ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಸತ್ತು ಸಮಿತಿ ಸಭೆಯಲ್ಲಿ ಹೊಸದಾದ ಕೇಂದ್ರ ಸರ್ಕಾರದ ಯೋಜನೆ 'ಪಿಎಂ ವಿಶ್ವಕರ್ಮ'ಕ್ಕೆ ಅನುಮೋದನೆ ನೀಡಲಾಗಿದೆ. ಹಣಕಾಸು ವರ್ಷ 2023-24 ರಿಂದ ಹಣಕಾಸು ವರ್ಷ 2027-28 ರ ಐದು ವರ್ಷಗಳ ಅವಧಿಯ 13,000 ಕೋಟಿ ರೂಪಾಯಿಯ ಯೋಜನೆ ಇದಾಗಿದೆ.
77ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಆವರಣದಿಂದ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯನ್ನು ಮುಖ್ಯವಾಗಿ ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ.

"ಕುಶಲಕರ್ಮಿಗಳು ಮತ್ತು ಕಲೆಗಾರರು ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಗುರು-ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕೌಶಲ್ಯಗಳನ್ನು ಬಲಪಡಿಸುವ ಮತ್ತು ಪೋಷಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ," ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
"ಈ ಯೋಜನೆಯು ಕುಶಲಕರ್ಮಿಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ದೇಶೀಯ ಮತ್ತು ಜಾಗತಿಕವಾಗಿ ವಿಸ್ತರಣೆ ಮಾಡುವ ಉದ್ದೇಶವನ್ನು ಕೂಡಾ ಈ ಯೋಜನೆ ಹೊಂದಿದೆ," ಎಂದು ಸೇರಿಸಲಾಗಿದೆ.
ವಿಶ್ವಕರ್ಮ ಯೋಜನೆ ಬಗ್ಗೆ ಪ್ರಧಾನಿ ಮೋದಿ
"ಮುಂದಿನ ದಿನಗಳಲ್ಲಿ, ನಾವು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಒಂದು ಯೋಜನೆಯನ್ನು ಪ್ರಾರಂಭಿಸುತ್ತೇವೆ. ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ, ವಿಶೇಷವಾಗಿ ಒಬಿಸಿ ಸಮುದಾಯಕ್ಕೆ ಸೇರಿದವರಿಗೆ ಪ್ರಯೋಜನ ಲಭ್ಯವಾಗುತ್ತದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
"ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮತ್ತು ಅಂತಹ ಕುಟುಂಬಗಳನ್ನು ವಿಶ್ವಕರ್ಮ ಯೋಜನೆ ಮೂಲಕ ಸಬಲೀಕರಣಗೊಳಿಸಲಾಗುವುದು. ಇದು ಸುಮಾರು 13-15 ಸಾವಿರ ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ಆರಂಭವಾಗುವ ಯೋಜನೆಯಾಗಿದೆ," ಎಂದು ಪ್ರಧಾನಿ ಹೇಳಿದ್ದಾರೆ.
ವಿಶ್ವಕರ್ಮ ಯೋಜನೆ ಮಾಹಿತಿ
'ಪಿಎಂ ವಿಶ್ವಕರ್ಮ' ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕಲೆಗಾರರು ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ (ಮೊದಲ ಭಾಗ) ಮತ್ತು 2 ಲಕ್ಷ ರೂಪಾಯಿ (ಎರಡನೇ ಭಾಗ) ಶೇಕಡ 5ರಷ್ಟು ಬಡ್ಡಿದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಕಲೆ ಕಲಿಯಲು, ಬೇಕಾದ ವಸ್ತುಗಳಿಗೆ ಪ್ರೋತ್ಸಾಹ ನಿಧಿ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಈ ಯೋಜನೆಯು ಒದಗಿಸುತ್ತದೆ. ಮಾಹಿತಿಯ ಪ್ರಕಾರ ಹದಿನೆಂಟು ಸಾಂಪ್ರದಾಯಿಕ ವಹಿವಾಟುಗಳನ್ನು ಈ ಪಿಎಂ ವಿಶ್ವಕರ್ಮ ಅಡಿಯಲ್ಲಿ ಒಳಗೊಳ್ಳುತ್ತದೆ.
ಯಾವೆಲ್ಲ ಸಾಂಪ್ರದಾಯಿಕ ವಹಿವಾಟುಗಳು ಸೇರುತ್ತದೆ?
* ಬಡಗಿ
* ದೋಣಿ ತಯಾರಕ
* ರಕ್ಷಾಕವಚ ತಯಾರಕ
* ಕಮ್ಮಾರ
* ಸುತ್ತಿಗೆ ಮತ್ತು ಇತರೆ ಸಾಮಾಗ್ರಿ ತಯಾರಿಕ
* ಅಕ್ಕಸಾಲಿಗರು
* ಕಮ್ಮಾರ
* ಮೂರ್ತಿ ಮಾಡುವ ಶಿಲ್ಪಿ, ಕಲ್ಲು ಒಡೆಯುವವನು
* ಚಮ್ಮಾರ, ಪಾದರಕ್ಷೆ ತಯಾರಕ
* ಗಾರೆ ಮೇಸ್ತ್ರಿ
* ಬುಟ್ಟಿ/ ಚಾಪೆ/ ಹಿಡಿಸೂಡಿ ತಯಾರಿಕರು, ಸೆಣಬು ನೇಕಾರರು
* ಗೊಂಬೆ ಮತ್ತು ಆಟಿಕೆ ತಯಾರಕ (ಸಾಂಪ್ರದಾಯಿಕ)
* ಕ್ಷೌರಿಕ
* ಮಾಲೆ ತಯಾರಕ
* ಧೋಬಿ ಅಥವಾ ಮಡಿವಾಳ
* ಟೈಲರ್
* ಮೀನಿನ ಬಲೆ ತಯಾರಕ
"ಯೋಜನೆಯಡಿಯಲ್ಲಿ, ಎರಡು ರೀತಿಯ ಕೌಶಲ್ಯ ಕಾರ್ಯಕ್ರಮಗಳು ಇರುತ್ತವೆ - ಮೂಲಭೂತ ಮತ್ತು ಸುಧಾರಿತವಾಗಿರುತ್ತದೆ. ಹಾಗೆಯೇ ಕೌಶಲ್ಯ ತರಬೇತಿ ಪಡೆಯುತ್ತಿರುವ ಫಲಾನುಭವಿಗಳಿಗೆ ದಿನಕ್ಕೆ 500 ರೂಪಾಯಿ ಸ್ಟೇಫಂಡ್ ಅನ್ನು ಸಹ ನೀಡಲಾಗುತ್ತದೆ," ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಆಧುನಿಕ ಉಪಕರಣಗಳನ್ನು ಖರೀದಿಸಲು ಈ ಕುಶಲಕರ್ಮಿಗಳಿಗೆ 15,000 ರೂಪಾಯಿವರೆಗೆ ಬೆಂಬಲವನ್ನು ನೀಡಲಾಗುತ್ತದೆ. ಮೊದಲ ವರ್ಷದಲ್ಲಿ ಐದು ಲಕ್ಷ ಕುಟುಂಬಗಳು ಮತ್ತು 2024 ರಿಂದ 28 ರವರೆಗೆ ಐದು ವರ್ಷಗಳಲ್ಲಿ ಒಟ್ಟು 30 ಲಕ್ಷ ಕುಟುಂಬಗಳಿಗೆ ರಕ್ಷಣೆ ನೀಡಲಾಗುವುದು ಎಂದು ಕೂಡಾ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications