಗೆ ನಾಲ್ಕು ಅಂಕಿಗಳ ಪಾಸ್‌ವರ್ಡ್ ಅನ್ನು ಹಾಕಿಕೊಳ್ಳಿ.
ಹಂತ 6: ನೀವು ಪ್ರತಿ ಬಾರಿ ಆಪ್‌ ಅನ್ನು ತೆರೆಯುವಾಗ ಈ ಪಾಸ್‌ವರ್ಡ್ ಅನ್ನು ಉಲ್ಲೇಖಿಸುವುದು ಅತೀ ಮುಖ್ಯವಾಗಿದೆ.

 

 ಮೈಆಧಾರ್‌ ಆಪ್‌ನಲ್ಲಿ ಪ್ರೊಫೈಲ್ ಆಡ್ ಮಾಡಿಕೊಳ್ಳಿ

ಮೈಆಧಾರ್‌ ಆಪ್‌ನಲ್ಲಿ ಪ್ರೊಫೈಲ್ ಆಡ್ ಮಾಡಿಕೊಳ್ಳಿ

ಹಂತ 1: ಎಂಆಧಾರ್ ಆಪ್ ಅಥವಾ ಮೈಆಧಾರ್ ಆಪ್‌ ಅನ್ನು ತೆರೆಯಿರಿ
ಹಂತ 2: Register My Aadhaar ಮೇಲೆ ಕ್ಲಿಕ್ ಮಾಡಿ
ಹಂತ 3: ಪಾಸ್‌ವರ್ಡ್ ಅನ್ನು ನಮೂದಿಸಿ, ಇದು ನಾಲ್ಕು ಅಂಕಿಯಾಗಿರಬೇಕು
ಹಂತ 4: ಆಧಾರ್ ಸಂಖ್ಯೆಯನ್ನು ಹಾಕಿ ಅಥವಾ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಕೊಳ್ಳಿ
ಹಂತ 5: ಕ್ಯಾಪ್ಚಾ ನಮೂದಿಸಿ, Request OTP ಮೇಲೆ ಕ್ಲಿಕ್ ಮಾಡಿ
ಹಂತ 6: ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಲು ಒಟಿಪಿಯನ್ನು ನಮೂದಿಸಿ.
ಹಂತ 7: Verify ಬಟನ್ ಮೇಲೆ ಕ್ಲಿಕ್ ಮಾಡಿದರೆ ಶೀಘ್ರ ಪ್ರೊಫೈಲ್ ಆಡ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+